Click here to Download MyLang App

ದಾಳಿ (ಇಬುಕ್)

ದಾಳಿ (ಇಬುಕ್)

e-book

ಪಬ್ಲಿಶರ್
ಕುಮಾರ ಬೇಂದ್ರೆ
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 49.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ವೈಚಾರಿಕತೆ, ಪ್ರಗತಿಪರ ಚಿಂತನೆ ಮತ್ತು ಮೂಲಭೂತವಾದದ ನಡುವಿನ ಸಂಘರ್ಷ ಕುರಿತ ಕಥಾ ವಸ್ತುವನ್ನು ಈ ಕಾದಂಬರಿ ಹೊಂದಿದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ವಿಚಾರವಾದಿಗಳ ಹತ್ಯೆ ಘಟನೆಗಳನ್ನು ಆಧರಿಸಿ ಅದರ ಸುತ್ತ ನಡೆದ ವಿದ್ಯಮಾನಗಳನ್ನು ಈ ಕಾದಂಬರಿ ಸೂಕ್ಷ್ಮಮವಾಗಿ ದಾಖಲಿಸಿದೆ. ಈ ನಡುವೆ ಅಮಾಯಕ ತಾಯಿ ಮತ್ತು ಮಗಳೊಬ್ಬಳು ಇಂಥ ವಿಷವೂಹದಲ್ಲಿ ಸಿಲುಕಿ ಹೇಗೆ ದಾರುಣ ಅಂತ್ಯ ಕಾಣುತ್ತಾರೆ ಎಂಬುದನ್ನು ಈ ಕಥನ ಪರಿಣಾಮಕಾರಿಯಾಗಿ ಚಿತ್ರಿಸಿದೆ. `ಸೃಜನ್ ಆತನ ಕಲೆ ಒಂದು ಕಡೆ, ಕೃತಿಕಾ ಆಕೆಯ ಬಡತನ, ಅಂದಚಂದ ದುರ್ಬಳಕೆಗೆ ಕಾರಣವಾಗುತ್ತದೆ. ಸೃಜನ್ನ ಕಲೆ, ಕೃತಿಕಾಳ ಸೌಂದರ್ಯ ಸಂಧಿಸಿದರೂ ಅವುಗಳ ಸಹಪ್ರಯಾಣಕ್ಕೆ `ವಿಧಿ’ ಅಡ್ಡಿಯನ್ನುಂಟು ಮಾಡುತ್ತದೆ. ಸಮಾಜ ಘಾತುಕರ ಸಂಚುಗಳಿಗೆ ಅಮಾಯಕ ಕೃತಿಕಾ, ಆಕೆಯ ತಾಯಿ ಜಾನಕಿ ಬಲಿಯಾಗುವುದನ್ನು ಕಾದಂಬರಿ ಸರಿಯಾಗಿ ಚಿತ್ರಿಸಿದೆ’ ಎಂದು ಹೆಸರಾಂತ ಕತೆಗಾರರಾದ ಡಾ.ಅಮರೇಶ ನುಗಡೋಣಿ ಅವರು ಈ ಕೃತಿಗೆ ಬರೆದ ಮುನ್ನಡಿಯಲ್ಲಿ ವಿವರಿಸಿದ್ದಾರೆ. `ದಾಳಿ’ ಕಾದಂಬರಿ ಚಲನಚಿತ್ರವಾಗಿ ರೂಪುಗೊಳ್ಳುತ್ತಿದೆ. Daali, Kumar Bendre,Kumara Bendre

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)