Click here to Download MyLang App

ಅಸ್ಪಷ್ಟ ತಲ್ಲಣಗಳು (ಇಬುಕ್)

ಅಸ್ಪಷ್ಟ ತಲ್ಲಣಗಳು (ಇಬುಕ್)

e-book

ಪಬ್ಲಿಶರ್
ಶ್ರೀಮತಿ ಟಿ. ಎಸ್. ಶ್ರವಣ ಕುಮಾರಿ
ಮಾಮೂಲು ಬೆಲೆ
Rs. 90.00
ಸೇಲ್ ಬೆಲೆ
Rs. 90.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

ಬ್ಯಾಂಕ್‌ ಕೆಲಸದಿಂದ ನಿವೃತ್ತರಾದ ಮೇಲೆ ಬರೆಯಲು ಆರಂಭಿಸಿದ ಟಿ.ಎಸ್‌. ಶ್ರವಣಕುಮಾರಿ ಅವರು ಸಾಹಿತ್ಯದ ಉದ್ಯಾನಕ್ಕೆ ಕಥೆ, ಲಲಿತ ಪ್ರಬಂಧದ ಕಾಲುದಾರಿ ಮೂಲಕ ಪ್ರವೇಶ ಪಡೆದವರು. ಮೈತ್ರಿ ಪ್ರಕಾಶನ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ ಪಡೆದು, ಇತ್ತೀಚೆಗಷ್ಟೆ ಹೊರಬಂದ ಅವರ ಕಥಾಸಂಕಲನವೇ ‘ಅಸ್ಪಷ್ಟ ತಲ್ಲಣಗಳು'. ಸಂಕಲನದ ಶೀರ್ಷಿಕೆಯಾದ ಈ ಕಥೆಯೂ ಸೇರಿ, ‘ಅವಳು ಮತ್ತು ಮಗಳು', ‘ಕಾಮಿನಿಯೂ ಚಿಕನ್‌ ಬಿರ್ಯಾನಿಯೂ', ‘ಜೀವನ್ಮುಖಿ' ಕಥೆಗಳು ಗಮನ ಸೆಳೆಯುತ್ತವೆ. ಎಲ್ಲ ಕಥೆಗಳಲ್ಲಿ ಹೆಣ್ಣಿನ ಬದುಕಿನ ತಲ್ಲಣಗಳೇ ತುಂಬಿವೆ. ಆಧುನಿಕ ಸ್ತ್ರೀಲೋಕದ ಸಂಕಟಗಳು ಸಹ ಇಲ್ಲಿನ ಕಥೆಗಳಲ್ಲಿ ಎದುರಾಗಿ ಕಾಡುತ್ತವೆ. ಉದ್ಯೋಗಸ್ಥ ಹೆಣ್ಣಿನ ತಳಮಳಗಳ ಆಪ್ತ ಚಿತ್ರಣವೂ ಢಾಳಾಗಿ ಕಾಣುತ್ತದೆ. ಕೌಟುಂಬಿಕ ಬಿಕ್ಕಟ್ಟುಗಳಲ್ಲಿ ಸಾಕಷ್ಟು ನೋವುಂಡರೂ ಅದನ್ನು ತಾನು ಮೌನವಾಗಿ ಸಹಿಸಿಕೊಳ್ಳಲು ಒಪ್ಪಲಾರೆ ಎಂಬ ಹೆಣ್ಣಿನ ಧ್ವನಿ ಗಟ್ಟಿಯಾಗಿ ಕೇಳುತ್ತದೆ. ಮುನ್ನುಡಿಯಲ್ಲಿ ಶ್ರೀಧರ ಬಳಗಾರ ಅವರು ಹೇಳುವಂತೆ, ‘ಕೌಟುಂಬಿಕ ಬಿಕ್ಕಟ್ಟುಗಳ ಚೌಕಟ್ಟಿನಾಚೆ ಜಿಗಿಯದ ಇಲ್ಲಿನ ಕಥೆಗಳು ಸ್ವಯಂಗೋಡೆಯನ್ನು ನಿರ್ಮಿಸಿಕೊಂಡಿರುವುದು ಒಂದು ಮಿತಿಯಾಗಿ ಪರಿಣಮಿಸಿದೆ'. ಕೃಪೆ - ಪ್ರಜಾವಾಣಿ ಪುಸ್ತಕ ವಿಮರ್ಶೆ

Customer Reviews

No reviews yet
0%
(0)
0%
(0)
0%
(0)
0%
(0)
0%
(0)