Click here to Download MyLang App

ಬದುಕು . . ಬೆಳಕು . . . ಚುಟುಕು - 1 . . . !,  ಫ್ರೀ ಸ್ಯಾಂಪಲ್ ದೊರೆಯುತ್ತದೆ  ಡಾ. ಕೆ. ಚಿದಾನಂದ ಗೌಡ,  ಅಂಕಣ ಬರಹ,  Dr. K. Chidananda Gowda, , Badhuku Belaku Chutuku Vol1,

ಬದುಕು . . ಬೆಳಕು . . . ಚುಟುಕು - 1 . . . ! (ಇಬುಕ್)

e-book

ಪಬ್ಲಿಶರ್
ಡಾ. ಕೆ. ಚಿದಾನಂದ ಗೌಡ
ಮಾಮೂಲು ಬೆಲೆ
Rs. 69.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana 

 

ಕನ್ನಡದ ಟೈಮ್ಸ್ ಆಫ್ ಇಂಡಿಯಾದ ಪ್ರಧಾನ ಸಂಪಾದಕರಾದ ಸನ್ಮಿತ್ರ ಶ್ರೀ ಈಶ್ವರ ದೈತೋಟ ಅವರು ವಾರವಾರವೂ ಅವರ ಪತ್ರಿಕೆಗೆ ಪುಟ್ಟದೊಂದು ಅಂಕಣವನ್ನು ಬರೆದುಕೊಡುವುದು ಸಾಧ್ಯವೇ ಎಂದು ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡ ನಾನು ಯಾವ ವಿಷಯದ ಬಗ್ಗೆ ಬರೆದರೆ ಸೂಕ್ತವಾಗುವುದೆಂದು ಯೋಚಿಸತೊಡಗಿದೆ. ಪ್ರಸಿದ್ಧ ಅಥವಾ ಸಾಮಾನ್ಯ ವ್ಯಕ್ತಿ, ಅಥವಾ ಒಂದು ಸಾಮಾನ್ಯ ಜೀವಿಗೆ ಸಂಬಂಧಿಸಿದ ಬದುಕಿನ ಒಂದು ವಿಶೇಷವಾದ ಘಟನೆ, ಅದು ಬೀರುವ ಬೆಳಕು, ಮತ್ತು ಆ ಬದುಕು ಮತ್ತು ಬೆಳಕಿಗೆ ಸಂಬಂಧಿಸಿದಂತೆ ತ್ರಿಪದಿ ರೂಪದ ಒಂದು ಚುಟುಕು-ಇವುಗಳನ್ನು ಸೇರಿಸಿ ವಾರಕ್ಕೊಂದರಂತೆ ಅಂಕಣವನ್ನು ಬರೆಯಲು ನಿರ್ಧರಿಸಿದೆ ಘಟನೆಗಳ ಕೇಂದ್ರದಲ್ಲಿರುವ ವ್ಯಕ್ತಿಗಳನ್ನು ಅಥವಾ ಜೀವಿಗಳನ್ನು ಆರಿಸಿಕೊಳ್ಳುವಾಗ ಪ್ರಾಚೀನಕಾಲದಿಂದ 21ನೇ ಶತಮಾನದ ಅರ್ವಾಚೀನ ಕಾಲದ ವರೆಗೆ, ಪಕ್ಷಿಗಳಿಂದ ಮಾನವನ ವರೆಗೆ, ತತ್ತ್ವಜ್ಞಾನಿಗಳಿಂದ ಆರಂಭಿಸಿ ರಾಜಕಾರಣಿಗಳ ತನಕ, ಆತ್ಮಜ್ಞಾನಿಗಳಿಂದ ಪ್ರಾರಂಭಿಸಿ ವಿಜ್ಞಾನಿ-ತಂತ್ರಜ್ಞಾನಿಗಳ ವರೆಗೆ, ಪ್ರಾಚೀನ ಚೀನಾ ದೇಶದಿಂದ ಆಧುನಿಕ ಅಮೇರಿಕಾ ದೇಶಗಳ ವ್ಯಾಪ್ತಿಯನ್ನು ಬಳಸಿಕೊಳ್ಳುವ ಸಾಧ್ಯತೆಯ ಕುರಿತು ಯೋಚಿಸಿದೆ. ಅವರ ಬದುಕಿಗೆ ಸಂಬಂಧಿಸಿದ ಘಟನೆಯು ಹೊರಸೂಸುವ ಬೆಳಕು ಅನೇಕ ಬಣ್ಣಗಳನ್ನು ಒಳಗೊಂಡಿರಬಹುದು: ಕಲಿಯಬಹುದಾದ ಪಾಠ, ಹೊಸ ಚಿಂತನೆಗಳು, ಸಮಾನ ಘಟನೆಗಳು, ಪ್ರೇರಣೆಗಳು, ಸ್ಫುರಣೆಗಳು, ಸ್ಫೂರ್ತಿ, ಸ್ಥೈರ್ಯ, ಬಾಳಿನ ಗುರಿ, ಬಾಳಿಗೆ ಮಾರ್ಗದರ್ಶನ, ಗೆಲುವಿನ ದಾರಿಯ ಅಡೆತಡೆಗಳು, ಸ್ವಾಭಿಮಾನ, ಆತ್ಮವಿಶಾಸ್ಯ, ದೇಶಪ್ರೇಮ, ಇತ್ಯಾದಿ ಇತ್ಯಾದಿ.

ಹೀಗೆ ಪ್ರಾರಂಭವಾದ ಅಂಕಣಗಳು ಕನ್ನಡದ ಟೈಮ್ಸ್ ಆಫ್ ಇಂಡಿಯಾದ ಭಾನುವಾರದ ಸಂಚಿಕೆಯಲ್ಲಿ ಸುಮಾರು 15 ತಿಂಗಳುಗಳಿಂದ ನಿರಂತರವಾಗಿ ಪ್ರಕಟಗೊಳ್ಳುತ್ತಾ ಬರುತ್ತಿವೆ. ಅವುಗಳಲ್ಲಿ ಪ್ರಾರಂಭದ 12 ತಿಂಗಳುಗಳಲ್ಲಿ ಪ್ರಕಟಗೊಂಡ 52 ಅಂಕಣಗಳು ಕ್ರೋಢೀಕರಣಗೊಂಡು ಈ ಹೊತ್ತಗೆಯಲ್ಲಿ ಅಡಕಗೊಂಡಿವೆ. ಇದರಲ್ಲಿ ಕಾಡುಬಾತುಗಳು, ಡಿಮೋಸ್ತನೀಸ್, ಎಡಿಸನ್, ಹೆನ್ರಿ ಫೋರ್ಡ್, ಬುದ್ಧ, ರಾಮಕೃಷ್ಣ ಪರಮಹಂಸ, ವಿವೇಕಾನಂದ, ರಾಕ್‌ಫೆಲ್ಲರ್, ಬಿಥೋವನ್, ಲಿಂಕನ್, ಕೃಪಾಲಾನಿ, ಅನ್ವರ್ ಸದಾತ್, ಟಾಗೋರ್, ಅಬ್ದುಸ್ ಸಲಾಂ, ಐನ್‌ಸ್ಟೈನ್, ರಾಮನ್ ಮೊದಲಾದವರ ಬದುಕಿನ ವಿಶೇಷ ಘಟನೆಗಳು ಮತ್ತು ಅವು ಚೆಲ್ಲುವ ಬೆಳಕುಗಳು ಇಲ್ಲಿ ಕಂಡುಬರುತ್ತವೆ.

 

ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)