Click here to Download MyLang App

ಜ್ಞಾನಪೀಠಕೆ ಮೆರುಗು ಕನ್ನಡದ ಬೆಡಗು,  ಗೋಪಾಲ್ ಟಿ ಎಸ್,    Jnaanapeethake Merugu Kannadada Bedagu,  Gopal T S ,

ಜ್ಞಾನಪೀಠಕೆ ಮೆರುಗು ಕನ್ನಡದ ಬೆಡಗು (ಇಬುಕ್)

e-book

ಪಬ್ಲಿಶರ್
ಟಿ. ಎಸ್. ಗೋಪಾಲ್
ಮಾಮೂಲು ಬೆಲೆ
Rs. 150.00
ಸೇಲ್ ಬೆಲೆ
Rs. 150.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಭಾರತದ ಅತ್ಯುನ್ನತ ಸಾಹಿತ್ಯಪ್ರಶಸ್ತಿಯೆನಿಸಿರುವ ಜ್ಞಾನಪೀಠಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನೂ ಒಳಗೊಂಡಂತೆ ಸಮಗ್ರಪುಸ್ತಕವೊಂದನ್ನು ಈಗ ಪ್ರಕಟಿಸಲಾಗುತ್ತಿದೆ. ಇದರಿಂದ ಸಾಹಿತ್ಯಾಸಕ್ತರಿಗೆ ಒಂದೇ ಪುಸ್ತಕದಲ್ಲಿ ಎಲ್ಲ ಪುರಸ್ಕೃತರ ವಿವರಗಳನ್ನು ಓದುವ, ಮಾಹಿತಿ ಪಡೆಯುವ ಅವಕಾಶ ಒದಗಿದಂತಾಗಿದೆ. 

 - ಟಿ. ಎಸ್. ಗೋಪಾಲ್

 

ಜ್ಞಾನಪೀಠ ಪ್ರಶಸ್ತಿ - ಏನಿದರ ಹಿರಿಮೆ?


ಭಾರತೀಯ ಸಾಹಿತಿಗಳು ತಮ್ಮ ದೇಶ ಭಾಷೆಯಲ್ಲಿ ರಚಿಸಿದ ಅತ್ಯುತ್ತಮ ಸೃಜನಶೀಲ ಸಾಹಿತ್ಯಕೃತಿಯನ್ನು ಪುರಸ್ಕರಿಸುವುದಕ್ಕಾಗಿ ೧೯೬೧ರಲ್ಲಿ ಸ್ಥಾಪಿತವಾದ ಪ್ರಶಸ್ತಿಯೇ ಜ್ಞಾನಪೀಠ ಪ್ರಶಸ್ತಿ. ಸಾಹು ಶಾಂತಿಪ್ರಸಾದ್ ಜೈನ್ ಎಂಬ ಮಹನೀಯರು ಸ್ಥಾಪಿಸಿದ ಜ್ಞಾನಪೀಠ ಟ್ರಸ್ಟ್ ವತಿಯಿಂದ ವರ್ಷಕ್ಕೊಮ್ಮೆ ಈ ಪುರಸ್ಕಾರವನ್ನು ನೀಡಲಾಗುತ್ತಿದೆ. ನಷ್ಟಭೀತಿಯಲ್ಲಿರುವ ಅಮೂಲ್ಯ ಪುರಾತನ ಕೃತಿಗಳ ಸಂಶೋಧನೆ ಹಾಗೂ ಸಂಪಾದನೆ ಈ ಟ್ರಸ್ಟ್‌ನ ಸ್ಥಾಪನೆಯ ಸಂಕಲ್ಪಗಳಲ್ಲೊಂದು; ಅಂತೆಯೇ ಸಮಕಾಲೀನ ಸೃಜನಾತ್ಮಕ ಕೃತಿಗಳನ್ನು ಗುರುತಿಸಿ ಪ್ರಚುರಪಡಿಸುವ, ಶ್ರೇಷ್ಠ ಲೇಖಕರನ್ನು ಸನ್ಮಾನಿಸುವ ಮಹದುದ್ದೇಶವನ್ನೂ ಸಂಸ್ಥೆ ಹೊಂದಿದೆ. ೧೯೬೧ರಿಂದ ಹಲವು ವರ್ಷಗಳವರೆಗೆ ಈ ಪುರಸ್ಕಾರದ ಮೊತ್ತವಾಗಿ ಒಂದು ಲಕ್ಷ ರೂಪಾಯಿ ನಗದನ್ನೂ ಸರಸ್ವತೀದೇವಿಯ ಪುರಾತನ ವಿಗ್ರಹವೊಂದರ ಪ್ರತಿಕೃತಿಯನ್ನೂ ಪ್ರಶಸ್ತಿಪತ್ರವನ್ನೂ ಕೊಡಲಾಗುತ್ತಿತ್ತು. ೧೯೮೧ರಲ್ಲಿ ಬಹುಮಾನದ ಮೊತ್ತವನ್ನು ಒಂದೂವರೆ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಯಿತು. ೨೦೧೫ರ ವೇಳೆಗೆ ಬಹುಮಾನದ ಮೊತ್ತವನ್ನು ಹನ್ನೊಂದು ಲಕ್ಷ ರೂಪಾಯಿಗಳಿಗೆ ಹಿಗ್ಗಿಸಲಾಯಿತು.

 

 

 

ಪುಟಗಳು: 248

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !