Click here to Download MyLang App

ಲಕ್ಷ್ಮೀಶನ ಜೈಮಿನಿಭಾರತ ಪ್ರವೇಶ,  ಬಿ.ಆರ್. ವೆಂಕಟರಮಣ ಐತಾಳ,    jaimuni barata,  jaimini bharata,  Jaimini Bhaarata Pravesha,  B.R. Venkataramana Aithala,

ಲಕ್ಷ್ಮೀಶನ ಜೈಮಿನಿಭಾರತ ಪ್ರವೇಶ (ಇಬುಕ್)

e-book

ಪಬ್ಲಿಶರ್
ಬಿ.ಆರ್. ವೆಂಕಟರಮಣ ಐತಾಳ
ಮಾಮೂಲು ಬೆಲೆ
Rs. 60.00
ಸೇಲ್ ಬೆಲೆ
Rs. 60.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಲೇಖಕರು:

ಮೂಲ ಲಕ್ಷ್ಮೀಶ

ಸಂಪಾದನೆ ಮತ್ತು ಟಿಪ್ಪಣಿ:

ಬಿ.ಆರ್. ವೆಂಕಟರಮಣ ಐತಾಳ

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಅಕ್ಷರ ಪ್ರಕಾಶನಕ್ಕೆ ೫೦ ತುಂಬಿದ ೨೦೦೬ನೆಯ ವರ್ಷ, ದಿ| ಕೆ.ವಿ. ಸುಬ್ಬಣ್ಣನವರ ನೆನಪಿಗೆ, ಈ ಹೊಸ ಪುಸ್ತಕಮಾಲೆಯ ಮೊದಲ ಕಂತಿನ ೨೫ ಪುಸ್ತಕಗಳು ಬಿಡುಗಡೆಗೊಂಡವು; ೨೦೦೭ರಲ್ಲಿ ಎರಡನೆಯ ಕಂತಿನ ಇನ್ನೂ ೧೦ ಪುಸ್ತಕಗಳು ಮತ್ತು ೨೦೦೯ರಲ್ಲಿ ಇನ್ನೂ ೧೫ - ಹೀಗೆ ಒಟ್ಟು ೫೦ ಪುಸ್ತಕಗಳು ಈವರೆಗೆ ಈ ಮಾಲಿಕೆಯಲ್ಲಿ ಪ್ರಕಟಗೊಂಡಿವೆ.

ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು ಲಭ್ಯವಾಗಬೇಕು - ಎಂಬ ಉದ್ದೇಶವಿಟ್ಟುಕೊಂಡು ಅಕ್ಷರ ಪ್ರಕಾಶನವು ಈ ಪುಸ್ತಕಮಾಲಿಕೆಯನ್ನು ಆರಂಭಿಸಿದೆ. ತಲಾ ೧೦೮ ಪುಟಗಳ ಈ ಪುಸ್ತಕಗಳಲ್ಲಿ - ಆಧುನಿಕಪೂರ್ವ ಕನ್ನಡದ ಮಹತ್ಕೃತಿಗಳೂ (ಟಿಪ್ಪಣಿಗಳೊಂದಿಗೆ) ಹಾಗೂ ಹೊಸಗನ್ನಡದ ಪ್ರಮುಖ ಲೇಖಕರ ಆಯ್ದ ಕಥೆ-ಕವನ-ಪ್ರಬಂಧಗಳೂ ಮತ್ತು ಕೆಲವು ಕನ್ನಡೇತರ ಲೇಖಕರ ಆಯ್ದ ಬರಹಗಳ ಸಂಗ್ರಹಗಳೂ ಸೇರಿವೆ. ಆಯಾ ಲೇಖಕರನ್ನು ಮೊದಲ ಬಾರಿಗೆ ಪರಿಚಯಿಸಿಕೊಳ್ಳುವವರಿಗೆ ಉಪಯುಕ್ತವಾಗುವಂತೆ ಈ ಪುಸ್ತಕಗಳ ವಸ್ತು-ವಿನ್ಯಾಸಗಳನ್ನು ರೂಪಿಸಲಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗುವ ಜತೆಗೆ, ಈ ಮಾಲಿಕೆಯ ಪುಸ್ತಕಗಳನ್ನು ನೀನಾಸಮ್ ಪ್ರತಿಷ್ಠಾನವು ನಡೆಸುತ್ತಿರುವ ಸಾಹಿತ್ಯ ಅಧ್ಯಯನ ಶಿಬಿರಗಳಲ್ಲಿ ಪಠ್ಯಗಳಾಗಿಯೂ ಬಳಸಲಾಗುತ್ತದೆ.

 

ABOUT THE AUTHOR

ಕನ್ನಡನಾಡಿನ ಕಾವ್ಯವಾಚನ ಸಂಪ್ರದಾಯಗಳಿಗೆ ಅತ್ಯಂತ ಪ್ರೀತಿಪಾತ್ರನಾಗಿರುವ ಲಕ್ಷ್ಮೀಶ ತನ್ನ ಪ್ರಸಿದ್ಧ ‘ಜೈಮಿನಿ ಭಾರತ’ವನ್ನು ರಚಿಸಿದ್ದು ಸಂಸ್ಕೃತದ ಜೈಮಿನಿಯ ‘ಅಶ್ವಮೇಧಪರ್ವ’ ಎಂಬ ಕೃತಿಯನ್ನು ಆಧರಿಸಿ. ಈತ ಸುಮಾರಾಗಿ ಕ್ರಿ.ಶ. ೧೬ನೆಯ ಶತಮಾನದ ಪ್ರಥಮಾರ್ಧದಲ್ಲಿ ಬದುಕಿ ಕಾವ್ಯರಚನೆ ಮಾಡಿದ್ದಾನೆಂದು ಭಾವಿಸಲಾಗಿದೆಯಾದರೂ ವಿದ್ವಾಂಸರು ಕ್ರಿ.ಶ. ೧೨ನೆಯ ಶತಮಾನದಿಂದ ೧೮ನೆಯ ಶತಮಾನದವರೆಗೂ ಈತನ ಕಾಲವನ್ನು ಬೇರೆಬೇರೆ ಆಧಾರಗಳ ಮೂಲಕ ವಿಭಿನ್ನವಾಗಿ ವ್ಯಾಖ್ಯಾನಿಸಿದ್ದಾರೆ. ಇವತ್ತಿನ ಚಿಕ್ಕಮಗಳೂರು ಜಿಲ್ಲೆಯ ದೇವನೂರು ಈತನ ಊರು ಎಂಬುದು ಸಾಧಾರಣವಾಗಿ ಒಪ್ಪಿತವಾಗಿದ್ದರೂ ಈತ ಗುಲ್ಬರ್ಗಾ ಜಿಲ್ಲೆಯ ಸುರಪುರ ಸಮೀಪದ ದೇವಪುರದವನು ಎಂಬ ವಾದವೂ ಇದೆ. ‘ಜೈಮಿನಿಭಾರತ’ವನ್ನು ಬಿಟ್ಟು ಇನ್ನಾವುದೇ ಕೃತಿಗಳನ್ನು ಆತ ರಚಿಸಿದ ಬಗ್ಗೆ ಉಲ್ಲೇಖಗಳಿಲ್ಲ. ಈತನ ಶೈಲಿಯನ್ನು ನೋಡಿ ಈತನಿಗೆ ‘ಉಪಮಾಲೋಲ’ ಎಂಬೊಂದು ವಿಶೇಷಣ ಒದಗಿಬಂದಿದೆ; ಈತನಿಗೆ ‘ಕರ್ಣಾಟಕ ಕವಿಚೂತವನಚೈತ್ರ’ ಎಂಬೊಂದು ಬಿರುದು ಕೂಡ ಮುಂದಿನ ಕವಿಗಳಿಂದ ಪ್ರಾಪ್ತವಾಗಿದೆ.

 

ಪುಟಗಳು: 124

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

Customer Reviews

No reviews yet
0%
(0)
0%
(0)
0%
(0)
0%
(0)
0%
(0)