Click here to Download MyLang App

ಜೋಡ್ಪಾಲ,  ಅನುಷ್ ಎ ಶೆಟ್ಟಿ,  Jodpala , jodbala,  Anush A Shetty,

ಜೋಡ್ಪಾಲ (ಇಬುಕ್)

e-book

ಪಬ್ಲಿಶರ್
ಅನುಷ್ ಎ ಶೆಟ್ಟಿ
ಮಾಮೂಲು ಬೆಲೆ
Rs. 135.00
ಸೇಲ್ ಬೆಲೆ
Rs. 135.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅನುಗ್ರಹ ಪ್ರಕಾಶನ


Publisher: Anugraha Prakashana

 

ಬರೆದವರು: 

ಅನುಷ್ ಶೆಟ್ಟಿ


“ಮೇಲೊಂದು ದೊಡ್ಡ Microscope ಇದೆ. ಯಾವುದೋ ಕಣ್ಣುಗಳು ನಮ್ಮನ್ನ ನೋಡ್ತಾ ಇವೆ. ನಾವು ಲ್ಯಾಬ್‌ನಲ್ಲಿ ಕೂತು Micro organisms ನೋಡಿದಂತೆ. ನಾವು ಅವನ್ನ ನೋಡೋದು ಅವಕ್ಕೆ ಹೇಗೆ ಗೊತ್ತಿಲ್ವೋ, ನಮ್ಮ ಜನಗಳಿಗೂ ಯಾರೋ ನಮ್ಮನ್ನು ನೋಡ್ತಿರೋದು ಗೊತ್ತಿಲ್ಲ....”

“ಶ್ರೀಮಂತಿಕೆ ಎಂದರೇನೆಂಬ ಅರಿವೇ ಇಲ್ಲದಿದ್ದಾಗ ಬಡತನದ ಬಗ್ಗೆ ಬೇಸರ ಹೇಗೆ ತಾನೆ ಬಂದೀತು?”

“ಕ್ಷಣ-ಕ್ಷಣಕ್ಕೂ ಅವಳ ಬರುವನ್ನು ಕಾದ. ಕೂತು ಕಾದ, ನಿಂತು ಕಾದ, ಗೆಜ್ಜೆ ನೋಡುತ್ತ ಕಾದ, ಹೂ ಕೀಳುತ್ತ ಕಾದ; ಒಬ್ಬ ಮನುಷ್ಯ ಹೇಗೆಲ್ಲಾ ಕಾಯಬಹುದೋ ಹಾಗೆಲ್ಲ ಕಾದ”

“ಪಶ್ಚಿಮ ಘಟ್ಟಗಳು.. Mining, satellite scanning, scientists, UNESCO – Western ghats ಉಳಿಸುವ ಪ್ರಯತ್ನ... ಆದರೆ ಇಲ್ಲಿರೋರು?”

“ರಾತ್ ಕಿ ರಾನಿ... ರಾತ್ರಿ ರಾಣಿ ಪರಿಮಳ ಒಬ್ಬೊಬ್ರಿಗೆ ಒಂದೊಂದು ಥರ ಹುಚ್ಚು ಹಿಡಿಸುತ್ತಂತೆ”

“This is the captain speaking... Ship has run a-ground... Do not panic... Ship will not sink...! I repeat...”

“ಮಿಂಚು ಹೊಡೆದಾಗಲೆಲ್ಲ ಹಡಗಿನ ಪ್ರತಿಯೊಂದು ಆಕಾರವೂ ಸ್ಪಷ್ಟವಾಗಿ ಗೋಚರಿಸಿ... ಕತ್ತಲಾವರಿಸುತ್ತಿತ್ತು... ಎಲ್ಲವನ್ನೂ ಕಬಳಿಸುವ ದೈತ್ಯ ಅಲೆಗಳು... ದೈತ್ಯ ಗಾಜೊಂದು ಎತ್ತರದಿಂದ ಬಿದ್ದು ಸಾವಿರಾರು, ಲಕ್ಷಾಂತರ, ಕೋಟ್ಯಾಂತರ ಚೂರುಗಳಾದಂತೆ ಚರ್ರನೆ ಚಿಮ್ಮಿ ಹಡಗು ಹತ್ತುತ್ತಿದ್ದವರ ಮೈಗೆ ಸೂಜಿಯಂತೆ ನಾಟುತ್ತಿದ್ದವು...”

ಇವಿಷ್ಟು ನಿದರ್ಶನಗಳು ಸಾಕಲ್ಲವೆ?

ಈ ಹುಡುಗ - ಅನುಷ್ ಆನಂದ ಶೆಟ್ಟಿ ಅವಸರದಲ್ಲಿದ್ದಾನೆ. ಇಪ್ಪತ್‌ನಾಲ್ಕನೇ ವಯಸ್ಸಿನಲ್ಲೇ ಮೂರನೇ ಕಾದಂಬರಿ ಬರೆದಿದ್ದಾನೆ. ಮೂರನ್ನೂ ನಾನು ಓದಿರುವೆ ಸಹೃದಯಿಗಳೇ! ಇದು ಜೋಡ್ಪಾಲ. ಸ್ವತಃ ತಾನು ವಿಹರಿಸುತ್ತಲೇ, ಓದುಗರನ್ನು ತಂತಮ್ಮ ಕಲ್ಪನಾಲೋಕದಲ್ಲಿ ವಿಸ್ತರಿಸಲು ಆಹ್ವಾನಿಸುತ್ತಾನೆ. ಪ್ರೀತಿ - ಪ್ರೇಮ - ವಿರಹ... ಪ್ರಾಮಾಣಿಕತೆ - ಮೋಸ - ವಂಚನೆ... ನಿಗೂಢತೆ - ಸತ್ಯಾಸತ್ಯ... ಪರೋಪಕಾರ - ಸ್ವಾರ್ಥ - ರಾಜಕೀಯ... ಜ್ಞಾನ - ವಿಜ್ಞಾನ - ವಿಶೇಷ ಜ್ಞಾನ... ಪ್ರಪಂಚ - ಪರಮಾರ್ಥ... ಅದ್ಹೇಗೋ ಚಿಕ್ಕ ವಯಸ್ಸಿನಲ್ಲೇ ಬಲ್ಲವನಾಗಿದ್ದಾನೆ.

ಕಳಕಳಿ - ಕಳವಳ - ಕಾಳಜಿಯಿಂದ - “ನಾ ಕಂಡ ಪರಿಸರವನ್ನು ಲೇಪಿಸಿ, ಈ ಪುಸ್ತಕದಲ್ಲಿ ತುಂಬಿ, ನಿಮ್ಮ ಕೈಗಿಡುತ್ತೇನೆ” ಅನ್ನುತ್ತಲೇ ಕಡೆಗೆ - “ಇವೆಲ್ಲ ಕೇವಲ ಕಲ್ಪನೆಗಳಲ್ಲ, ವಾಸ್ತವವೂ ಅಲ್ಲ” ಎನ್ನುವ ಒಗಟ!



-ಅನಂತನಾಗ್


ಹಿರಿಯ ನಟರು
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

 ಪುಟಗಳು: 180

 

 

ಅನುಷ್ ಶೆಟ್ಟಿ ಅವರ ಧ್ವನಿಯಲ್ಲಿ - ಜೋಡ್ಪಾಲ (ಕಥೆ ಶುರುವಾಗುವ ಮುನ್ನ)

 

 


Customer Reviews

Based on 1 review
0%
(0)
100%
(1)
0%
(0)
0%
(0)
0%
(0)
J
Jyothsna
ಉತ್ತಮ ಪ್ರಯತ್ನ

ಅನುಷ್ ಅವರ ಇತರ ಪುಸ್ತಕಗಳಿಗಿಂತ ಸಪ್ಪೆ ಎನಿಸಿತು. ಚೈನಿಸ್ ಕಂಪೆನಿಯ ಬಗ್ಗೆ ಇನ್ನೊಂದಿಷ್ಟು ವಿವರ ಬರೆಯಬಹುದಿತ್ತು ತುಂಬ ಅಜೆ೯ಂಟಿನಲ್ಲಿ ಬರೆದಂತೆ ಕಾಣುತ್ತದೆ