ಇದರಲ್ಲಿದೆ ನಾಲ್ಕು ಪತ್ತೇದಾರಿ ಸಸ್ಪೆನ್ಸ್ ಕಥೆಗಳು.
೧. ನಾನವಳಲ್ಲ!- ಪೆರಿ ಮೇಸನ್ ಕಾದಂಬರಿ ಅನುಕರಣೆ. ಕೋರ್ಟ್ ರೂಂ ಮಿಸ್ಟರಿ. ಲಾಯರ್ ಪತ್ತೇದಾರಿ! ಇಬ್ಬರು ಯುವತಿಯರಾದರೆ ಐಡೆಂಟಿಟಿ ಸ್ವಿಚ್, ಕೊಲೆಗೆ ಯಾರು ಕಾರಣ?
೨. ರೈಲು ಬಿಟ್ಟೆವು- ರೈಲಿನಲ್ಲಿ ಒಬ್ಬ ನಕಲು ವೇಷಧಾರಿ. ಆದರೆ ಅವನು ಕಳ್ಳನೋ, ಪೋಲೀಸೊ... ಕಣ್ಣಾಮುಚ್ಚಾಲೆ!
೩. ದಾರಿ ತಪ್ಪದ ಮಗಳು - ಸಾಮಾಜಿಕ ನಾಯಕಿ ಪ್ರಧಾನ ಕಥೆಯಲ್ಲಿ ಮನೆ ಗೌರವ ಉಳಿಸಬಲ್ಲಳೆ ಚಾಣಾಕ್ಷ ಮಗಳು?... ಹೊಸ ಬಗೆಯ ಪತ್ತೇದಾರಿ !
೪. ಸರಿದ ಪರದೆ- ಸಿನೆಮಾ ಥಿಯೇಟರಿನಲ್ಲಿ ಶೂಟ್ ಮಾಡಿದ್ದು ಚಿತ್ರದಲ್ಲಿ. ಆಗಲೇ ಗುಂಡು ತಗುಲಿ ಸತ್ತಿದ್ದು ಪ್ರೇಕ್ಷಕನೊಬ್ಬ... ಹೇಗೆ? ಏನು?... ಜರ್ನಲಿಸ್ಟ್ ಪತ್ತೇದಾರಿ