Click here to Download MyLang App

ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್,  ಶ್ರೀನಿವಾಸ ಪ್ರಸಾದ್ ಡಿ. ಎಸ್.,    Srinivasa Prasad D.S.,  Sahitya Shilpi Chi Udayashankar,

ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್ (ಇಬುಕ್)

e-book

ಪಬ್ಲಿಶರ್
ಕಾವ್ಯ ರಾಜ್‌
ಮಾಮೂಲು ಬೆಲೆ
Rs. 149.00
ಸೇಲ್ ಬೆಲೆ
Rs. 149.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಟೋಟಲ್ ಕನ್ನಡ

Publisher: Total Kannada

 

ಚಿ. ಉದಯಶಂಕರ್ ಚಿಕ್ಕಂದಿನಿ೦ದ ಸಾಹಿತ್ಯದಲ್ಲಿ ಸಕ್ರಿಯರಾಗಿದ್ದವರು. ಮುಂದೆ ಚಿತ್ರ ರಂಗವನ್ನು ಆಳವಾಗಿ ಗ್ರಹಿಸಿದರು. ಸ್ವಭಾವದಲ್ಲಿ ಹಾಸ್ಯದ ಲೇಪವಿದ್ದರೂ ಚಿ. ಉದಯಶಂಕರ್‌ ಅವರು ಓದಿಕೊಂಡಿದ್ದ ಜ್ಞಾನ ಪ್ರಪಂಚದ ಅರಿವು ವಿಶಾಲವಾಗಿತ್ತು ತಮ್ಮ ಮೇಲೆ ತಮಗಿದ್ದ ಗಟ್ಟಿ ಭರವಸೆಯನ್ನು ಅವರು ಸದಾಕಾಲ ಕ್ರಿಯಾಶೀಲರಾಗಿರುವುದರ ಮೂಲಕ ನಿಜವಾಗಿಸಿದರು. ಆತ್ಮ ವಿಶ್ವಾಸವನ್ನು ಚಿ. ಉದಯಶಂಕರ್‌ ಕನ್ನಡ ಚಿತ್ರರಂಗಕ್ಕೆ ತಮ್ಮ ಮೂಲಕ ದುಡಿಯುವ ಬದ್ಧತೆಯಾಗಿಸಿದರು. ಆದ್ದರಿಂದ. ಕನ್ನಡ ಚಿತ್ರರಂಗಕ್ಕೆ ಚಿ. ಉದಯಶಂಕರ್ ಕೊಡುಗೆ ಕೇವಲ ಆಸ್ತಿತ್ವಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ವಿಭಿನ್ನ ಮಜಲುಗಳಲ್ಲಿ ಸೂಕ್ತ ಸ್ವಂದನದಾದ ಭಾಗವಹಿಸಿದ ಶ್ರದ್ಧಾವಂತ ಕುಶಲಿಯ ಹೂಣೆ ನಮಗೆ ತಿಳಿದುಬರುತ್ತದೆ. ಹಾಗಾಗಿಯೇ ಚಿ. ಉದಯಶಂಕರ್‌ ಕುರಿತಾದ ಅಭ್ಯಾಸ ಬಹಳ ಮುಖ್ಯವಾಗುತ್ತದೆ.

ಕನ್ನಡ ಚಿತ್ರರಂಗದ ಬೆಳವಣಿಗೆಯ ಕಾಲಘಟ್ಟದಲ್ಲಿ ಚಿ. ಉದಯಶಂಕರ್‌ ಚಿತ್ರರಂಗಕ್ಕೆ ಪ್ರವೇಶಿಸಿದರು. ಕನ್ನಡ ಚಿತ್ರರಂಗದ ಆರಂಭಿಕ ದಿನಗಳಲ್ಲೂ ಇದ್ದ ಅವರ ಸಂಬಂಧ ಹಾಗೆ ಮುಂದುವರೆದುಕೊಂಡು ಬಂದಿದ್ದು ವಿಶೇಷವಾದುದು. ಚಿತ್ರಸಾಹಿತಿಯೊಬ್ಬ ಏಕಪ್ರಕಾರದಲ್ಲಿ ಮಾತ್ರ ಗುರುತಿಸಿ ಕೊಳ್ಳದೆ, ಬಹುಮುಖಿ ನೆಲೆಯಿಂದ ತಿಳಿದಾಗ ಅದಕ್ಕೆ ಬೆಲೆ ಬರುತ್ತದೆ. ಚಿ. ಉದಯಶಂಕರ್‌ ಕನ್ನಡ ಚಿತ್ರರಂಗ ಪ್ರವೇಶಿಸಿದಾಗ ಕಾದ೦ಬರಿ, ಭಕ್ತಿಯಾಧಾರಿತ ಚಿತ್ರಗಳಿಗೆ ಹೆಚ್ಚಿನ ಅವಕಾಶ ದೊರಕುತ್ತಿದ್ದವು. ಜೊತೆಗೆ ಸಾಮಾಜಿಕವಾದ, ಸಾಂಸಾರಿಕವಾದ ಚಿತ್ರಗಳಿಗೂ ಕೊರತೆ. ಇರಲಿಲ್ಲ... ಚಿ... ಉದಯಶಂಕರ್‌ ಕೇವಲ ಗೀತರಚನಕಾರರಾಗಿ ಮಾತ್ರ ಉಳಿದುಕೊಂಡಿದ್ದರು, ಆಗ ಚಿತ್ರಕಥೆ ಸಂಭಾಷಣೆಗೆ ಪ್ರಮುಖ ತಿರುವುಗಳನ್ನು ನೀಡುವ ಸಾಧ್ಯತೆ ವಿಸ್ತೃತವಾಗುತ್ತಿರಲಿಲ್ಲ.

ಕನ್ನಡ ಚಿತ್ರರಂಗಕ್ಕೆ ಚಿ. ಉದಯಶಂಕರ್‌ ಕೊಡುಗೆ ಕೇವಲ ಹೆಸರಿಗೆ ಮಾತ್ರವಲ್ಲ, ನಿರ್ಣಾಯಕವೆಂಬ ರೀತಿಯಲ್ಲಿ ಅದು ವರ್ತಿಸಿದ್ದರಿ೦ದಲೇ ಹೆಚ್ಚಿನ ಮೌಲ್ಯವಿದೆ. ಕವಿಯೊಬ್ಬ ಆತ್ಮಕೇಂದ್ರಿತವಾದ ತನ್ನ ಸ್ವಾಯತ್ತ ಜಗತ್ತಿನಲ್ಲಿ ಸ್ವತ೦ತ್ರವಾಗಿ ಬದುಕುತ್ತಾನೆ. ಆದರೆ ಸಿನಿಮಾ ಕ್ಷೇತ್ರಕ್ಕೆ ಬ೦ದಾಗ ಚಿತ್ರ ಸಾಹಿತಿಗಳ ಪಾತ್ರ ಬೇರೆ ಆಯಾಮಗಳಿಗೆ ಒಳಪಟ್ಟಿರುತ್ತದೆ. ಚಿ. ಉದಯಶಂಕರ್‌ ಈ ರೀತಿಯ ಭಿನ್ನ ವಿನ್ಯಾಸಕ್ರಮ, ಕಥಾಹ೦ದರದ ಸೃಷ್ಟಿ ಬದಲಾವಣೆಗಳನ್ನು ನೋಡಿಕೊಂಡೇ ಬದುಕಬೇಕಾಗಿತ್ತು ನಿರ್ದೇಶಕ, ತಾರಾಬಳಗದ ಒಟ್ಟಾದ ಒಂದು ಸೂತ್ರದಲ್ಲಿ ಬರೆಯುವಾಗ ಹಾಡು, ಸಂಭಾಷಣೆಗಳನ್ನು ರಚಿಸುವವನಿಗೆ ಜವಾಬ್ದಾರಿ ಹೆಚ್ಚು ಯಾವುದೇ ರೀತಿಯಲ್ಲೂ ಸ್ಥಗಿತಗೊಳ್ಳದೆ ಕ್ರಿಯಾಶೀಲವಾಗಿಯೇ ಬರೆದ ಚಿ. ಉದಯಶಂಕರ್‌ ಹೀಗಾಗಿಯೇ ಹೆಚ್ಚು ತೊಡಕಿಲ್ಲದೆ ಉಳಿಯುತ್ತಾರೆ. 

 

ಪುಟಗಳು: 255

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
N
Nagesh Kumar
ಅಂ ಕಾರದ ಬದಲು‌ ಸೊನ್ನೆ ಚಿನ್ಹೆಯನ್ನು ಉಪಯೋಗಿಸಿದ್ದೀರಿ

ಅಂ ಬದಲು(೦)ಬಳಸಿದ್ದೀರಿ