Click here to Download MyLang App

ಸಂಗ್ರಹ: ಮಧು ವೈ.ಎನ್

ಹೊಸ ತಲೆಮಾರಿನ ಬರಹಗಾರರಲ್ಲಿ ತಮ್ಮದೇ ಶೈಲಿಯಲ್ಲಿ ಬರೆಯುತ್ತ ಯುವ ಓದುಗರನ್ನು ಸೆಳೆಯುತ್ತಿರುವ ಬರಹಗಾರ ಮಧು ವೈ.ಎನ್ ಅವರ ಎರಡು ಚೆಂದದ ಪುಸ್ತಕಗಳು ಈಗ ಮೈಲ್ಯಾಂಗ್ ಅಲ್ಲಿ ಇಬುಕ್ ರೂಪದಲ್ಲಿ ದೊರೆಯುತ್ತಿವೆ. 

ಮಧು ವೈ ಎನ್ ತುಮಕೂರು ಜಿಲ್ಲೆಯವರು. ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ. ಬಿಟ್ಸ್ ಪಿಲಾನಿಯಿಂದ ಸಾಫ್ಟವೇರ್ ಸಿಸ್ಟಮ್ಸ್‌ನಲ್ಲಿ ಮಾಸ್ಟರ್ಸ್ ಡಿಗ್ರಿ. ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭ. ಸದ್ಯಕ್ಕೆ ಐಬಿಎಮ್ ಉದ್ಯೋಗಿ. ಬೆಂಗಳೂರಿನಲ್ಲಿ ವಾಸ.

ಇವರ ಹಲವಾರು ಕತೆಗಳು ಕನ್ನಡದ ಪ್ರಮುಖ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. ಚೊಚ್ಚಲ ಕೃತಿ ‘ಕಾರೇಹಣ್ಣು’ 2019ರ ‘ಈ ಹೊತ್ತಿಗೆ ಕಥಾ ಸಂಕಲನ ಪ್ರಶಸ್ತಿ’ ಪಡೆದಿದೆ. ಎರಡನೆಯ ಕಥಾ ಸಂಕಲನ ‘ಫೀಫೋ’ ಹೊಸ ಮಾದರಿಯ ಕತೆಗಳ ಗುಚ್ಛವೆಂದು ಗುರುತಿಸಿಕೊಂಡಿದೆ. ಇವರ ‘ಕನಸೇ ಕಾಡುಮಲ್ಲಿಗೆ’ ಕನ್ನಡದಲ್ಲಿ ವಿರಳಾತಿವಿರಳವಾಗಿರುವ ಯಂಗ್ ಅಡಲ್ಟ್ ಮಾದರಿಯ, ಹಾಸ್ಯ-ಪ್ರಣಯ ಮಿಶ್ರಿತ ಲವಲವಿಕೆಯ ಕಾದಂಬರಿಯೆಂದು ಓದುಗರ ಪ್ರೀತಿಗೆ ಪಾತ್ರವಾಗಿದೆ. ‘ಡಾರ್ಕ್‌ವೆಬ್’ ಕೃತಿ  ತಂತ್ರಜ್ಞಾನದ ಸಂಗತಿಗಳನ್ನು ಕಥಾ ಮಾದರಿಯಲ್ಲಿ ಪ್ರಸ್ತುತಪಡಿಸಿರುವ ಕನ್ನಡದ ಮೊದಲ ತಂತ್ರಜ್ಞಾನ ಪುಸ್ತಕವೆಂದು ಮೆಚ್ಚುಗೆ ಪಡೆದಿದೆ. ಅದೇ ಮಾದರಿಯ ಹೊಸ ಪುಸ್ತಕ ‘ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಸರಳಗನ್ನಡದಲ್ಲಿ’  ಕನ್ನಡದಲ್ಲಿ ಎಐ ಬಗ್ಗೆ ಮೂಡಿ ಬಂದಿರುವ ಪ್ರಥಮ ಕೃತಿಯಾಗಿ ಗಮನ ಸೆಳೆದಿದೆ.
ಇವರು ಸದ್ಯಕ್ಕೆ ವಿಜಯಕರ್ನಾಟಕ ಪತ್ರಿಕೆಗೆ ‘ಟೆಕ್‌ಪೋಸ್ಟ್’ ಎಂಬ ಅಂಕಣದಲ್ಲಿ ಎರಡು ವಾರಕ್ಕೊಮ್ಮೆ ವಿಜ್ಞಾನ ತಂತ್ರಜ್ಞಾನ ಕುರಿತಾಗಿ ಲೇಖನಗಳನ್ನು ಬರೆಯುತ್ತಿರುವರು.     

ಅವರನ್ನು madhusudanayn@gmail.com  ಮಿಂಚೆ ವಿಳಾಸದ ಮೂಲಕ ಸಂಪರ್ಕಿಸಬಹುದು.  ಅವರು ಫೇಸ್ ಬುಕ್ ಅಲ್ಲಿ madhusudana.yn ಮತ್ತು ಇನ್‍ಸ್ಟಾಗ್ರಾಂ ಅಲ್ಲಿ madhu.yn ಅನ್ನುವ ಹ್ಯಾಂಡಲ್ ಅಲ್ಲಿ ಸಿಗುತ್ತಾರೆ.  

2 ಪುಸ್ತಕಗಳು
  • ಕನಸೇ ಕಾಡುಮಲ್ಲಿಗೆ
    ಕನಸೇ ಕಾಡುಮಲ್ಲಿಗೆ
    ಪಬ್ಲಿಶರ್
    Madhu YN
    ಮಾಮೂಲು ಬೆಲೆ
    Rs. 199.00
    ಸೇಲ್ ಬೆಲೆ
    Rs. 199.00
    ಬಿಡಿ ಬೆಲೆ
    ಇಶ್ಟಕ್ಕೆ 
  • ಕಾರೇ ಹಣ್ಣು
    ಕಾರೇ ಹಣ್ಣು
    ಪಬ್ಲಿಶರ್
    Madhu YN
    ಮಾಮೂಲು ಬೆಲೆ
    Rs. 75.00
    ಸೇಲ್ ಬೆಲೆ
    Rs. 75.00
    ಬಿಡಿ ಬೆಲೆ
    ಇಶ್ಟಕ್ಕೆ