Click here to Download MyLang App

  ಬೆಸ್ಟ್‌ ಆಫ್‌ ಡುಂಡಿ,    ಎಚ್. ಡುಂಡಿರಾಜ್,  Dundiraj,    Best Of Dundi,

ಬೆಸ್ಟ್‌ ಆಫ್‌ ಡುಂಡಿ (ಇಬುಕ್)

e-book

ಪಬ್ಲಿಶರ್
ಎಚ್. ಡುಂಡಿರಾಜ್
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ನನ್ನ ಆಯ್ದ ಹನಿಗವನಗಳ ಸಂಗ್ರಹ 'ಬೆಸ್ಟ್ ಆಫ್ ಡುಂಡಿ' ಇದರ ಇ ಬುಕ್ ಮತ್ತು ಆಡಿಯೊ ಬುಕ್ ಆವೃತ್ತಿ ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಪ್ರೈ.ಲಿ ಮೂಲಕ ಹೊರಬರುತ್ತಿರುವುದು ತುಂಬಾ ಸಂತೋಷದ ಸಂಗತಿ. ನನ್ನ ಮೊದಲ ಹನಿಗವನ ಸಂಕಲನ 'ಪಾಡ್ಯ ಬಿದಿಗೆ ತದಿಗೆ' 1985 ರಲ್ಲಿ ಪ್ರಕಟವಾಗಿತ್ತು. ಆ ನಂತರ ಕಳೆದ 35 ವರ್ಷಗಳಲ್ಲಿ ನನ್ನ 17 ಹನಿಗವನ ಸಂಕಲನಗಳು ಪ್ರಕಟವಾಗಿವೆ. ಇಲ್ಲಿಯವರೆಗೆ ನಾನು 4500ಕ್ಕೂ ಹೆಚ್ಚು ಹನಿಗವನಗಳನ್ನು ಬರೆದಿರುವೆ. ಈ ಸಂಗ್ರಹದ ವೈಶಿಷ್ಟ್ಯವೆಂದರೆ ಇದೇ ಮೊದಲ ಬಾರಿಗೆ ನನ್ನ ಹನಿಗವನಗಳು ಇ ಬುಕ್ ಮತ್ತು ಆಡಿಯೊ ಬುಕ್ ರೂಪದಲ್ಲಿ ಬರುತ್ತಿವೆ. ಇಲ್ಲಿರುವ ಇನ್ನೂರು ಹನಿಗವನಗಳನ್ನು ನಾನೇ ಆಯ್ಕೆ ಮಾಡಿ ನಾನೇ ವಾಚನ ಮಾಡಿದ್ದೇನೆ.

ಕಳೆದ ನಾಲ್ಕು ದಶಕಗಳಿಂದ ನನ್ನ ಹನಿಗಾರಿಕೆ ನಿರಂತರವಾಗಿ ನಡೆದು ಬರಲು ಕಾರಣ ಕನ್ನಡದ ಓದುಗರು ನೀಡಿದ ಪ್ರೋತ್ಸಾಹ. ಇದಕ್ಕಾಗಿ ಓದುಗ ಬಂಧುಗಳಿಗೆ ನಾನು ಚಿರಋಣಿ. ಈಗ ಡಿಜಿಟಲ್ ಹಾಗೂ ಆಡಿಯೊ ಆವೃತ್ತಿಯಲ್ಲಿ ಬರುತ್ತಿರುವ ಈ ಸಂಕಲನವೂ ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಭಾವಿಸುತ್ತೇನೆ. 

-ಎಚ್.ಡುಂಡಿರಾಜ್

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 5 reviews
100%
(5)
0%
(0)
0%
(0)
0%
(0)
0%
(0)
J
JM Mallikarjunaiah
Excellent Reading.

The book keeps engaged so well once start you’ll not pause till completed. Wit, humour and knowledge reflecting life enriches your thinking while gives you a joyful reading.

ಅನಂತ ಕುಮಾರ್

ಚೆನ್ನಾಗಿದೆ

ಭಾಸ್ಕರ ಹೆಬ್ಬಾರ
ಹನಿ ರಸಿಕರು ಓದಲೇ ಬೇಕಾದ್ದು

ಡುಂಡಿರಾಜರ ಹನಿ ಕಡಲಿಂದ ಆರಿಸಿದ ಮುತ್ತುಗಳು. ಅವರ ಪುಸ್ತಕಗಳನ್ನು ಓದಿದವರಿಗೆ ಅದರ ಅರಿವಿರಬಹುದು. ಇನ್ನೂರು ಬೆಸ್ಟ್ ಹನಿಗವನಗಳನ್ನು ರಚಯಿತರ ದನಿಯಲ್ಲಿ ಕೇಳುವ ಆನಂದ ಬೇರೆಯೇ . ಇಲ್ಲಿನ ಹೆಚ್ಚಿನ ಹನಿಗಳನ್ನು ನನ್ನಂಥ ಅಭಿಮಾನಿ ಓದುಗರು ಅಲ್ಲಲ್ಲಿ ಬಳಕೆ ಮಾಡಿ ಗಿಟ್ಟಿಸಿಕೊಂಡಿರಬಹುದು. ಅಂತಹ ಗುಣವಂತ ಮುತ್ತುಗಳು. ಮೊದಲ ಸಲ ಕೇಳುವವರು ಓದುವುದೇ ಉತ್ತಮ ಆದಷ್ಟು ಜನಕ್ಕೆ ತಲುಪಬೇಕಾದದ್ದು ಇದು.

ಸಾತ್ವಿಕ್
ಪ್ರಸಿದ್ಧ ಹನಿಗಳು ಸೇರಿಕೊಂಡಿಲ್ಲ☺️

ಡುಂಡಿಯವರ ಎಲ್ಲ ಕವನಗಳನ್ನು
ಮಾಡಿಲ್ಲ ಆಯ್ಕೆ
ಬಿಟ್ಟುಹೋದ ಕವಿತೆಗಳು
ಮುಂದಿನ ಭಾಗಕ್ಕೆ?

V
Vasant Shetty
ಸೊಗಸಾಗಿದೆ !

ಡುಂಡಿರಾಜ್ ಅವರೇ ಆಯ್ಕೆ ಮಾಡಿರುವ 200 ಹನಿಗವನ ನಿಜಕ್ಕೂ ಸೊಗಸಾಗಿದೆ.