Click here to Download MyLang App

ಈಸೋಪನ ಲೋಕನೀತಿ ಕಥೆಗಳು (ಇಬುಕ್)

ಈಸೋಪನ ಲೋಕನೀತಿ ಕಥೆಗಳು (ಇಬುಕ್)

e-book

ಪಬ್ಲಿಶರ್
ಆನಂದ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

GET FREE SAMPLE

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಈಸೋಪನ ಲೋಕನೀತಿ ಕಥೆಗಳು ಆನಂದ ಅವರ ಸಂಗ್ರಹ - ರೂಪಾಂತರ ಪುಸ್ತಕ. ಈ ನೀತಿಕಥೆಗಳಲ್ಲಿ ಮನುಷ್ಯ ಪಾತ್ರಗಳಿಗಿಂತ ಪ್ರಾಣಿ-ಪಕ್ಷಿಗಳ ಪಾತ್ರಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಪ್ರಾಣಿ-ಪಕ್ಷಿ-ಮನುಷ್ಯ ಪಾತ್ರಗಳು ಪರಸ್ಪರ ಸಂಭಾಷಿಸುತ್ತವೆ. ಈ ಸಂಭಾಷಣೆಯು ಅಸಹಜವೂ, ಅಲೌಕಿಕವೂ, ಅಸಂಭವವೂ ಆಗಿದ್ದರೂ ಸಹ ಇದು ಜನಪದರ ನಿಸರ್ಗಪ್ರಿಯತೆಗೆ ಸಾಕ್ಷಿಯಾಗಿದೆ. ಹಾಗೆಯೇ ಮಾನವ-ಮಾನವೇತರ ಜೀವಸಂಕುಲದ ನಡುವೆ ಇರಲೇಬೇಕಾದ ಸಹಬಾಳ್ವೆಯ ಸಂಬಂಧವನ್ನು ಮನಗಾಣಿಸುತ್ತವೆ. ಸುಮಾರು ನೂರಿಪ್ಪತ್ತು ಕಥೆಗಳಿರುವ ಈ ಸಂಕಲನದಲ್ಲಿ ಕಥಾಹಂದರಕ್ಕೆ ಸಂಬಂಧಿಸಿದಂತೆ ಸುಮಾರು ನೂರಾಹತ್ತು ಚಿತ್ರಗಳನ್ನು ನೀಡಲಾಗಿದೆ. ಇದು ಓದುಗರು ಮತ್ತಷ್ಟು ಕುತೂಹಲಿಗಳಾಗಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಕಥಾವಿನ್ಯಾಸ, ನಿರೂಪಣೆಯ ಧಾಟಿ, ಪಾತ್ರಗಳ ಪೋಷಣೆ ಹಾಗೂ ಹೆಸರುಗಳು ಓದುಗರಲ್ಲಿ ಕುತೂಹಲ ಮತ್ತು ಆಸಕ್ತಿಯನ್ನುಂಟು ಮಾಡುತ್ತವೆ. ಗಾದೆ ಮತ್ತು ಒಗಟುಗಳ ವಿವರಣೆಯಂತಿರುವ ಈ ಕಥೆಗಳು ಲೌಕಿಕ ಜ್ಞಾನದ ಜೊತೆಗೆ ಸಾಮಾಜಿಕ ವಿವೇಕವನ್ನು ಬೆಳೆಸುತ್ತವೆ. ಆಧುನಿಕತೆಯ ಭರಾಟೆಯಲ್ಲಿ, ಯಂತ್ರ ನಾಗರಿಕತೆಗೆ ಮನಸೋತು, ಸದಾ ನಿರ್ಜೀವಿ ವಸ್ತುಗಳಂತೆ ಬದುಕುತ್ತಿರುವ ಹಾಗೂ ದಣಿಯುತ್ತಿರುವ, ಈ ಲೋಕದ ಪ್ರತಿಯೊಂದು ಜೀವಿಯನ್ನು ಭೋಗದ ವಸ್ತುವಂತೆ ಕಾಣುತ್ತಿರುವ ಈ ನಾಗರಿಕ ಸಮಾಜಕ್ಕೆ ನಿಸರ್ಗ ಹಾಗೂ ಸಾಮಾಜಿಕ ಜ್ಞಾನವನ್ನು ಈ ನೀತಿ ಕಥೆಗಳು ನೀಡುತ್ತವೆ. - ವಿಕಿಪೀಡಿಯಾ ಪರಿಚಯ (https://kn.wikipedia.org/s/13r5) 

 

ಪುಟಗಳು: 232

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !