Click here to Download MyLang App

ಟೊಮ್ಯಾಟೊ ಕೆಚಪ್(ಆಡಿಯೋ ಬುಕ್)

ಟೊಮ್ಯಾಟೊ ಕೆಚಪ್(ಆಡಿಯೋ ಬುಕ್)

audio book

ಪಬ್ಲಿಶರ್
ಡಾ. ಅಜಿತ್ ಹರೀಶಿ
ಮಾಮೂಲು ಬೆಲೆ
Rs. 90.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಓದಿದವರು: ಅಮೃತಾ ಶೆಟ್ಟಿ, ಶಿಕ್ಷಕಿ,ನಿರೂಪಕಿ, ಮುಂಬೈ

ಆಡಿಯೋ ಪುಸ್ತಕದ ಅವಧಿ : 3 ಗಂಟೆ 50 ನಿಮಿಷ

 

ಈ ಕಥಾಸಂಕಲನದಲ್ಲಿ 12 ವಿಭಿನ್ನ ಕಥೆಗಳಿವೆ.

ಈ ಕಥಾಲೋಕದಲ್ಲಿ ನಾರಣಕಾಕಾ, ಗೋಪಣ್ಣರಂಥ ಕಾಮಿಗಳಿದ್ದಾರೆ, ಸಾಬೀತು ಕಥೆಯ ಉಮಾಳಂಥ ದಿಟ್ಟೆಯರಿದ್ದಾರೆ, ಸೆಲೆಯ ಶೀನಣ್ಣನಂಥ ಭಗೀರಥರಿದ್ದಾರೆ. ಮಾನಸಿಕ ನೆಮ್ಮದಿ ಕಳಕೊಂಡ ಕಾದಂಬಿನಿಯಂಥ ಆಧುನಿಕಳಿದ್ದಾಳೆ. ಹೀಗೆ ಒಂದು ವಿಸ್ತೃತ ಮಾನವ ಲೋಕವೊಂದು ನಮ್ಮೆದುರು ಇಲ್ಲಿನ ಕಥೆಗಳಲ್ಲಿ ತೆರೆದುಕೊಳ್ಳುವ ರೀತಿ ಅನನ್ಯವಾಗಿದೆ. ಸಾವಧಾನವಾಗಿ ಕಥೆ ಹೇಳುತ್ತಲೇ ಅದರಾಚಿನ ಇನ್ನೇನನ್ನೋ ಹೊಳೆಯಿಸುವ ಪ್ರಯತ್ನವಿದೆ.

ಪ್ರೇಮ, ಕಾಮ, ಹಿಂಸೆ, ಕ್ರೌರ್ಯ, ಒಳಸಂಚು, ಪ್ರತಿಭಟನೆ.. ಇತ್ಯಾದಿಗಳ ನಡುವೆಯೇ ಅರಳಿಕೊಳ್ಳುವ,ಜೀವಚೈತನ್ಯ, ಸವಾಲನ್ನೆದುರಿಸುವ ಸಾಮರ್ಥ್ಯ ಮೊದಲಾದ ಮಾನವ ಲೋಕದ ಸಮಸ್ತ ಗುಣಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಯತ್ನದಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಈ ಕಥಾಸಂಕಲನವು-ಅಜಿತರು ಕನ್ನಡ ಕಥಾ ಕ್ಷೇತ್ರದಲ್ಲಿಗಟ್ಟಿಯಾಗಿ ನೆಲೆಯೂರಲಿದ್ದಾರೆ ಎಂಬುದನ್ನು ಸಾಬೀತು ಪಡಿಸುತ್ತದೆ.

 -ಸುಬ್ರಾಯ ಚೊಕ್ಕಾಡಿ.

 

ಈ ಪುಸ್ತಕ ಈಗ ಆಡಿಯೋ ಬುಕ್ ಆಗಿದೆ. ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.