Click here to Download MyLang App

 ಕಾನೂರು ಹೆಗ್ಗಡಿತಿ,  kuvempu,  Kanuru Heggaditi,    kaanuru heggadati,  kaanuru heggadathi,  kaanura heggadathi,  kaanunu hegadati,  kaanunu,  kaanooru heggadati,  kaanooru hegadathi,

ಕಾನೂರು ಹೆಗ್ಗಡಿತಿ - ಪೂರ್ತಿ ಸರಣಿ - ಭಾಗ 1 (ಆಡಿಯೋ ಬುಕ್)

audio book

ಪಬ್ಲಿಶರ್
ಕುವೆಂಪು
ಮಾಮೂಲು ಬೆಲೆ
Rs. 200.00
ಸೇಲ್ ಬೆಲೆ
Rs. 200.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಆಡಿಯೊಬುಕ್ (ಕೇಳುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಕೇಳಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital audiobook — not a printed book, so no courier will be sent. Once purchased, it is instantly available to listen to on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಬರಹಗಾರ: ಕುವೆಂಪು

ಧ್ವನಿ - ನಾಗಾರಾಜ್ ವಸಿಷ್ಠ

ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ

ಆಡಿಯೋ ಪುಸ್ತಕದ ಅವಧಿ : 9 ಗಂಟೆ 24 ನಿಮಿಷ

 

1. ರಾಮತೀರ್ಥದೆಡೆ ಕಲ್ಲುಸಾರದ ಮೇಲೆ - ರಸ್ತೆಯಲ್ಲಿ ಶನಿ
2. ಚಿನ್ನಯ್ಯನ ಮೀನು ಷಿಕಾರಿ - ಸೀತೆ
3. ಕಾನೂರು ಚಂದ್ರಯ್ಯಗೌಡರ ಮೂರನೆಯ ಹೆಂಡತಿ - ಸೇರೆಗಾರರ ಕೇಪಿನ ಕೋವಿ - ಕಡೆಗೋಲು ಕಂಬದ ಸಾಕ್ಷಿಯಲ್ಲಿ
4. ಬೇಲರ ಬೈರನ ಮಗ ಗಂಗಹುಡುಗನೊಡನೆ
5. ಚಂದ್ರಯ್ಯಗೌಡರ ದರ್ಬಾರು - ಬಿಂಕದ ಸಿಂಗಾರಿ
6. ಅಣ್ಣಯ್ಯಗೌಡರ ಸಂಸಾರ ಶೂಲ - ಕಳ್ಳಂಗಡಿ
7. ಕಾನುಬೈಲಿನ ಕಳ್ಳುಗೊತ್ತು - ಹಳತು ಹೊಸತು ಸೇರಿದರೆ
8. ಹಲ್ಲಿಯ ಕೃಪೆ - ನೂರು ರೂಪಾಯಿ ನೋಟು
9. ಕತ್ತಲೆಗಿರಿಯ ಸರುವಿನಲ್ಲಿ ಕಾಡುಹಂದಿಯ ಬೇಟೆ - ಕಿಲಿಸ್ತರ ಜಾಕಿ ಮತ್ತು ಟೈಗರ್ ನಾಯಿ
10. ಮಾಯಗಾರ್ತಿ ಗಂಗೆ - ಸೀತೆ - ಹೂವಯ್ಯ
11. ಆ ಹೊಸಬಿ ಅಪ್ಪಯ್ಯನ ಹೆಂಡತಿಯೆ! - ಹೂವಯ್ಯನ ಭಾವಸಮಾಧಿ
12. ಕಾಡುಕಿಚ್ಚಿಗೆ ಕಿಡಿಯ ಮುನ್ನುಡಿ - ಶೂದ್ರಸಂಘದ ಮಹಾಸಭೆಯಲ್ಲಿ!

 

ನಾನು ಓದಿದ ಮೊದಲ ಕನ್ನಡ ಕಾದಂಬರಿ ಕುವೆಂಪು ಅವರ ಕಾನೂರು ಹೆಗ್ಗಡಿತಿ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಬೇಸಿಗೆ ರಜೆಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಕಣ್ಣಿಗೆ ಬಿದ್ದ ಈ ಪುಸ್ತಕವನ್ನು ಓದಲು ಆರಂಭಿಸಿ, ಎರವಲು ಪಡೆದು ಮನೆಗೂ ತಂದು ಓದಿ ಮುಗಿಸಿದ್ದು ನೆನಪಿದೆ. ಸುಮಾರು ಆರು ನೂರು ಪುಟಗಳ ಕಾದಂಬರಿ ಓದಿ ಮುಗಿಸಲು ಬಹುಶಃ ಆ ರಜೆಯ ಬಹುಭಾಗವೇ ಹಿಡಿದಿರಬೇಕು. ಈಗ ಹತ್ತು ವರ್ಷಗಳ ಹಿಂದೆ ಮತ್ತೊಮ್ಮೆ ಓದುವಾಗಲೂ ಕಾದಂಬರಿಯ ಸ್ವಾರಸ್ಯಕಡಿಮೆಯಾದಂತೆ ಅನಿಸಲಿಲ್ಲ.

೧೯೩೬ರಲ್ಲಿ ಪ್ರಕಟವಾದ ಈ ಕಾದಂಬರಿಯು ಒಳಗೊಳ್ಳುವ ಪರಿಸರ ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಎಂಬ ಹೆಸರಿನಿಂದ ಗುರುತಿಸಲ್ಪಡುವ ಪ್ರದೇಶ. ನನ್ನ ಊರು ಅದೇ ಪ್ರದೇಶದಲ್ಲಿರುವುದರಿಂದ ಈ ಕಾದಂಬರಿಯಲ್ಲಿ ವರ್ಣನೆಗೊಳ್ಳುವ ಹಲವಾರು ಸ್ಥಳ ಹಾಗೂ ವ್ಯಕ್ತಿಚಿತ್ರಗಳು ನಮಗೆಲ್ಲ ಹೊಸತಾಗಿರಲಿಲ್ಲ. ಆದರೂ ಆ ಕಾರಣಕ್ಕಾಗಿ ಕಾದಂಬರಿಯ ಸ್ವಾರಸ್ಯ ನನಗೇನೂ ಕಡಿಮೆಯಾಗಿರಲಿಲ್ಲ. ಮಲೆನಾಡಿನವರಲ್ಲದ ಓದುಗರಿಗಂತೂ ಇದೊಂದು ಹೊಸ ಪ್ರಪಂಚ. ಕುವೆಂಪು ಅವರಂತಹ ಕಲ್ಪನೆ, ಒಳನೋಟ, ಜೀವನ ಪ್ರೀತಿ ಎಲ್ಲವೂ ಬೆರೆತ ಕೃತಿಕಾರನ ಲೇಖನಿಯಲ್ಲಿ ಮಲೆನಾಡಿನ ಪ್ರಕೃತಿ ಲೋಕ ಕಣ್ಣೆದುರಿಗೇ ನಿಂತಷ್ಟು ನೈಜತೆಯಲ್ಲಿ ಮೂಡಿ ಬರುತ್ತದೆ.

ಕಾದಂಬರಿಯ 'ಅರಿಕೆ' ಯಲ್ಲಿ ಕುವೆಂಪು ಅವರೇ ಹೇಳಿರುವಂತೆ 'ಕಾದಂಬರಿ ಅಂಗೈ ಮೇಲಣ ನಾಟಕಶಾಲೆ'. ವಿಧ ವಿಧದ ದೃಶ್ಯಗಳ, ವ್ಯಕ್ತಿಗಳ, ಸನ್ನಿವೇಶಗಳ ಪೂರ್ಣ ಸ್ವಾರಸ್ಯ ಸಿಗಲು ಅವುಗಳು ಓದುವವರ ಪ್ರತಿಭೆಯಲ್ಲಿ ಮತ್ತೊಮ್ಮೆ ಸೃಷ್ಟಿಯಾಗಬೇಕಾಗುತ್ತದೆ.

ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ, ಕಳೆದ ಶತಮಾನದ ಆರಂಭದ ಕಾಲಘಟ್ಟದಲ್ಲಿ ಮಲೆನಾಡು ಪ್ರದೇಶದ ಸೂಕ್ಷ್ಮ ಸಾಮಾಜಿಕ, ರಾಜಕೀಯ ಬದಲಾವಣೆಗಳನ್ನು ಅಲ್ಲಿನ ಕೆಲವು ಕುಟುಂಬಗಳ ಜನರ ಬದುಕಿನ ಹಿನ್ನೆಲೆಯಲ್ಲಿ ಈ ಕಾದಂಬರಿಯ ಓದುಗರು ಗ್ರಹಿಸಬಹುದು. ಜಮೀನುದಾರಿಕೆಯ ದರ್ಪ, ಅಧಿಕಾರದ ಪ್ರತಿನಿಧಿಯಂತಿರುವ ಕಾನೂರು ಚಂದ್ರಯ್ಯಗೌಡರ ಕುಟುಂಬವು ಕತೆಯ ಕೇಂದ್ರಬಿಂದು. ಈ ಕುಟುಂಬದ ಒಳಗಿನ ಹಾಗೂ ಹೊರಗಿನ ಸಂಬಂಧಗಳು ಅಂದಿನ ಕಾಲದ ಕೌಟುಂಬಿಕ ಹಾಗೂ ಸಾಮೂಹಿಕ ಜೀವನದ ಪ್ರತಿಮೆಗಳಾಗಿ ಕಾಣಬರುತ್ತವೆ.

 

 - ಶ್ರೀನಾಥ್ ಶಿರಗಳಲೆ ಬ್ಲಾಗ್ ವಿಮರ್ಶೆ  

https://srikannadi.blogspot.com/2016/09/blog-post.html

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

 

:point_right: ಕಾನೂರು ಹೆಗ್ಗಡಿತಿ - ಪೂರ್ತಿ ಸರಣಿ ಆಡಿಯೋ ಬುಕ್ ಕೇವಲ 599/-ಕ್ಕೆ !

 

Customer Reviews

Based on 5 reviews
80%
(4)
20%
(1)
0%
(0)
0%
(0)
0%
(0)
D
D.n.
ಕರ್ಕಶ ಧ್ವನಿಗಳು

ಕಥೆಯು ತುಂಬಾ ಚೆನ್ನಾಗಿ ಮೂಡಿಬಂದಿದೆ ಆದರೆ ಮಧ್ಯ ಮಧ್ಯದಲ್ಲಿ, ಬರುವ ಶಬ್ದಗಳು ಮಾತ್ರ ತುಂಬ ಕರಕಶವಾಗಿವೆ

P
P.R.
Dhanyavadha

Kannuru hegadathi antha pusthaka audio li thumba impagi thandha purthi thandakke Dhanyavadha ..

N
Naveen Kumar Chogondahalli Muniraju

ಕಾನೂರು ಹೆಗ್ಗಡಿತಿ - ಪೂರ್ತಿ ಸರಣಿ - ಭಾಗ 1 (ಆಡಿಯೋ ಬುಕ್)

J
Jagadeesh C
next part link send me please

Need part 2 purchase link

ಸ
ಸಂತೋಷ್ ರಮೇಶ್ ರಮೇಶ್
ಸಿಕ್ಕಾಪಟ್ಟೆ ಒಳ್ಳೆ ಅನಿಸ್ತು

ಓದುವಿಕೆ, ದನಿಗೊಡುವಿಕೆಗಳು ತುಂಬಾ ಉರುವದ್ದಾಗಿದೆ. ಹಿನ್ನಲೆಯಲ್ಲಿ ಬರುವ ಗೇಯಗಾರಿಕೆ ಕೂಡ ಒಳ್ಳೆ ಎನಿಸಿಕೆ ಕೊಡುತ್ತೆ.
ಒಂದೇ ಒಂದು ಕುಂದು ನನಗೆ ಕಂಡಿದ್ದು, ಕತೆಯಲ್ಲಿ ಬರುವ ಹಲವಾರು ಆಳುಗಳಲ್ಲಿ ಕೆಲವರ ದನಿಗಳು ತುಂಬಾ ಹೋಲುತ್ತಿದ್ವು. ತಿಮ್ಮ ಅನ್ನುವ ಪಾತ್ರದೊಂದಿಗೆ, ಇನ್ನೊಂದಾವುದೋ ಆಳಿನ ಪಾತ್ರದ್ದು... ಬಿಟ್ಟರೆ, ಎಲ್ಲವೂ ಸಕತ್.. ಇಂತ ಚಂದವಾದ‌ ಸಪ್ಪಳದೊತ್ತಗೆ ಕೊಟ್ಟಿದ್ದಕೆ ನನ್ನಿಗಳು 🎊