Click here to Download MyLang App

ವಿ. ರಾಮಚಂದ್ರ ಶಾಸ್ತ್ರಿ,    ಜಾಣ ಕಥೆಗಳು,  V. Ramachandra Shastri,  Jana Kathegalu,

ಜಾಣ ಕಥೆಗಳು (ಕಿರಿಯರ ಕಥಾಮಾಲೆ) (ಇಬುಕ್)

e-book

ಪಬ್ಲಿಶರ್
ವಿ. ರಾಮಚಂದ್ರ ಶಾಸ್ತ್ರಿ
ಮಾಮೂಲು ಬೆಲೆ
Rs. 55.00
ಸೇಲ್ ಬೆಲೆ
Rs. 55.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ವಿವಿಧ ಲೇಖಕರು 

ಕಥೆಗಳ ಆಯ್ಕೆ: ವಿ. ರಾಮಚಂದ್ರ ಶಾಸ್ತ್ರಿ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಮಕ್ಕಳ ಓದುವ ಅಭಿರುಚಿಗೆ ಪೋಷಕವಾಗುವ ಉದ್ದೇಶದ ‘ಜಾಣ ಕಥೆಗಳು’ ಕಥಾಸಂಕಲನ ‘ನವಕರ್ನಾಟಕ ಕಿರಿಯರ ಕಥಾಮಾಲೆ’ಯಲ್ಲಿ ಪ್ರಕಟವಾಗುತ್ತಿದೆ. ಮಕ್ಕಳಿಗೆ ಹೆಚ್ಚು ಪ್ರಿಯವಾಗುವ ಸ್ವಾರಸ್ಯಕರ ಕಥೆಗಳಿವೆ ಈ ಸಂಕಲನದಲ್ಲಿ.

ಹಿರಿಯರಿಂದ ‘ನೀನು ಜಾಣ ಅಥವಾ ಜಾಣೆ’ ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ ಜಾಣತನದ ಬಗ್ಗೆ ತಾರೀಫು ಮಾಡಬೇಕೆಂಬ ಸಂದೇಶ ಸಹ ಈ ಕಥೆಗಳಲ್ಲಿದೆ.

ಚಿತ್ರಕಾರ ರವೀಂದ್ರ ಎನ್‌. ಹೆಗಡಿ ಅವರು ಈ ಕಥೆಗಳಿಗೆ ಸೂಕ್ತ ಚಿತ್ರ ಬಿಡಿಸಿ ಪುಸ್ತಕದ ಮೆರುಗನ್ನು ಹೆಚ್ಚಿಸಿದ್ದಾರೆ.

ಈ ಸಂಕಲನದಲ್ಲಿ ಹೆಸರಾಂತ ಮಕ್ಕಳ ಕಥೆಗಾರರಾದ ನವಗಿರಿನಂದ, ಪ. ರಾಮಕೃಷ್ಣ ಶಾಸ್ತ್ರಿ , ಪಳಕಳ ಸೀತಾರಾಮ ಭಟ್ಟ , ನೀಲಾಂಬರಿ, ಪಾರ್ವತಮ್ಮ ಮಹಲಿಂಗ ಶೆಟ್ಟಿ , ಜಂಬುನಾಥ ಕಂಚ್ಯಾಣಿ, ದು. ನಿಂ. ಬೆಳಗಲಿ, ಬೇಬಿ ಎಮ್‌. ಮಾಣಿಯಾಟ್‌ ಇವರ ಕಥೆಗಳು ಸೇರಿವೆ. ಜಾಣತನದ ಹತ್ತಾರು ಮುಖಗಳನ್ನು ತೋರಿಸುವ ಈ ಕಥೆಗಳೆಲ್ಲಾ ಖುಷಿ ಕೊಡುವಂತಹವೇ. ನೀವೇ ಓದಿ ಆನಂದಿಸಿ.

ಮಕ್ಕಳ ವಿವಿಧ ಕಥಾ ಸಂಕಲನದ ಈ ಮಾಲೆಯಲ್ಲಿ ನೀತಿ ಕಥೆಗಳು, ಪ್ರಾಣಿ-ಪಕ್ಷಿಗಳ ಕಥೆಗಳು, ವಿನೋದ ಕಥೆಗಳು, ಸಾಹಸ ಕಥೆಗಳು, ವೈಜ್ಞಾನಿಕ ಕಥೆಗಳು ಇನ್ನೂ ಮುಂತಾದವು ಬರಲಿವೆ. ಅವೆಲ್ಲವೂ ನಿಮಗೆ ಆನಂದ ಕೊಡುವವೇ ಆಗಿವೆ.

 

ಆರ್‌. ಎಸ್‌. ರಾಜಾರಾಮ್‌

ನವಕರ್ನಾಟಕ ಪ್ರಕಾಶನ

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ರ
ರಾಮಚಂದ್ರ ಕೆಳದಿ
ಮಕ್ಕಳಿಗಾಗಿ ಒಂದು ಉತ್ತಮ ಕಥಾಸಂಕಲನ

ಮಕ್ಕಳಿಗೂ ಸಂತೋಷ ತರುವ ನೀತಿ ಕಥೆ, ವಿನೋದದ ಕಥೆಗಳು ಮನಸ್ಸಿಗೆ ಸಂತೋಷ ತರುತ್ತದೆ. ಸಂಸ್ಥೆಗಳು ಶಾಲಾ ಮಕ್ಕಳಿಗೆ ಬಹುಮಾನವಾಗಿ ಕೊಡಲು ಈ ಪುಸ್ತಕವನ್ನು ಪರಿಶೀಲಿಸಬಹುದು.