Click here to Download MyLang App

ಎಪಿಕ್ ರಂಗಭೂಮಿ (ಇಬುಕ್)

ಎಪಿಕ್ ರಂಗಭೂಮಿ (ಇಬುಕ್)

e-book

ಪಬ್ಲಿಶರ್
ಅಕ್ಷರ ಕೆ.ವಿ.
ಮಾಮೂಲು ಬೆಲೆ
Rs. 70.00
ಸೇಲ್ ಬೆಲೆ
Rs. 70.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಭಾಷೆ ಬೆಳೆಯುವುದು ಅರ್ಥದಿಂದ ಮಾತ್ರವೇ ಅಲ್ಲ, ಅಪಾರ್ಥದಿಂದಲೂ ಕೂಡಾ - ಎನ್ನುವ ಮಾತನ್ನು ಈಚಿನ ಭಾಷಾಶಾಸ್ತ್ರಜ್ಞರು ಹೇಳುತ್ತಾರೆ. 

ಪಾರಿಭಾಷಿಕ ಶಬ್ದಗಳಿಗೆ ಸಂಬಂಧಿಸಿದಂತೆ ಇಂಥ ಅರ್ಥವಿಸ್ತಾರ-ಅರ್ಥಪಲ್ಲಟ ಅಥವಾ ಅಪಾರ್ಥನಿರ್ಮಾಣಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಯಾವುದಾದರೊಂದನ್ನು ಕೊಡಬಹುದಾದರೆ, ಅದು ‘ರಿಯಲಿಸಮ್‌’ ಎಂಬ ಶಬ್ದದ್ದು. ತಾನು ಹೋದ ಕಡೆಯಲ್ಲೆಲ್ಲ ಹೊಸ ಅರ್ಥ-ಅಪಾರ್ಥಗಳನ್ನೇ ಸೃಷ್ಟಿಸಿಕೊಂಡ ಒಂದು ರೋಚಕ ಕಥಾನಕವೇ ಈ ಶಬ್ದದ ಹಿಂದಿದೆ.

‘ಎಪಿಕ್ ರಂಗಭೂಮಿ’ ಎಂಬ ಶಬ್ದದ ಕಥೆಯೂ ಕಡಿಮೆ ಸ್ವಾರಸ್ಯದ್ದೇನಲ್ಲ. 1920ರ ದಶಕದ ಜರ್ಮನಿಯಲ್ಲಿ, ಆ ಕಾಲದ ಸಮಾಜ-ರಾಜಕೀಯಗಳ ಹಾಗೂ ರಂಗಭೂಮಿ ಮತ್ತಿತರ ಕಲೆಗಳ ವಿಶಿಷ್ಟ ಸನ್ನಿವೇಶದಲ್ಲಿ ರೂಪುತಳೆದ ಒಂದು ತಾತ್ವಿಕ ಪರಿಕಲ್ಪನೆ ಇದು. ಮುಂದಿನ ಕೆಲವು ದಶಕಗಳಲ್ಲಿ ಈ ಪರಿಕಲ್ಪನೆಯು ಯುರೋಪಿನ ಬೇರೆ ದೇಶಗಳಿಗೆ ಮತ್ತು ಅಮೇರಿಕಾಕ್ಕೆ ಹರಡಿತು; ಎರಡನೆಯ ಮಹಾಯುದ್ಧ ಮುಗಿಯುವ ವೇಳೆಗಾಗಲೇ ಈ ಪರಿಕಲ್ಪನೆಯು ಪಶ್ಚಿಮದ ಜಗತ್ತಿನಲ್ಲಿ ಸಾಕಷ್ಟು ವಿಶಾಲವಾದ ವ್ಯಾಪ್ತಿಯನ್ನು ಗಳಿಸಿಕೊಂಡಿತ್ತು. ಆ ಮುಂದಿನ ದಶಕಗಳಲ್ಲಿ ಈ ಪರಿಕಲ್ಪನೆಯು ಭಾರತವೂ ಸೇರಿದಂತೆ ಪ್ರಪಂಚದ ಇನ್ನಿತರ ದೇಶಗಳಲ್ಲೂ ಪ್ರಚಾರಕ್ಕೆ ಬಂತು.

ಈ ‘ಎಪಿಕ್ ರಂಗಭೂಮಿ’ ಎಂಬ ಶಬ್ದವನ್ನು ಜನಪ್ರಿಯಗೊಳಿಸಿದ ಪ್ರಖ್ಯಾತ ರಂಗಕರ್ಮಿ ಬರ್ಟೋಲ್ಟ್‌ ಬ್ರೆಖ್ಟ್‌ (1898-1956) ತನ್ನ ಎಲ್ಲ ಬರಹಗಳನ್ನೂ ಬರೆದದ್ದು ಜರ್ಮನ್ ಭಾಷೆಯಲ್ಲಿ. ಹಾಗಾಗಿ ಅದು ಇಂಗ್ಲಿಷ್ ಮತ್ತು ಇನ್ನಿತರ ಐರೋಪ್ಯ ಭಾಷೆಗಳಿಗೆ ಹರಡಿದ್ದು ಅನುವಾದಗಳ ಮೂಲಕ.

ಹಾಗಿದ್ದರೆ, ಇವತ್ತಿನ ಕನ್ನಡದ ಸಂದರ್ಭದಲ್ಲಿ ನಿಂತು, ನಾವು ಈ ಶಬ್ದವನ್ನು ಅರಿಯುವ ಬಗೆ ಏನು? - ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಇರುವ ಒಂದು ಉಪಾಯ, ಈ ಅಧ್ಯಾಯದ ಆರಂಭದಲ್ಲಿಯೇ ಸೂಚಿಸಿದ ಭಾಷಾಶಾಸ್ತ್ರಜ್ಞರ ಧೋರಣೆಯಲ್ಲಿ ನಮಗೆ ಸಿಗುತ್ತದೆ. ಅದು, ಅರ್ಥ ಮತ್ತು ಅರ್ಥದ ಪ್ರಸರಣದ ಸಂದರ್ಭದಲ್ಲಿ ಉದ್ಭವಿಸಿದ ಅನ್ಯಾರ್ಥ- ಅಪಾರ್ಥಗಳೆರಡಕ್ಕೂ ಸಮಾನ ಗೌರವವನ್ನು ಕೊಡುವ ಧೋರಣೆ. ಇಂಥ ಧೋರಣೆಯನ್ನೇ ಮೂಲವಾಗಿಟ್ಟುಕೊಂಡು ಪ್ರಸ್ತುತ ಕಿರುಪುಸ್ತಕವು ‘ಎಪಿಕ್ ರಂಗಭೂಮಿ’ ಎಂಬ ಪರಿಕಲ್ಪನೆಯ ಒಂದು ಚಲನಶೀಲವಾದ ಕಥಾನಕವನ್ನು ಕಟ್ಟಲು ಹೊರಟಿದೆ.

  

ಪುಟಗಳು: 92

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !