ಪ್ರಕಾಶಕರು: ಸಾವಣ್ಣ
Publisher: Sawanna
Upendra is one of the great directors in Indian cinema...ಅನ್ನುವ ಮಾತನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಿಂದೊಮ್ಮೆ ಹೇಳಿದ್ದರು. ಅವರ ಸಿನೆಮಾಗಳಲ್ಲಿನ ಬದುಕು ಮತ್ತು ಬಿಡುಗಡೆಯ ನಡುವಿನ ತೊಳಲಾಟ ನೋಡಿದವರೇ ಬಲ್ಲರು.
ರಿಯಲ್ ಸ್ಟಾರ್ ಉಪೇಂದ್ರ ಅವರ ಸಿನೆಮಾಗಳನ್ನು ಅವರ ಅಭಿಮಾನಿಯಾಗಿ ಸೂಕ್ಷ್ಮವಾಗಿ ಗಮನಿಸಿ, ಅವರ ಚಿತ್ರಗಳಲ್ಲಿನ ಅದ್ಭುತ ಸಂಭಾಷಣೆಯನ್ನು ಹೆಕ್ಕಿ ತೆಗೆದು, ಅದರಲ್ಲಿನ ಜೀವನ ಪಾಠವನ್ನು ಕನ್ನಡದ ಓದುಗರೆದುರು ತರುವ ಒಂದು ಹೊಸ ಬಗೆಯ ಪ್ರಯತ್ನವನ್ನು ಲೇಖಕರಾದ ರಾಮಸ್ವಾಮಿ ಹುಲಕೋಡು ಅವರು ಇಲ್ಲಿ ಮಾಡಿದ್ದಾರೆ. ಉಪೇಂದ್ರ ಅವರ ಚಿತ್ರಗಳ 25 ಡೈಲಾಗ್ ಅನ್ನು ಇಲ್ಲಿ ಆರಿಸಿ, ಅದರ ಕುರಿತು ಚೆಂದದ ಬದುಕಿನ ಪಾಠವನ್ನು ಸರಳವಾದ ಭಾಷೆಯಲ್ಲಿ ಇಲ್ಲಿ ಓದುಗರೆದುರು ಇಟ್ಟಿದ್ದಾರೆ ಲೇಖಕರು.
ಪುಟಗಳು: 160
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !