Click here to Download MyLang App

ಐ ಆ್ಯಮ್‌ ಅನದರ್‌ ಯೂ (ಇಬುಕ್)

ಐ ಆ್ಯಮ್‌ ಅನದರ್‌ ಯೂ (ಇಬುಕ್)

e-book

ಪಬ್ಲಿಶರ್
ಚೇತನಾ ತೀರ್ಥಹಳ್ಳಿ
ಮಾಮೂಲು ಬೆಲೆ
Rs. 110.00
ಸೇಲ್ ಬೆಲೆ
Rs. 110.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ಸಾವಣ್ಣ

Publisher: Sawanna

 

ಐ ಯಾಮ್ ಅನದರ್ ಯೂ  ಇಂಗ್ಲಿಷಿನಲ್ಲಿ ಬಂದ ಪ್ರಿಯಾಕುಮಾರಿ ಅವರ ಅತ್ಯಂತ ಜನಪ್ರಿಯ ಪುಸ್ತಕ I am another you ದ ಕನ್ನಡ ಅನುವಾದ. ತನ್ನನ್ನು ತಾನು ಅರಿಯುವ ಹಾದಿಯಲ್ಲಿ ಲೇಖಕಿ ಸವೆಸಿದ ಹಾದಿಯ ಚೆಂದದ ಅಕ್ಷರ ಅನುಭವ ಈ ಕೃತಿ. ನಿಮ್ಮ ಜೀವನದ ಸತ್ಯ ಏನು? ನಿಮ್ಮ ಕನಸಿಗೆ ನೀವು ಬೆನ್ನು ತೋರಿದ್ದೀರಾ ಇಲ್ಲ ಬೆನ್ನು ಹತ್ತಿದ್ದೀರಾ? ನೀವು ನೀವಾಗಿಯೇ ಇದ್ದೀರಾ? ಈ ಪ್ರಶ್ನೆಗಳನ್ನೇ ಬೆಂಬತ್ತಿ ನೆದರ್ಲ್ಯಾಂಡಿಗೆ ಹೋಗುವ ಲೇಖಕಿ ಅಲ್ಲಿಂದ ತನ್ನನ್ನು ತಾನು ಅರಿಯುತ್ತ ಸಾಗಿದ ಪಯಣದ ಈ ಕತೆ ಇಂಗ್ಲಿಷಿನಲ್ಲಿ ಭರ್ಜರಿ ಮಾರಾಟ ಕಂಡಿದೆ. ಕನ್ನಡಕ್ಕೆ ಇದನ್ನು ಭರವಸೆಯ ಲೇಖಕಿ ಚೇತನಾ ತೀರ್ಥಹಳ್ಳಿಯವರು ತಂದಿದ್ದಾರೆ. 

 

ನಾನು ನಂಬಿಕೊಂಡ ತತ್ತ್ವಗಳನ್ನು ಈ ಪುಸ್ತಕ ಪ್ರತಿಧ್ವನಿಸುತ್ತದೆ. ಪ್ರತಿ ವ್ಯಕ್ತಿಯೂ ಸಮಾನನಾಗಿರುತ್ತಾನೆ ಎಂದು ಇದು ಹೇಳುತ್ತದೆ. ಇದು ಧರ್ಮಕ್ಕಿಂತ ಶ್ರೇಷ್ಠ ಚಿಂತನೆ. ಈ ಚಿಂತನೆ ಇಂದಿನ ಬಹಳಷ್ಟು ಸಮಸ್ಯೆಗಳಿಗೆ ಉತ್ತರವಾಗಬಲ್ಲದು. ಯಾಕೆಂದರೆ ಯಾರೊಬ್ಬರೂ ತಮ್ಮನ್ನು ತಾವೇ ಘಾಸಿಗೊಳಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅಲ್ಲವೆ?

- ಸೋನು ನಿಗಮ್‌, ಜನಪ್ರಿಯ ಹಾಡುಗಾರ

ಪ್ರಿಯಾರೊಂದಿಗೆ ನೀವು ಪ್ರತಿ ಪುಟದಲ್ಲೂ ಪ್ರಯಾಣದ ಅನುಭವವನ್ನು ಕಾಣಲಿದ್ದೀರಿ. ಸಂಘರ್ಷದ ಪ್ರಾಮಾಣಿಕತೆ ಹಾಗೂ ಗೆಲುವಿನ ಸವಿಯನ್ನು ಅನುಭವಿಸಲಿದ್ದೀರಿ. ನಿಮಗೆ ಸರಿ ದಾರಿಯೆಂದು ಗೊತ್ತಿದ್ದೂ ಅನುಸರಿಸಲು ಧೈರ್ಯ ಸಾಲದಿದ್ದ ದಾರಿಯಲ್ಲಿ ಸಾಗಲು ಈ ಪುಸ್ತಕ ಪ್ರೇರಣೆ ನೀಡುತ್ತದೆ.

- ದ ಟೈಮ್ಸ್ ಆಫ್‌ ಇಂಡಿಯಾ

ಪ್ರತಿಯೊಂದು ಅಧ್ಯಾಯದಲ್ಲೂ ಕಲಿಕೆಗೊಂದು ಅವಕಾಶ ಪಡೆಯುತ್ತ ಸುಂದರ ತಿರುವುಗಳನ್ನು ಹಾದು ಹೋಗಲಿದ್ದೀರಿ. ಈ ಪುಸ್ತಕವು ನಿಮ್ಮನ್ನು ಪ್ರತಿ ಹಂತದಲ್ಲೂ ಜೊತೆಗೊಯ್ಯುತ್ತದೆ. ಹಾಸ್ಯ ಲೇಪನದ ಮರೆಯಲ್ಲೇ ಪ್ರೇರಣೆಯನ್ನೂ ಇದು ನೀಡುತ್ತದೆ. ಕೊಂಚ ಸಾಹಸ ಪ್ರವೃತ್ತಿಯವರಿಗೆ ತಮ್ಮ ಸಮಾಧಾನವನ್ನು ಕಂಡುಕೊಳ್ಳಲು ಒಂದೊಳ್ಳೆ ಮಾರ್ಗವನ್ನು ಈ ಪುಸ್ತಕ ತೆರೆದಿಡುತ್ತದೆ.

- ನ್ಯೂ ವುಮನ್‌ ಮ್ಯಾಗಜಿನ್‌

‘ಐ ಆ್ಯಮ್‌ ಅನದರ್‌ ಯೂ’ ಪುಸ್ತಕದ ಮೂಲಕ ಪ್ರಿಯಾ ಕುಮಾರ್‌ ನಿಮ್ಮೆಲ್ಲ ಸಮಸ್ಯೆಗೂ ಪರಿಹಾರ ಹುಡುಕಿಕೊಳ್ಳಲು ಸಹಾಯ ಮಾಡುತ್ತಾರೆ.

-ಹಿಂದೂಸ್ಥಾನ್‌ ಟೈಮ್ಸ್

‘ಐ ಆ್ಯಮ್‌ ಅನದರ್‌ ಯೂ’ ಪುಸ್ತಕದಲ್ಲಿ ಲೇಖಕಿಯು ತಾವು ಹಾದು ಬಂದ ರಿವಾಜುಗಳ ಬಗೆಗೆ ಹೇಳುತ್ತಲೇ ಹಲವು ಪರಿಹಾರಗಳನ್ನು ನೀಡುತ್ತಾರೆ. ನಿಮ್ಮ ಮಾನಸಿಕ ಮಿತಿಗಳನ್ನು ತೆಗೆದು ಹಾಕಿ, ಪೂರ್ವಾಗ್ರಹಗಳಿಂದ ಮುಕ್ತರಾದಾಗ ಮಾತ್ರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯ ಎನ್ನುವುದನ್ನು ಈ ಪುಸ್ತಕ ಸ್ಪಷ್ಟಪಡಿಸುತ್ತದೆ.

- ಮುಂಬೈ ಮಿರರ್‌

ಮನುಷ್ಯರ ಸ್ವಭಾವಗಳನ್ನು ಧ್ಯಾನಿಸುತ್ತಾ ತಮ್ಮನ್ನು ಬದಲಿಸಿಕೊಳ್ಳುವುದು ‘ಐ ಆ್ಯಮ್‌ ಅನದರ್‌ ಯೂ’ ಪುಸ್ತಕದ ತಿರುಳು. ಒಮ್ಮೆ ಬಯಸಿದರೆಂದಾದರೆ, ಬದುಕನ್ನು ಬದಲಿಸಬಲ್ಲ ಸಂಗತಿಗಳನ್ನಿದು ತನ್ನ ತೆಕ್ಕೆಗೆ ತೆಗೆದುಕೊಂಡು ಜಯಭೇರಿ ಬಾರಿಸುತ್ತದೆ.

- ದ ಏಷಿಯನ್‌ ಏಜ್‌

ಈ ಪುಸ್ತಕವು ನಿಮ್ಮನ್ನು ಸಂಘರ್ಷಗಳ ಮುಖಾಂತರ ಪ್ರಯಾಣ ಮಾಡಿಸುತ್ತಾ ನಮ್ಮನ್ನು ನಾವು ಗೆದ್ದುಕೊಳ್ಳುವ ಹಂತದವರೆಗೆ ಕರೆದೊಯ್ಯುತ್ತದೆ.

- ಡಿಎನ್‌ಎ

ನೈಜ ಬದುಕಿನ ಅನುಭವಗಳನ್ನು ಮುಂದಿಟ್ಟುಕೊಂಡು ಪ್ರಾಮಾಣಿಕ ನಿರೂಪಣೆಯಿಂದ ಮೂಡಿರುವ ಈ ಪುಸ್ತಕವು ಸಂಘರ್ಷದ ಜೊತೆಜೊತೆಗೆ ಅದನ್ನು ಗೆಲ್ಲುವ ಬಗೆಗಳನ್ನೂ ತಿಳಿಸುತ್ತದೆ. ಅವುಗಳನ್ನು ಬಳಸಿಕೊಂಡು ಯಾರು ಬೇಕಾದರೂ ಯಶಸ್ವಿಯಾಗಬಹುದೆಂದು ಸಾರುತ್ತದೆ.

- ಗಲ್ಫ್ ಟುಡೆ

ಆಕೆ ಅದೆಷ್ಟು ಪ್ರಾಮಾಣಿಕವಾಗಿ ತನ್ನ ವೈಯಕ್ತಿಕ ಸಂಘರ್ಷಗಳನ್ನು ನಿರೂಪಿಸುತ್ತಾ, ಒಳನೋಟಗಳನ್ನು ಕಟ್ಟಿಕೊಡುತ್ತಾ ಬರೆದಿದ್ದಾರೆ ಎಂದರೆ, ದಶಕದಿಂದ ಆಕೆಯ ಪುಸ್ತಕಗಳನ್ನು ಜನರು ಓದುತ್ತಾ ಅವನ್ನು ಭಾರತೀಯ ಪುಸ್ತಕಲೋಕದ ಬೆಸ್ಟ್ ಸೆಲ್ಲರ್‌ ಪಟ್ಟಿಯಲ್ಲಿ ನಿರಂತರವಾಗಿ ಇರಿಸಿದ್ದಾರೆ.

- ಹೆಲೋ ಮ್ಯಾಗಜಿನ್‌, ದುಬೈ

 

ಪುಟಗಳು: 168

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !