Click here to Download MyLang App

ಚಿನಾರ್ ವೃಕ್ಷದ ಅಳು (ಇಬುಕ್)

ಚಿನಾರ್ ವೃಕ್ಷದ ಅಳು (ಇಬುಕ್)

e-book

ಪಬ್ಲಿಶರ್
ಡಾ|| ಬಸವರಾಜ ಸಾದರ
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

‘ಚಿನಾರ್‌ ವೃಕ್ಷದ ಅಳು’ ಕಥಾ ಸಂಕಲನ ವಿಭಿನ್ನ ಹನ್ನೊಂದು ಆಯ್ದ ಕಥೆಗಳನ್ನೊಳಗೊಂಡಿದೆ. ಭಾರತದ ವಿವಿಧ ಭಾಷೆಗಳಲ್ಲಿನ ಸಣ್ಣಕಥೆಗಳನ್ನು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ. ವರ್ತಮಾನದ ಬದುಕಿನ ವಿವಿಧ ತಲ್ಲಣಗಳನ್ನು ಕಟ್ಟಿಕೊಡುವ ಈ ಸಂಕಲನವು ಮನುಕುಲದ ಸ್ಥಿತಿ–ಗತಿಯನ್ನು ತೆರೆದಿಡುತ್ತದೆ.

ಶೀರ್ಷಿಕೆಯೇ ಧ್ವನಿಸುವಂತೆ ಒಂದು ತಲ್ಲಣದ ಕಥೆ ಇದರಲ್ಲಿ ಅಡಗಿದೆ. ಕಾಶ್ಮೀರಿ ಜನತೆಯ ಬದುಕಿನಲ್ಲಿ ಚಿನಾರ್‌ ವೃಕ್ಷ ಬಹಳ ಅಮೂಲ್ಯವಾದದ್ದು. ಕಾಶ್ಮೀರಿ ಸಂಸ್ಕೃತಿಯ ಒಂದು ಭಾಗ ಈ ವೃಕ್ಷ. ಈ ಮರದ ಅವಸಾನದ ನೋವನ್ನು ತಮ್ಮ ಸಂಕಲನದಲ್ಲಿ ಸೇರಿಸಿದ್ದಾರೆ. ಇಂತಹ ಸತ್ಯಗಳು ಮತ್ತು ರಹಸ್ಯಗಳು ಓದುಗನ ಕುತೂಹಲ ಇಮ್ಮಡಿಗೊಳಿಸುತ್ತವೆ. ಧರ್ಮದ ಮೇಲೆ ಪ್ರಭಾವ ಬೀರುವ ಸನ್ನಿವೇಶಗಳು, ಧರ್ಮ ಮತ್ತು ಮನುಷ್ಯನ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನೂ ಈ ಸಂಕಲನದ ಮತ್ತೊಂದು ಕಥೆ ನಿರೂಪಿಸಿದೆ. ಹೀಗೆ ಹನ್ನೊಂದು ಕಥೆಗಳೂ ವಿಭಿನ್ನ ನೆಲೆಗಟ್ಟಿನಲ್ಲಿ, ಮನುಕುಲ, ಸಮಾಜ, ಆಧುನಿಕತೆ ಮತ್ತು ಇವುಗಳ ಪ್ರಭಾವವನ್ನು ಪಾತ್ರಸಹಿತ ವಿವರುಸುತ್ತಾ ಓದುಗನನ್ನು ಚಿಂತನೆಗೆ ಹಚ್ಚಿಬಿಡುತ್ತದೆ. ಆಧುನಿಕತೆಗೆ ತೆರೆದುಕೊಂಡಾಗಿನಿಂದ ಮಾನವನ ಜೀವನ ಶೈಲಿಯಲ್ಲಿ ಬದಲಾವಣೆಗಳು ಹೆಚ್ಚಾದವು. ಬದುಕುವ ರೀತಿಯಲ್ಲಿ ಹೊಸತನ ಇದ್ದರೂ ಅದು ನಕಲಿಯೇನೊ ಎಂಬಂತಾಗಿದೆ. ಮೂಲ ಆಚಾರ–ವಿಚಾರ, ಸಂಪನ್ಮೂಲಗಳನ್ನು ಕಳೆದುಕೊಳ್ಳುತ್ತಾ ತಾಂತ್ರಿಕ ಯುಗದ ಬಂಧನದಲ್ಲಿ ಬಿಗಿಯಾಗಿದ್ದಾನೆ. ಇಂತಹ ಹಲವಾರು ಸಂಕೋಲೆಗಳನ್ನು ಕೃತಿ ತೆರೆದಿಟ್ಟಿದೆ.

- ಪ್ರಜಾವಾಣಿ ವಿಮರ್ಶೆ
https://www.prajavani.net/artculture/book-review/chinar-vrukshada-alu-713839.html  

 

ಪುಟಗಳು: 96

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !