Click here to Download MyLang App

ಬೆಸ್ಟ್‌ ಆಫ್‌ ಡುಂಡಿ (ಆಡಿಯೋ ಬುಕ್),  ಬೆಸ್ಟ್‌ ಆಫ್‌ ಡುಂಡಿ,    ಎಚ್. ಡುಂಡಿರಾಜ್,  Dundiraj,  Best Of Dundi (Audio Book),  Best Of Dundi,

ಬೆಸ್ಟ್‌ ಆಫ್‌ ಡುಂಡಿ (ಆಡಿಯೋ ಬುಕ್)

audio book

ಪಬ್ಲಿಶರ್
ಎಚ್. ಡುಂಡಿರಾಜ್
ಮಾಮೂಲು ಬೆಲೆ
Rs. 125.00
ಸೇಲ್ ಬೆಲೆ
Rs. 125.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಓದಿದವರು:  ಎಚ್. ಡುಂಡಿರಾಜ್

ಆಡಿಯೋ ಪುಸ್ತಕದ ಅವಧಿ : 1 ಗಂಟೆ 07 ನಿಮಿಷ

 

ನನ್ನ ಆಯ್ದ ಹನಿಗವನಗಳ ಸಂಗ್ರಹ 'ಬೆಸ್ಟ್ ಆಫ್ ಡುಂಡಿ' ಇದರ ಇ ಬುಕ್ ಮತ್ತು ಆಡಿಯೊ ಬುಕ್ ಆವೃತ್ತಿ ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಪ್ರೈ.ಲಿ ಮೂಲಕ ಹೊರಬರುತ್ತಿರುವುದು ತುಂಬಾ ಸಂತೋಷದ ಸಂಗತಿ. ನನ್ನ ಮೊದಲ ಹನಿಗವನ ಸಂಕಲನ 'ಪಾಡ್ಯ ಬಿದಿಗೆ ತದಿಗೆ' 1985 ರಲ್ಲಿ ಪ್ರಕಟವಾಗಿತ್ತು. ಆ ನಂತರ ಕಳೆದ 35 ವರ್ಷಗಳಲ್ಲಿ ನನ್ನ 17 ಹನಿಗವನ ಸಂಕಲನಗಳು ಪ್ರಕಟವಾಗಿವೆ. ಇಲ್ಲಿಯವರೆಗೆ ನಾನು 4500ಕ್ಕೂ ಹೆಚ್ಚು ಹನಿಗವನಗಳನ್ನು ಬರೆದಿರುವೆ. ಈ ಸಂಗ್ರಹದ ವೈಶಿಷ್ಟ್ಯವೆಂದರೆ ಇದೇ ಮೊದಲ ಬಾರಿಗೆ ನನ್ನ ಹನಿಗವನಗಳು ಇ ಬುಕ್ ಮತ್ತು ಆಡಿಯೊ ಬುಕ್ ರೂಪದಲ್ಲಿ ಬರುತ್ತಿವೆ. ಇಲ್ಲಿರುವ ಇನ್ನೂರು ಹನಿಗವನಗಳನ್ನು ನಾನೇ ಆಯ್ಕೆ ಮಾಡಿ ನಾನೇ ವಾಚನ ಮಾಡಿದ್ದೇನೆ.

ಕಳೆದ ನಾಲ್ಕು ದಶಕಗಳಿಂದ ನನ್ನ ಹನಿಗಾರಿಕೆ ನಿರಂತರವಾಗಿ ನಡೆದು ಬರಲು ಕಾರಣ ಕನ್ನಡದ ಓದುಗರು ನೀಡಿದ ಪ್ರೋತ್ಸಾಹ. ಇದಕ್ಕಾಗಿ ಓದುಗ ಬಂಧುಗಳಿಗೆ ನಾನು ಚಿರಋಣಿ. ಈಗ ಡಿಜಿಟಲ್ ಹಾಗೂ ಆಡಿಯೊ ಆವೃತ್ತಿಯಲ್ಲಿ ಬರುತ್ತಿರುವ ಈ ಸಂಕಲನವೂ ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ಭಾವಿಸುತ್ತೇನೆ. 

 

-ಎಚ್.ಡುಂಡಿರಾಜ್

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

Based on 2 reviews
100%
(2)
0%
(0)
0%
(0)
0%
(0)
0%
(0)
ಭ
ಭಾಸ್ಕರ ಹೆಬ್ಬಾರ
ಕೇಳಿ ಮೆಲುಕು ಹಾಕಬಹುದಾದ್ದು

ಡುಂಡಿರಾಜರ ಹನಿ ಕಡಲಿಂದ ಆರಿಸಿದ ಮುತ್ತುಗಳು. ಅವರ ಪುಸ್ತಕಗಳನ್ನು ಓದಿದವರಿಗೆ ಅದರ ಅರಿವಿರಬಹುದು. ಇನ್ನೂರು ಬೆಸ್ಟ್ ಹನಿಗವನಗಳನ್ನು ರಚಯಿತರ ದನಿಯಲ್ಲಿ ಕೇಳುವ ಆನಂದ ಬೇರೆಯೇ . ಇಲ್ಲಿನ ಹೆಚ್ಚಿನ ಹನಿಗಳನ್ನು ನನ್ನಂಥ ಅಭಿಮಾನಿ ಓದುಗರು ಅಲ್ಲಲ್ಲಿ ಬಳಕೆ ಮಾಡಿ ಗಿಟ್ಟಿಸಿಕೊಂಡಿರಬಹುದು. ಅಂತಹ ಗುಣವಂತ ಮುತ್ತುಗಳು. ಆದಷ್ಟು ಜನಕ್ಕೆ ತಲುಪಬೇಕಾದದ್ದು ಇದು.

R
Ravi Hegde
Good

Good