Click here to Download MyLang App

ಜಯಂತ ಕಾಯ್ಕಿಣಿ,  ಅನಾರ್ಕಲಿಯ ಸೇಫ್ಟಿಪಿನ್‌ (ಇಬುಕ್),  jayath kaikini,  jayantha kaykini,  jayantha kaikini,  jayantha,  jayanth kaykini,  jayanth kakini,  jayanth kainiki,  Jayanth Kaikini,  jayanth,  jayanta kaykini,  jayanta kaikini,  jayant kaykini,  jayant kayikini,  jayant kailini,  Jayant Kaikini,  jayant,  jayanath kaykini,

ಅನಾರ್ಕಲಿಯ ಸೇಫ್ಟಿಪಿನ್‌ (ಇಬುಕ್)

e-book

ಪಬ್ಲಿಶರ್
ಜಯಂತ ಕಾಯ್ಕಿಣಿ
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಜಯಂತಕಾಯ್ಕಿಣಿಯವರ ಕಥಾಸಂಕಲನವನ್ನು ಕುರಿತು ಕನ್ನಡದ ಪ್ರಸಿದ್ದ ವಿಮರ್ಶಕರಾದ ಡಾ. ಸಿ.ಎನ್. ರಾಮಚಂದ್ರನ್‌ರವರು ಹಾಗೂ ಕವಿ ಮತ್ತು ಕಥೆಗಾರ್ತಿ ಡಾ|ಗೀತಾವಸಂತ ರವರು ಹೀಗೆ ಹೇಳಿದ್ದಾರೆ.

"ಜಯಂತರ ಗದ್ಯ ಇಬ್ಬರು ಸಂವೇದನಾಶೀಲ ಗೆಳೆಯರ ನಡುವಿನ ದಿನನಿತ್ಯದ ಮಾತುಕತೆಯಂತೆ ನೇರ, ಸರಳ ಹಾಗೂ ಭಾವಪೂರ್ಣ. ಈ ಬರಹಗಳು ನಾವು ಸಾಮಾನ್ಯವೆಂಬುದು ಭಾವಿಸುವ ಘಟನೆ-ವಿಚಾರಗಳ ಅಸಾಮಾನ್ಯತೆಯನ್ನೂ ಮತ್ತು ನಾವು ಕ್ಲಿಷ್ಟ ಹಾಗೂ ಅಸಾಮಾನ್ಯ ಎಂದು ಭಾವಿಸುವ ಸಂಗತಿಗಳ ಆಳದಲ್ಲಿರುವ ಸಾಮಾನ್ಯ ಅಂಶಗಳನ್ನೂ ಗುರುತಿಸಿ,ನಾವೂ ಅವುಗಳನ್ನು ಗುರುತಿಸುವಂತೆ ಪ್ರಚೋದಿಸುತ್ತವೆ."

-ಡಾ. ಸಿ.ಎನ್. ರಾಮಚಂದ್ರನ್.

 

" ಅತ್ಯಂತ ಸೃಜನಶೀಲ ಮನಸ್ಸು ಮಾತ್ರ ಸದಾ ಪರಿವರ್ತನಶೀಲ ಜಗತ್ತಿನ ಚಲನೆಯನ್ನು ಸೆರೆಹಿಡಿಯಬಲ್ಲದು. ಆ ಚಲನೆಯೊಳಗಿನ ಕಂಪನವನ್ನು ಕಾಣಬಲ್ಲದು. ಜಯಂತರ ಕಥೆಗಳ ಸಂವೇದನೆ ಜಡಜಗತ್ತನ್ನು ಭೇದಿಸಿ ಅದರೊಳಗಿನ ಜೀವತಂತುಗಳನ್ನು ಮೀಟುವುದು ಸುಳಲ್ಲ.ಆದ್ದರಿಂದಲೇ ಅವರನ್ನು ಓದುವುದೆಂದರೆ ವಿಶಿಷ್ಟವಾದ ಸೆಳೆತ. ಚಲನಶೀಲತೆಗೆ ಯಾವತ್ತಿಗೂ ಸಿದ್ಧಚೌಕಟ್ಟುಗಳೆಂದರೆ ಅಲರ್ಜಿ. ಜಯಂತರದು ಅಂಥ ಚಲನಶೀಲ ಹಾಗೂ ಸೃಜನಶೀಲ ದರ್ಶನ. ಅವರ ಕಥೆಗಳು ಲೋಕವನ್ನು ಗ್ರಹಿಸುವ ಹೊಸಕ್ರಮವೊಂದನ್ನು ಕಾಣಿಸುವಷ್ಟು ಸಶಕ್ತ. ಇದನ್ನೇ ನಾವು ಮೀಮಾಂಸೆ ಎನ್ನಬಹುದು. ಆದರೆ, ಇದು ಸಿದ್ಧಗೊಂಡಿರುವ ಮೀಮಾಂಸೆಯಲ್ಲ. 'ಆಗುತ್ತಲಿರುವ'ಮೀಮಾಂಸೆ. ಕಟ್ಟುವುದಕ್ಕಿಂತ ಆಗುವುದು ಅವರ ಕಥೆಗಳಿಗೆ ಬಹುಮುಖ್ಯ ರಚನೆಯಾಗುವುದೆಲ್ಲ ಮರುಕ್ಷಣಕ್ಕೆ ನಿರಚನಗೊಳ್ಳುವ, ಬದುಕಿನ ಕ್ಷಣಭಂಗುರತೆಯನ್ನು ಅರಿಯುವ ದಾರಿಗಳನ್ನು ಅವರ ಕಥೆಗಳು ಸದ್ದಿಲ್ಲದೇ ನಿರ್ಮಿಸುತ್ತವೆ. ಸಿದ್ಧಾಂತಗಳಲ್ಲಿ ಜಡಗೊಂಡ ಮನಸ್ಥಿತಿಯನ್ನು ಕೊಡವಿನೋಡಿದರೆ ಮಾತ್ರ ಜಯಂತರ ಬರವಣಿಗೆಯಲ್ಲಿನ ದರ್ಶನವು ಗೋಚರಿಸುತ್ತದೆ."

-ಡಾ|ಗೀತಾವಸಂತ. 

 

ಪುಟಗಳು: 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)