Click here to Download MyLang App

ವಲಸೆ ಹಕ್ಕಿಯ ಹಾಡು,    ನಾಗತಿಹಳ್ಳಿ ಚಂದ್ರಶೇಖರ,  Valase Hakkiya Haadu,  nagatihalli chandrashekhar,  nagatihalli chandrashekar,  Nagathihalli Chandrashekhar,  nagathihalli chandrashekar,

ವಲಸೆ ಹಕ್ಕಿಯ ಹಾಡು (ಇಬುಕ್)

e-book

ಪಬ್ಲಿಶರ್
ನಾಗತಿಹಳ್ಳಿ ಚಂದ್ರಶೇಖರ್
ಮಾಮೂಲು ಬೆಲೆ
Rs. 90.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ

Publisher: Abivyakti Samskrutika Vedike

 

ನಾಗತಿಹಳ್ಳಿ ತಮ್ಮ ಬರಹಗಳಲ್ಲಿ ಒಮ್ಮೆ ಕವಿಯಾಗಿ, ಇನ್ನೊಮ್ಮೆ ಕಥೆಗಾರನಾಗಿ, ಅಲ್ಲಿ ಇಲ್ಲಿ ಆತ್ಮಶೋಧಕನಾದ ಚಿಂತಕನಾಗಿ, ಮುಚ್ಚುಮರೆಯಿಲ್ಲದ ಪ್ರೇಮಿಯಾಗಿ ನಿರೀಶ್ವರವಾದಿಯಾಗಿದ್ದೂ ತಾಯಿ-ತಂದೆಯ ಪ್ರೀತಿಗಾಗಿ ತನ್ನ ಹಳ್ಳಿಯಲ್ಲಿ ದೇವರ ಮಂಟಪ ಕಟ್ಟಿಸುವವನಾಗಿ ನಮಗೆ ಎದುರಾಗುತ್ತಾರೆ. ಈತ ನಮ್ಮ ಕಾಲದ ಚುರುಕಾದ ಕಣ್ಣಿನ, ಚುರುಕಾದ ಮಾತಿನ ಆಕರ್ಷಕ ಬರಹಗಾರ. ಕನ್ನಡ ಓದುಗರನ್ನು ಮಹತ್ವದ ಕೊಡುಗೆಗೆ ಕಾಯಿಸುತ್ತಿರುವ ಬರಹಗಾರ. ಇವರು ತೆರೆದಿಡುವ ಶೋಧಕ ಚಿಂತನಾಶೀಲತೆ ಇವರನ್ನು ಕಾಪಾಡುತ್ತದೆ ಎಂಬ ಭರವಸೆ ಈ ಕೃತಿಯ ನಿವೇದನೆಗಳಲ್ಲಿ ಎದ್ದುಕಾಣುವ ಗುಣ.

- ಯು.ಆರ್. ಅನಂತಮೂರ್ತಿ

ನಾಗತಿಹಳ್ಳಿ ಚಂದ್ರಶೇಖರ್ ನಮ್ಮ ನಾಡಿನ ಶ್ರೇಷ್ಠ ಪ್ರತಿಭೆಗಳಲ್ಲಿ ಒಬ್ಬರು. ಎಲ್ಲರಿಗಿಂತ ಭಿನ್ನವಾದ ಪ್ರತಿಭೆ ಉಳ್ಳವರು. ತನ್ನದೇ ಆದ ಗದ್ಯ ಶೈಲಿಯನ್ನು ರೂಪಿಸಿಕೊಂಡು ಕತೆಗಳನ್ನು ರಚಿಸಿದವರು. ಈತ ನಮ್ಮ ಕನ್ನಡದ ಅತ್ಯುತ್ತಮ ಕಥನಕಾರರಾದ ತೇಜಸ್ವಿ, ಲಂಕೇಶರಂತೆ ತನ್ನ ಶೈಲಿಯಿಂದಲೇ ಮೆಚ್ಚುಗೆಯಾಗುವ ಕತೆಗಾರ.

- ಡಾ. ಚಂದ್ರಶೇಖರ ಕಂಬಾರ

ಹೆಂಗರುಳಿನ ಗಂಡೆದೆಯ ನಾಗತಿಹಳ್ಳಿ, ಸದಾ ಚಿಗುರು ಮೀಸೆ ಕೆಳಗೆ ಮುಗುಳ್ನಗೆಯ ಜಿನುಗುವಾತ. ಅಕ್ಷರಗಳಿಗೆ ತುಂಟ ಕಂಗಳನ್ನು ಮುಡಿಸುವಾತ. ಒದ್ದೆ ತುಟಿಗಳಿಗೆ ಪ್ರೇಮದ ಓನಾಮ ಕಲಿಸುವಾತ. ಹಿಡಿ ಕತೆಗಳ ದ್ವಾರ ನಾಡ ತುಂಬ ಮೆರೆದಾತ.

- ಕು. ವೀರಭದ್ರಪ್ಪ

ನಾಗತಿಹಳ್ಳಿಯವರ ಸಮಾಜ ಪ್ರೀತಿ ಅವರ ಬರವಣಿಗೆಯಲ್ಲಿ ಮಡುಗಟ್ಟಿದೆ. ಅವರ ಆರೋಗ್ಯಪೂರ್ಣ ಚಿಂತನೆ ಓದುಗರನ್ನು ಜಾಗೃತಿಗೊಳಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿಯ ಬರವಣಿಗೆಯನ್ನು ಓದಿದಾಗ ಉಂಟಾಗುವ ಸಂತೋಷಕ್ಕೆ ಪಾರವಿಲ್ಲ.

- ಡಾ. ಸಿದ್ಧಲಿಂಗಯ್ಯ 

 

ನನ್ನಂತವನಿಗೆ ಏನೇನು ಕನಸುಗಳು, ಆಸೆಗಳು ಇದ್ದವೋ ಅಂತಹ ಎಲ್ಲ ಕನಸುಗಳನ್ನು, ಆಸೆಗಳನ್ನು ವಾಸ್ತವಕ್ಕಿಳಿಸಿದ ಸಾಧಕನಾಗಿ ಚಂದ್ರು ನನಗೆ ಕಾಣಿಸುತ್ತಾರೆ. ವಲಸೆ ಹಕ್ಕಿಯ ಹಾಡು ಕಾದಂಬರಿಯ ನಾಯಕ ಕೆಂಚೇಗೌಡ ಕೇವಲ ಆದರ್ಶ ಪುರುಷನಲ್ಲ. ನನಗೆ ಯಾವಾಗಲು ಕಾಡುವಂತಹ ಪಾತ್ರ. ಚಂದ್ರು ಬಡತನವನ್ನು ಬಹಳ ಸೃಷ್ಟಿಶೀಲ ಗುಣವೆಂದು ಭಾವಿಸಿಕೊಂಡವರು. ಹಣ ಬಂದಾಗ ತಾನು ಬಡವನಾಗಿದ್ದೆ ಎಂಬುದನ್ನು ಮರೆತಿಲ್ಲ. ಬಡವನಾದಾಗ ತಾನು ಶ್ರೀಮಂತನಾಗುತ್ತೀನಿ ಅನ್ನುವ ಕನಸು ಬಿಟ್ಟಿಲ್ಲ. ಹೀಗೆ ಆರು ದಶಕದ ಬದುಕಿನ ಯಾತ್ರೆಯನ್ನು ನಡೆಸಿಕೊಂಡು ಬಂದಿರುವ ಇವರು ಯುವಕರಿಗೆ ಆದರ್ಶವಾಗಿ ಕಾಣುತಿದ್ದಾರೆ.

- ಪ್ರೊ. ಎಂ ಕೃಷ್ಣೇಗೌಡ

ವಲಸೆ ಹಕ್ಕಿಯ ಹಾಡು ಕಾದಂಬರಿಯ ಕೆಂಚೇಗೌಡ ಗಾಂಧಿವಾದಿಯ ಪಾತ್ರ. ನೊಂದವರ ಪರವಾಗಿ ಮೃದು ಹೃದಯವನ್ನು ಉಳ್ಳವನಾದ ಕೆಂಚೇಗೌಡ ಸ್ವತಂತ್ರನೆಂಬ ತನ್ನ ಮಗನ ಕಾರಣಕ್ಕಾಗಿ ದುರಂತಕ್ಕೀಡಾಗುತ್ತಾನೆ. ಸ್ವತಂತ್ರನೆಂಬ ಹೆಸರೇ ಸಂಕೇತವಾಗಿದ್ದು, ವ್ಯಕ್ತಿಯೊಬ್ಬನ ಆಧುನಿಕ ಯುಗದ ಸ್ವಾತಂತ್ರ್ಯ, ರಾಜಕಾರಣದ ಬಯಕೆಯನ್ನು ವ್ಯಂಗ್ಯವೆಂಬಂತೆ ನೋಡಲಾಗಿದೆ.

- ಡಾ. ಎಚ್.ಎಲ್. ಪುಷ್ಪ

 

ಪುಟಗಳು: 96

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
ವ
ವಿಧಿ
ತುಂಬಾ ಚಂದದ ನಿರೂಪಣೆ. ಒಂದು ಅರ್ಥಪೂರ್ಣ ಕಥೆ.

ತುಂಬಾ ಚಂದದ ನಿರೂಪಣೆ. ಒಂದು ಅರ್ಥಪೂರ್ಣ ಕಥೆ. ಓದುತ್ತಾ ಸಮಯ ಹೋಗಿದ್ದು ತಿಳಿಯಲೇ ಇಲ್ಲ. ಓದುತ್ತಾ ಓದುತ್ತಾ ಕೆಂಚೆಗೌಡರು ನಮ್ಮೊಳಗೆ ಒಬ್ಬರಾಗಿ ಹೋಗುತ್ತಾರೆ. ಈಗಲೂ ಸಹ ನಮ್ಮ ಸುತ್ತಲೂ ಸ್ವತಂತ್ರ್ಯ ನ ಹಾಗೆ ಪಂಡ್ರಿಯಂತಹ ಜನರನ್ನು ನೋಡುತ್ತಲೇ ಇರುತ್ತೇವೆ. ಅಂತಹ ಒಂದು ಸಣ್ಣ ಝಲಕ್ ಈ ಕಥೆ

N
Nayaz Riyazulla
ನಮ್ಮ ದೇಶದ ಸ್ವಾತಂತ್ರ ನಂತರದ ಬದುಕಿನ ರೂಪಕ ಕಥೆ

ಅಪ್ಪ ಗಾಂಧಿವಾದಿಯಾಗಿ, ಮಗ ತದ್ವಿರುದ್ಧವಾಗಿ ಬದುಕುವ ವಸ್ತುವನ್ನು ಆಧಾರಿಸಿ ಅನೇಕ ಕಥೆಗಳು ಮೂಡಿ ಬಂದಿವೆ, ಬಹು ಜನಪ್ರಿಯವಾದದ್ದು ಆರ್ ಕೆ ನಾರಾಯಣ್ ರವರ "The vendor of Sweets"... ಅದಕ್ಕೂ ಚಂದವಾದ ಕಥೆಯೊಂದು ನಾನು ಓದಿದ್ದರೆ ಅದು ಖಂಡಿತವಾಗಿ "ವಲಸೆ ಹಕ್ಕಿಯ ಹಾಡು"

ಇದು ಒಬ್ಬ ಸ್ವಾತಂತ್ರ ಹೋರಾಟಗಾರ, ಗಾಂಧಿಯ ಅನುಯಾಯಿಯ ಕಥೆ, ಒಂದು ಊರಿನಲ್ಲಿ ದೇಶದ ಬಗ್ಗೆ ನಿರಭಿಮಾನ ತುಂಬಿಕೊಂಡಿರುವ ಜನರು, ಆ ಜನರ ಮದ್ಯೆ ದೇಶದ ಬಗ್ಗೆ ಅಪ್ರತಿಮ ಅಭಿಮಾನ ಹೊಂದಿರುವ ಒಬ್ಬ ವಿದ್ಯಾವಂತ ಹೆಸರು ಕೆಂಚೆಗೌಡ, ಕೆಂಚೆಗೌಡನ ಮಗ ಹುಟ್ಟಿದ್ದು ಆಗಸ್ಟ್ 15, ಹೆಸರು ಸ್ವತಂತ್ರ ಆದರೆ ದುಷ್ಟ, ಊರವರಿಗೆ ಇಲ್ಲದ ಸಲ್ಲದ ವ್ಯಸನಗಳನ್ನು ಕಲಿಸಿ ಅವರ ಓಟುಗಳಿಂದ ಶಾಸಕನಾಗುತ್ತಾನೆ... ಜನ ಶಾಸಕನನ್ನು ಮೆರಸಿ, ಗಾಂಧಿವಾದಿಯನ್ನು ಮರೆತು ಹುಚ್ಚನೆಂಬ ಪಟ್ಟ ಕಟ್ಟುತ್ತಾರೆ...

ನಮ್ಮ ದೇಶದ ಸ್ವಾತಂತ್ರ ನಂತರದ ಚಿತ್ರಣವನ್ನು ಒಂದು ಊರಿನ ಚೌಕಟ್ಟಿನಲ್ಲಿ ಬಹಳ metaphorical ಆಗಿ ಹೇಳಿರುವ ಕಾದಂಬರಿ...

ಕೆಲ ಸನ್ನಿವೇಶಗಳು ಬಹು ಅದ್ಭುತವಾಗಿ ಕಟ್ಟಿದ್ದಾರೆ ಲೇಖಕರು. ಉದಾ:
1. ಲಾಹೋರ್ ನಲ್ಲಿ ಗಲಭೆ ಉಂಟಾಗಿ ಇಡೀ ಪಟ್ಟಣವೇ ಬೆಂಕಿಯಲ್ಲಿ ಬೆಂದು ಹೋಗುತ್ತಿರುವಾಗ ಒಬ್ಬ ಪ್ರೇಮಿ ಎಲ್ಲವನ್ನು ಮರೆತು ತನ್ನ ಪ್ರಿಯತಮೆಯನ್ನು ನೆನಿಸಿಕೊಂಡು ಘಝಲ್ ಒಂದನ್ನು ಓದುತ್ತಿರುತ್ತಾನೆ.

2. ಕೆಂಚೆಗೌಡರು, ತಮ್ಮ ಹೆಂಡತಿಯ ಸಮಾಧಿಯನ್ನು ನೋಡಲು, ಶುಚಿಗೊಳಿಸಲು ವಾರಕ್ಕೆ ಒಮ್ಮೆ ಜುಬ್ಬಾ ಹಾಕಿಕೊಂಡು ಬರುವ ಸನ್ನಿವೇಶ

3. ಪಂಚಾಯಿತಿ ಸನ್ನಿವೇಶಗಳು.
ಎಲ್ಲವು ಮನಕ್ಕೆ ಹತ್ತಿರವಾಗುವಷ್ಟು ಚಂದ ವಾಗಿ ಹೇಳಿದ್ದಾರೆ...

ಗಾಂಧಿಯ ಅನುಯಾಯಿಗಳನ್ನು ಕಂಡ ಕೊನೆಯ ಸಂತತಿ ನಮ್ಮದೇ, ಇಂತಹ ವ್ಯಕ್ತಿಯನ್ನು ಎಲ್ಲೋ ನೋಡಿ ಮರೆತ ನಮ್ಮನ್ನು ನೆನಸಿಕೊಳ್ಳುವಂತೆ ಪ್ರಚೋದಿಸುವ ಪುಸ್ತಕ... A very GOODREAD