ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್
Publisher: Navakarnataka Publications
ಮಾರ್ಕ್ಸ್ ಅವರ ಜೀವನ ಮತ್ತು ಸಿದ್ಧಾಂತಗಳನ್ನು ಕುರಿತಂತೆ ಹೇರಳವಾಗಿಯಲ್ಲವಾದರೂ ಕನ್ನಡದಲ್ಲಿ ಕೆಲವು ಗ್ರಂಥಗಳು ಲಭ್ಯವಿವೆ. ಮಾರ್ಕ್ಸ್ ರ ಕೆಲವು ಕೃತಿಗಳ ಕನ್ನಡ ಭಾಷಾಂತರಗಳೂ ಇವೆ. ಆದರೆ ಸಮಗ್ರವಾದ ಹಾಗೂ ಸರಳವಾದ ಒಂದು ಉದ್ಗ್ರಂಥ ನಮ್ಮಲ್ಲಿ ಈವರೆಗೆ ಬಂದುದಿಲ್ಲ. ಈ ಕೊರತೆಯನ್ನು ನೀಗಿಸಿ ಮಾರ್ಕ್ಸ್ ವಾದದ ನಿಖರವಾದ ಗ್ರಂಥ ಸಮೂಹದ ರಚನೆಯಲ್ಲಿ ತೊಡಗುವ ಪ್ರಪ್ರಥಮ ಮಹತ್ತರ ಪ್ರಯತ್ನ ಶ್ರೀ ಕಕ್ಕಿಲ್ಲಾಯರದು. ಅವರು ನೀಡಲಿರುವ ಗ್ರಂಥ ಸಮೂಹದ ಮೊದಲ ಕೃತಿ ಇದು. ಅವರು ಕೈಗೊಂಡಿರುವ ಈ ಪ್ರಯತ್ನ ಅವರ ವಿದ್ವತ್ತು, ಕಾಳಜಿ ಮತ್ತು ಆಕಾಂಕ್ಷೆಗಳ ಪ್ರತೀಕ.
ಇದರ ಅಧ್ಯಯನದಿಂದ ದುಡಿಯುವ ಜನರ ದಿಗಂತ ವಿಸ್ತಾರಗೊಳ್ಳುವುದರಲ್ಲಿ ಯಾವ ಸಂಶಯವೂ ಇಲ್ಲ.
~ ಡಾ|| ಜಿ. ರಾಮಕೃಷ್ಣ ಅವರ ಮುನ್ನುಡಿಯಿಂದ
ಪುಟಗಳು: 368
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !