Click here to Download MyLang App

ಸಲ್ಮಾ ಮತ್ತು ಸುರಭಿ,  ವೈದೇಹಿ,    Vaidehi,  Salma Mattu Surabhi,

ಸಲ್ಮಾ ಮತ್ತು ಸುರಭಿ (ಇಬುಕ್)

e-book

ಪಬ್ಲಿಶರ್
ವೈದೇಹಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ವೈದೇಹಿ ಕತೆಗಳನ್ನು ಓದುವುದೆಂದರೆ ಅತ್ಯಂತ ಸೂಕ್ಷ್ಮವಾದ ಶ್ರಾವಣ ಪ್ರತಿಭೆಯೊಂದರ ಮೂಲಕ ಜಗತ್ತನ್ನು ಗ್ರಹಿಸುವ ಕೆಲಸ... ವೈದೇಹಿಯವರ ಕತೆಗಳ ಪಾತ್ರಗಳ ಹುಟ್ಟು, ಅಸ್ತಿತ್ವಗಳು ಅವುಗಳಿಗೆ ವಿಶಿಷ್ಟವಾದ, ಅವುಗಳ ಸಂವೇದನೆಯ ಅವಿಭಾಜ್ಯ ಅಂಶವಾಗಿ, ಕರ್ಣನಿಗೆ ಕವಚ ಕುಂಡಲಗಳಿದ್ದಂತೆ ಇರುವ, ಅವುಗಳ ಮಾತಿನಲ್ಲಿವೆ. ನಮ್ಮ ಓದಿನಲ್ಲಿ ಈ ಪಾತ್ರಗಳು ಪ್ರತ್ಯಕ್ಷವಾಗುವುದು, ನಮ್ಮ ಅನುಭವಲೋಕವನ್ನು ಪ್ರವೇಶಮಾಡಿ ನಿಲ್ಲುವುದು ಅವುಗಳ ಮಾತಿನಿಂದಲೇ. ಇದು ಕೇವಲ ಕತೆಗಾತಿಯ ಜಾಣ್ಮೆ ಅಥವಾ ಕೌಶಲ್ಯದ ವಿಷಯವಲ್ಲ. ಅಥವಾ ಅವರು ಬಳಸುವ ಪ್ರಾದೇಶಿಕ ಭಾಷೆಯ ಸೊಗಡಿನ ವಿಷಯವಲ್ಲ. ಮನುಷ್ಯರ ಅಂತರಂಗದ ಅತ್ಯಂತ ಅನಿರೀಕ್ಷಿತವಾದ, ಗೋಚರಕ್ಕೂ ಬರದಷ್ಟು ಸೂಕ್ಷ್ಮವಾದ, ಸಂಗ್ರಹಿಸಿ ಹೇಳಹೊರಟರೆ ತಮ್ಮ ನೈಜ ಸಂಕೀರ್ಣತೆಯನ್ನು ಕಳೆದುಕೊಂಡು ಉಡುಗಿ ಹೋಗುವಂತಹ ವಿಶಿಷ್ಟವಾದ ಆ ಕ್ಷಣದ್ದೇ ಆದರೂ ಆಯಾ ವ್ಯಕ್ತಿಗಳ ಶೀಲವನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿ ಇರುವ ಮಾತುಗಳ ಬಗ್ಗೆ ನಾನು ಹೇಳುತ್ತಿದ್ದೇನೆ... ಕತೆಗಾತಿಯಾದ ವೈದೇಹಿಯವರ ಶಕ್ತಿಯಿರುವುದು ಈ ಮಾತಿನ ಪ್ರಪಂಚವನ್ನು, ವಾಸ್ತವ ಪ್ರಪಂಚದಷ್ಟೇ ಮೂರ್ತವಾದ, ಸಾಂದ್ರವಾದ, ನಿಬಿಡವಾದ ಮಾತಿನ ಪ್ರಪಂಚವನ್ನು ನಿರ್ಮಿಸುವುದರಲ್ಲಿ. ಅವರ ಕತೆಗಳಲ್ಲಿ ಆಗುವುದು ನಡೆಯುವುದು ಇವುಗಳ ಅಂಶ ಕಡಿಮೆಯೇ. ಆದರೆ ಮಾತುಗಳ ಮೂಲಕ ‘ಘಟಿಸುವುದು’ ಮಾತ್ರ ಅಚ್ಚರಿ ಹುಟ್ಟಿಸುವಷ್ಟು ವೈವಿಧ್ಯಪೂಣವಾಗಿದೆ, ಸಂಕೀರ್ಣವಾಗಿದೆ.

- ಪ್ರೊ. ರಾಜೇಂದ್ರ ಚೆನ್ನಿ

(ವೈದೇಹಿ ಗೌರವ ಗ್ರಂಥ ‘ಇರುವಂತಿಗೆ’ಯಲ್ಲಿ ಬರೆದ ಲೇಖನದಿಂದ ಉಧೃತ)

 

ಪುಟಗಳು: 147

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)