Click here to Download MyLang App

ಒಂಟಿ ಟೊಂಗೆಯ ಲಾಂದ್ರ (ಇಬುಕ್)

ಒಂಟಿ ಟೊಂಗೆಯ ಲಾಂದ್ರ (ಇಬುಕ್)

e-book

ಪಬ್ಲಿಶರ್
ಶ್ರೀ ತಲಗೇರಿ
ಮಾಮೂಲು ಬೆಲೆ
Rs. 39.00
ಸೇಲ್ ಬೆಲೆ
Rs. 39.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಕಾಡಿನಲಿ‌ ಕರೆದೆ ದೇವರನು, ಭುಸ್ಸೆಂದಿತು ಹಾವು
ಕೂತು ಕೂಗಿದೆ ಊರ ಮಧ್ಯದಲಿ‌
ಒಂದಿಬ್ಬರು ಕರೆದೆಯಾ ಅಂದರು
ದೇವರಾಗುವುದಿಲ್ಲವಲ್ಲಾ ಹೆಸರಿಟ್ಟುಕೊಂಡ ಮಾತ್ರಕ್ಕೆ
ನಗರದ ಎದೆಯಲ್ಲೇನಾದರೂ ಕೂತಿರಬಹುದಾ
ನೋಡಲಿಕ್ಕೆ ಇಲ್ಲಿ‌ ಕಣ್ಣುಗಳು ಸಂಧಿಸುವುದಿಲ್ಲ
ಬರೀ ಬೆಳಕಿನ ವ್ಯಾಪಾರ, ದೇವರು ತೇಜಿಯಾಗಿದ್ದಾನೆ

ಕಾಲವನು ಮತ್ತೆ ಜೋಡಿಸಿದೆ ಅಂಗೈಲಿಟ್ಟು
ದೇವರು ಸಿಗುವುದಿಲ್ಲ ಬಿಡು ಇಂಥ ಹುಡುಕಾಟದಲಿ
ಆತನೋ ಆಕೆಯೋ; ನಮ್ಮಂತೆಯೇ ದೇವರು?
ಇರಬಹುದು ಪೂರ ವಿರಾಗಿ, ಭೈರಾಗಿ
ಹೌದಲ್ಲಾ, ತನ್ನಿರುವ ಚೂರು ಚೂರೇ ಬಿಟ್ಟು

ಕಳೆದುಹೋದವ ಇದೇ ಜಂಗುಳಿಯ ಮಧ್ಯ
ಇಲ್ಲೀಗ ಈ ಮರಗಳ ಕೆಳಗೆ ಕೂತವರೆಲ್ಲಾ
ಮುಂದೇನಾಗುವರು!

 

ವೃತ್ತಿಯಿಂದ ಸಾಫ್ಟವೇರ್ ಇಂಜಿನಿಯರ್ ಆಗಿರುವ ಶ್ರೀ ತಲಗೇರಿ ಅವರ ಮೊದಲ ಕವನ ಸಂಕಲನದಲ್ಲಿ ಇಂತಹ ಚೆಂದದ, ಮನಕ್ಕೆ ತಾಕುವ, ಎದೆಗೆ ನಾಟುವ ಹಲವು ಕವಿತೆಗಳಿವೆ.  ಮೈಲ್ಯಾಂಗ್ ಅಲ್ಲಿ ಬಿಡುಗಡೆಯಾದ ದಿನದಿಂದಲೂ ಹಲವು ಓದುಗರು ಕೊಂಡು ಮೆಚ್ಚಿರುವ ಹೊಸ ಹುಡುಗನ ಕವನ ಸಂಕಲನ ಇದಾಗಿದೆ.  ಶ್ರೀ ಹೇಳುವಂತೆ "ನಿಸರ್ಗದ ನವಿರು ಸಂಭಾಷಣೆಗೆ ಕಿವಿಯಾಗಿ, ನಗರದ ಚಲನಶೀಲತೆಗೆ ಕಣ್ಣಾಗಿ, ಆ ಕ್ಷಣಕ್ಕೆ ಸಿಗಬಹುದಾದ ಸಾದಾ ಬದುಕಿನ ತಾಜಾ ವಿವರಗಳನ್ನ ಹಿಡಿದಿಟ್ಟು, ಕವಿತೆಯೊಂದಿಗೆ ಅನುಸಂಧಾನಗೈಯುವ ಪ್ರಯತ್ನದ ಕೃತಿ" ಇದಾಗಿದೆ.

 

ಪುಟಗಳು: 80

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !