
ನಡುಗಡಲಿನ ಹಡಗು :
ಆಪರೇಷನ್ ಸ್ಲೀಪಿಂಗ್ ಲಿಲಿ - ನಾರ್ಕೋಟಿಕ್ಸ್ - ಇಂಟರ್ ಪೋಲ್. ನೌಕಾಪಡೆಯ ಗುಪ್ತಚರ ಇಲಾಖೆಯ ಯುವ ಅಧಿಕಾರಿ, ಮೆಲ್ಲೋಸ್ ದ್ವೀಪದಲ್ಲಿ ಡ್ರಗ್ಸ್ ಕಳ್ಳಸಾಗಣೆಯ ಸಂಚಿನ ಸುಳಿವು ಹಿಡಿದು ಹೊರಟಾಗ, ತಲುಪಿದ್ದು ಚಿಪ್ಸ್ ಮತ್ತು ಚಾಕೊಲೇಟ್ ತಯಾರಿಕಾ ಕಂಪನಿಯ ಮಾಲೀಕನ ಬಂಗಲೆಯನ್ನ. ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಿಂದ ಕಳ್ಳದಾರಿಯಲ್ಲಿ ಬರುತ್ತಿದ್ದ ಮಾದಕದ್ರವ್ಯದ ಮಾಲುಗಳು, ಮೆಲ್ಲೋಸ್ ದ್ವೀಪ ತಲುಪುತ್ತಿದ್ದಂತೆ ಕಾಣೆಯಾಗುತ್ತಿದ್ದವು. ಕಳ್ಳರನ್ನು ಸೆರೆಹಿಡಿಯುವ ಕೆಲಸದ ಜೊತೆ ಚಾಕೋಲೆಟ್ ಕಂಪನಿಯ ಮಾಲೀಕನ ಮಗಳ ಜೊತೆ ಚಿಗುರುವ ಪ್ರೇಮಕಥೆ ಬೇರೆ. ಆ ಸುಂದರಿ ಬರೀ ಮಾಲೀಕನ ಮಗಳೇ? ಡ್ರಗ್ಸ್ ಕಳ್ಳರು ಸಿಗುವರೇ? ಇವೆಲ್ಲದರ ಜೊತೆ ಯುವ ಅಧಿಕಾರಿಯ ಪ್ರೇಮ ಫಲಿಸುವುದೆ? ಅಷ್ಟಕ್ಕೂ ಆಪರೇಷನ್ ಸ್ಲೀಪಿಂಗ್ ಲಿಲಿ ಎಂದರೇನು?