Click here to Download MyLang App

ಮಾಯಾ ಕಿನ್ನರಿ,  ಜೋಗಿ,  Maaya Kinnari,  Jogi,

ಮಾಯಾ ಕಿನ್ನರಿ (ಇಬುಕ್)

e-book

ಪಬ್ಲಿಶರ್
ಜೋಗಿ
ಮಾಮೂಲು ಬೆಲೆ
Rs. 69.00
ಸೇಲ್ ಬೆಲೆ
Rs. 69.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಬರಹಗಾರರು: ಜೋಗಿ

ಶೋಭಾರಾಣಿ ಮಹಡಿಯ ಕೊನೆಯ ಮೆಟ್ಟಿಲು ಇಳಿಯುತ್ತಿದ್ದಾಗ ಬಂತೊಂದು ಎಸ್ಸೆಮ್ಮೆಸ್ಸು. ನರಹರಿಯೇ ಇರಬೇಕು ಎಂದುಕೊಂಡು ನೋಡಿದರೆ ಯಾವುದೋ ಗೊತ್ತಿಲ್ಲದ ನಂಬರಿನಿಂದ ಬಂದಿತ್ತು. ಅರ್ಥವೇ ಆಗದ ವಿಚಿತ್ರ ಮೆಸೇಜು. ನಾನು ಇಷ್ಟರಲ್ಲೇ ಬರುತ್ತೇನೆ. ಸಿದ್ಧವಾಗಿರು ಎಂಬ ಹಿಂದಿಲ್ಲದ ಮುಂದಿಲ್ಲದ ಸಂದೇಶ. ಅದುವರೆಗೆ ಕೇಳಿರದ ನಂಬರಿನಂತಿತ್ತು. ಯಾರಿರಬಹುದು ಎಂದುಕೊಂಡು ಶೋಭಾರಾಣಿ ಆ ನಂಬರಿಗೆ ಫೋನ್ ಮಾಡಿದಳು. ನೀವು ಫೋನ್ ಮಾಡಿರುವ ನಂಬರ್ ಅಸ್ತಿತ್ವದಲ್ಲಿಲ್ಲ ಎಂಬ ಸಂದೇಶ ಕೇಳಿಸಿತು. ಅಸ್ತಿತ್ವದಲ್ಲಿ ಇಲ್ಲದ ನಂಬರಿನಿಂದ ಸಂದೇಶ ಬರೋದು ಹೇಗೆ ಸಾಧ್ಯ? ತಾನೇನಾದರೂ ತಪ್ಪಾಗಿ ಒತ್ತಿರಬಹುದಾ? ಅಥವಾ ಅದು ಹೊರ ರಾಜ್ಯದ ಫೋನ್‌ನಂಬರ್‌ ಇರಬಹುದಾ ಅಂದುಕೊಂಡು ಕೊಂಚ ಅನುಮಾನದಿಂದಲೇ ಮತ್ತೊಮ್ಮೆ ಮೆಸೇಜ್ ಓದಿಕೊಂಡಳು. ಸ್ಪಷ್ಟವಾಗಿ ಅರ್ಥವಾಗುತ್ತಿತ್ತು. ಯಾವ ಗೊಂದಲವೂ ಇರಲಿಲ್ಲ. I AM COMING SOON. BE READY. ಆದರೆ ಯಾರು ಎಲ್ಲಿಗೆ ಬರುತ್ತಿದ್ದಾರೆ. ಏನು ಸಿದ್ಧತೆ ಮಾಡಿಕೊಳ್ಳಬೇಕು ಅನ್ನುವುದು ಮಾತ್ರ ಗೊತ್ತಾಗುತ್ತಿರಲಿಲ್ಲ. ತರಿಕೇರೆಯ ಶೋಭಾರಾಣಿ ಹಾಗೂ ಬನವಾಸಿಯ ನರಹರಿ ದಂಪತಿಗಳ ಜೀವನದಲ್ಲಿ ಮುಂದೆ ಏನಾಯ್ತು? ಮಾಯಾಲೋಕದಲ್ಲೊಂದು ಸುತ್ತು ಹಾಕುವ ಜೋಗಿಯವರ ಕಾದಂಬರಿ "ಮಾಯಾಕಿನ್ನರಿ".

 

ಪುಟಗಳು: 116

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !