ಕನ್ನಡ ಇಬುಕ್ಸ್ ಹಾಗೂ ಆಡಿಯೋ ಬುಕ್ಸ್ ಓದಿ, ಕೇಳಿ ನಿಮ್ಮ ಮೊಬೈಲಿನಲ್ಲೇ!

ಬಕುಲದ ಬಾಗಿಲಿನಿಂದ

ಬಕುಲದ ಬಾಗಿಲಿನಿಂದ

e-book
ಪಬ್ಲಿಶರ್
ಸುಧಾ ಆಡುಕಳ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

GET FREE SAMPLE

ಬಕುಲದ ಬಾಗಿಲಿನಿಂದ- ನೀವು ಹೊಕ್ಕು ನೋಡಲೇಬೇಕಾದ ಲೋಕ. ಇಲ್ಲಿ ನಿಟ್ಟುಸಿರಿದೆ, ನಿಲೆ ಹಾಕಿ ಕೇಳುವ ಧೈರ್ಯವಿದೆ, ಬದುಕಿನ ಬಗ್ಗೆ ಹುಮ್ಮಸ್ಸಿದೆ. ಪ್ರಶ್ನಿಸುವ ಮನಸ್ಸಿದೆ. ಇಲ್ಲಿ ರಾಧೆ, ಕುಂತಿ, ಮಾದ್ರಿ, ಅಂಬೆ, ಅವಧೇಶ್ವರಿಯರಿದ್ದಾರೆ. ಅಂತೆಯೇ ಅಮೃತಾ ಪ್ರೀತಮ್, ಮಾಧವಿ, ಕುಬ್ಜೆ ಮಾಲಿನಿ, ಮಣಿಪುರದ ಚಿತ್ರಾ ಸಹಾ ಇದ್ದಾರೆ. ಸೀತೆ ಹಾಗೂ ಅವಳ ಸಹಚಾರಿಗಳಿದ್ದಾರೆ. ಕಾಯುತ್ತಲೇ ಇರುವ ಊರ್ಮಿಳೆಯರಿದ್ದಾರೆ. ಕಾಣೆಯಾಗುತ್ತಿರುವ ಶಾಂತಲೆಯರಿದ್ದಾರೆ. ಗೊರವನ ಬೆನ್ನಟ್ಟಿದ ಅಕ್ಕ ಇದ್ದಾಳೆ. ಕಲ್ಲಾದ ಅಹಲ್ಯೆಯರಿದ್ದಾರೆ. ಮಧ್ಯರಾತ್ರಿ ಎದ್ದು ಹೋದ ಗೌತಮರನ್ನು ನೋಡಿದ ಅನೇಕ ಯಶೋಧರೆಯರಿದ್ದಾರೆ, ಮೊಲೆಯನ್ನೇ ಕುಯ್ದು ಕೈಗಿಟ್ಟ ನಂಗೇಲಿಯರಿದ್ದಾರೆ. ಶಚೀತೀರ್ಥದಲ್ಲಿ ಉಂಗುರ ಕಳೆದುಕೊಂಡ ಶಕುಂತಳೆಯರಿದ್ದಾರೆ. ಐವರ ಹೆಂಡತಿಯಾಗಿಯೂ ಆತ್ಮ ಸಂಗಾತಕ್ಕೆ ಹಲುಬಿದ ದ್ರೌಪದಿಯರಿದ್ದಾರೆ. ಕತ್ತಲೆಯನ್ನು ಜೀವನದುದ್ದಕ್ಕೂ ಹಾಸಿಕೊಂಡ ಗಾಂಧಾರಿಯರಿದ್ದಾರೆ. ಯೋನಿ ಛೇಧನದ ವಿರುದ್ಧ ಆಂದೋಲನ ಕಟ್ಟಿದ ವಾರಿಯರ್ಸ್ ಗಳಿದ್ದಾರೆ. ಹೊಸ ಋತುಮಾನಕ್ಕೆ ನಾಂದಿ ಹಾಡಿದ ನಂದಿನಿಯರಿದ್ದಾರೆ. ಕವಿ ರವೀಂದ್ರರು ಆ ಕಾಲಕ್ಕೇ ಕೆತ್ತಿಕೊಟ್ಟ ದಿಟ್ಟೆಯರಿದ್ದಾರೆ.

ಈ ಎಲ್ಲರೂ ಇಡೀ ಭೂಮಂಡಲದ ಹೆಣ್ಣುಗಳ ಕಥೆಯನ್ನು ಹೇಳುತ್ತಿದ್ದಾರೆ. ಅವರಿಗೆ ಬಾಯಾಗಿದ್ದಾರೆ. 

 

ಆಧುನಿಕ ಪೂರ್ವ ಭಾರತದಲ್ಲಿ ಬಂದ ಪೌರಾಣಿಕ ಮತ್ತು ಚಾರಿತ್ರಿಕ ಕಾವ್ಯ ನಾಟಕಗಳಲ್ಲಿ ಚಿತ್ರಣಗೊಂಡ ದಿಟ್ಟ ಮಹಿಳೆಯರ ಕಥೆಗಳನ್ನು ನೆನಪಿಸುವ ಸುಧಾ ಆಡುಕಳ ಅವರು ಬರೆದ ಇಪ್ಪತ್ತೊಂದು ಕಥನಗಳ ಸಂಕಲನ ಇದು.

ಪುಟಗಳು: 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

ಪ್ರಜಾವಾಣಿ ವಿಮರ್ಶೆ