Click here to Download MyLang App

ವಿದೇಶ ಪ್ರವಾಸ , ಆರ‍್ಯಾಂಬ ಪಟ್ಟಾಭಿ, Videsha Pravasa , Aryamba Pattabhi

ವಿದೇಶ ಪ್ರವಾಸ (ಇಬುಕ್)

e-book

ಪಬ್ಲಿಶರ್
ಆರ‍್ಯಾಂಬ ಪಟ್ಟಾಭಿ
ಮಾಮೂಲು ಬೆಲೆ
Rs. 99.00
ಸೇಲ್ ಬೆಲೆ
Rs. 99.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ವಿದೇಶಗಳಿಗೆ ಭಾರತದಿಂದ ಪ್ರತಿವರ್ಷ ಹೋಗಿ ಬರುವವರ ಸಂಖ್ಯೆ ಬೆಳೆಯುತ್ತಿದೆ. ಪ್ರವಾಸ ಮಾಡಿ ಬಂದವರಲ್ಲಿ ಕೆಲವರು ಅಲ್ಲಿ ಕಂಡ ಪ್ರೇಕ್ಷಣೀಯ ಸ್ಥಳ ಹಾಗೂ ಅನುಭವಗಳನ್ನು ಕುರಿತು ಬರೆದಿದ್ದಾರೆ. ಅನೇಕ ಭಾರತೀಯರು ವಿದೇಶಗಳಲ್ಲೇ ಶಾಶ್ವತವಾಗಿ ನೆಲಸಿ ಸುಖಜೀವನ ನಡೆಸುತ್ತಿದ್ದಾರೆ. ಅಲ್ಲಿಯ ಪ್ರಜೆಗಳೆನಿಸಿಕೊಂಡಿದ್ದರೂ ಮಾತೃ ದೇಶದ ಸಂಸ್ಕೃತಿಯನ್ನು ಮರೆಯದೆ ಕೆಲವರಾದರೂ ಕಾಪಾಡಿಕೊಂಡು ಬಂದಿದ್ದಾರೆ ಎನ್ನುವುದು ಸಮಾಧಾನಕರವಾದ ವಿಚಾರ,ಕೆಲವು ದಿನಗಳ ಅಥವಾ ವಾರಗಳ ಅವಸರದ ವಿದೇಶ ಪ್ರವಾಸ ನನ್ನದಲ್ಲ.

ಯಾಕೆಂದರೆ ಮೂರು ಸಲ ಪ್ರವಾಸ ಮಾಡಿ ಒಟ್ಟಾರೆ ಎರಡು ವರ್ಷ ಅಮೆರಿಕ ದೇಶದಲ್ಲಿ ವಾಸವಾಗಿದ್ದು ಭಾರತಕ್ಕೆ ಹಿಂತಿರುಗಿದ ಮೇಲೆ ನನಗುಂಟಾದ ಅನುಭವದ ಸಂಪತ್ತು ವಿಶಾಲ ಮತ್ತು ವಿಪುಲ, ತೆರೆದ ಕಣ್ಣು, ತೆರೆದ ಕಿವಿ ಮತ್ತು ವಿಶಾಲ ಮನೋಧರ್ಮದಿಂದ ಪ್ರವಾಸ ಮಾಡಿ ಅಧ್ಯಯನ ನಡೆಸಿದ್ದೇನೆ. ಪ್ರವಾಸದ ಅನುಭವಗಳಿಂದ ಸೃಷ್ಟಿ ಯಾದ ಹೊಸ ದೃಷ್ಟಿ, ಮನಸ್ಸಿಗುಂಟಾದ ನೂತನ ಸಂಸ್ಕಾರಗಳ ಫಲ ವಾಗಿ ಹುಟ್ಟಿದ ಹೊಸ ವಿಚಾರಗಳು, ಪರಿಷ್ಕಾರಗಳಿಂದಾಗಿ ಬಹಳ ವರ್ಷ ಗಳಿಂದ ನಂಬಿದ್ದ ಕೆಲವು ಬದುಕಿನ ಮೌಲ್ಯಗಳು ಬದಲಾವಣೆ ಹೊಂದಿ ನಾನು ಹಿಂದಿನವಳಾಗಿ ಉಳಿಯದೆ ಹೊಸತನದ ಬೌದ್ಧಿಕತೆಯಲ್ಲಿ ಅಭಿವ್ಯಕ್ತಗೊಂಡಿದ್ದೀನಿ ಎಂದು ಹೇಳ ಬಯಸುತ್ತೇನೆ. ಪ್ರವಾಸ ನನ್ನ ಅಂತರಂಗದ ಭೂಪಟದ ಮೇಲೆ ಬಲವಾದ ಮುದ್ರೆಯನ್ನೊತ್ತಿತಲ್ಲದೆ ಅದರ ಬಗ್ಗೆ ಇತರರಿಗೂ ತಿಳಿಸಬೇಕೆಂಬ ಅಪೇಕ್ಷೆಯುಂಟಾಯಿತು. ಅದರ ಪರಿಣಾಮವಾಗಿ ಈ ಕೃತಿ  ನನ್ನಿಂದ ರಚನೆಯಾಯಿತು ಎನ್ನಬಹುದು.

 - ಆರ‍್ಯಾಂಬ ಪಟ್ಟಾಭಿ

 

ಪುಟಗಳು: 103

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)