Click here to Download MyLang App

ಅಭಿಜಾತ ಕನ್ನಡ (ಇಬುಕ್)

ಅಭಿಜಾತ ಕನ್ನಡ (ಇಬುಕ್)

e-book

ಪಬ್ಲಿಶರ್
ಶ್ರೀರಾಮ ಭಟ್ಟ
ಮಾಮೂಲು ಬೆಲೆ
Rs. 140.00
ಸೇಲ್ ಬೆಲೆ
Rs. 140.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಇದು ಡಿಜಿಟಲ್ ಇಬುಕ್ (ಓದುವ ಪುಸ್ತಕ) ಆಗಿದೆ. ಕೊರಿಯರ್ ಮೂಲಕ ಕಳುಹಿಸುವ ಮುದ್ರಿತ ಪುಸ್ತಕವಲ್ಲ, ಖರೀದಿಸಿದ ತಕ್ಷಣ ನಿಮ್ಮ Android ಅಥವಾ iPhone ಮೊಬೈಲ್‌ನಲ್ಲಿ MyLang ಆಪ್ ಮೂಲಕ ಓದಬಹುದು. ಆಪ್ ಲಾಗಿನ್ ಮತ್ತು ಚೆಕ್‌ಔಟ್‌ನಲ್ಲಿ ಒಂದೇ ಫೋನ್ ನಂಬರ್ ಬಳಸಿ.

Please note: This is a digital ebook — not a printed book, so no courier will be sent. Once purchased, it is instantly available to read on the MyLang app on your Android or iPhone. Please use the same phone number for app login and at checkout so your purchase appears in your MyLang bookshelf automatically.

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

'ಅಭಿಜಾತ ಕನ್ನಡ'ವೆಂಬ ಹೆಸರಿನ ಈ ಕಿರುಬರಹಗಳ ಸಂಕಲನವು ತನ್ನ ಹೆಸರಿನಲ್ಲಿರುವ ಎರಡೂ ಪದಗಳನ್ನೂ ಭೂತಗನ್ನಡಿಯಡಿಗೆ ಇಡುತ್ತದೆ - `ಅಭಿಜಾತ'ವೆಂದರೆ ಏನು? ಅದು ಬಹುಕಾಲದಿಂದ ಬಾಳಿದ್ದಕ್ಕೆ ಭಾಷೆಗೆ ಒದಗಿಬಂದ ವಿಶೇಷಣವೆ? ಅಥವಾ, ಸರ್ಕಾರವೊಂದು ತನ್ನ ನಾಡಿನ ಭಾಷೆಯೊಂದಕ್ಕೆ ದಯಪಾಲಿಸಿದ ಬಿರುದು ಮಾತ್ರವೆ? ಅಥವಾ, ಇನ್ನೂ ಪ್ರಾಥಮಿಕವಾಗಿ `ಕನ್ನಡ'ವೆಂದರೆ ಏನದು? ಅದು ಸಾವಿರಾರು ವರ್ಷಗಳಿಂದ ನಮ್ಮ ನಾಡಿನ ಪರಸ್ಪರರ ಸಂಪರ್ಕಕ್ಕೆ ಸಹಾಯಕವಾಗಿ ಬೆಳೆದುಕೊಂಡ ಮಾಧ್ಯಮ ಮಾತ್ರವೆ?  ಅಥವಾ ಅದು ಒಂದು ನಾಡಿನ ಹಲವು ಸ್ಮೃತಿಕೋಶಗಳ ಸಮುಚ್ಚಯವೆ? - ಈ ಬಗೆಯ ತಾತ್ತ್ವಿಕ ಪ್ರಶ್ನೆಗಳಿಗೆ ನಮ್ಮ ನಾಡಿನ ಹಿರಿಯ ವಿದ್ವಾಂಸರಾದ ಶ್ರೀರಾಮ ಭಟ್ಟರು ಈ ಸಂಕಲನದ ಬರಹಗಳ ಮೂಲಕ ತುಂಬ ತಿಳಿಯಾದ ಮಾತುಗಳಲ್ಲಿ ಪರೋಕ್ಷ ಉತ್ತರ ಕೊಡುತ್ತಾರೆ.  ಈ ಪುಸ್ತಕದ ಒಂದೊಂದೂ ಬರಹವು ಕನ್ನಡ ವಾಙ್ಮಯದಿಂದ ಒಂದು ಪದವನ್ನೋ, ಪರಿಭಾಷೆಯನ್ನೋ, ಘಟನೆಯನ್ನೋ, ಅಥವಾ ಒಂದು ಉಲ್ಲೇಖವನ್ನೋ ಎತ್ತಿಕೊಂಡು, ಅದನ್ನು ಬಗೆಬಗೆಯ ಭಾಷಾ-ಸಾಹಿತ್ಯ-ಸಂದರ್ಭಗಳಲ್ಲಿ ಕಂಡರಿಸುತ್ತ, ಭಾಷೆ-ಸಾಹಿತ್ಯಗಳು ನಡೆಸುವ ಸಂಕೀರ್ಣ ಕೊಡುಕೊಳೆಯ ವ್ಯವಹಾರಗಳನ್ನು ತೆರೆದಿಡುತ್ತದೆ.  ಮಾತ್ರವಲ್ಲ, ಇಂಥ ಸಂಬಂಧದ ತಿಳುವಳಿಕೆಯ ಮೂಲಕವೇ ಕನ್ನಡವು ತನ್ನ ಅಭಿಜಾತತೆಯನ್ನು ಅನ್ವೇಷಿಸಿಕೊಳ್ಳಬೇಕು - ಎಂಬ ಅವ್ಯಕ್ತ ಸೂಚನೆಯೂ ಈ ಬರಹಗಳ ಹಿಂದಿರುವಹಾಗಿದೆ.  ಓದುವುದಕ್ಕೆ ಭಾರವಾಗದ, ಆದರೆ ಘನವಾದ ಪಾಂಡಿತ್ಯ ಮತ್ತು ವಿಸ್ತಾರವಾದ ಓದಿನಿಂದ ಕನ್ನಡ ನುಡಿಯನ್ನು ಕುರಿತ ನಮ್ಮ ತಿಳಿವನ್ನು ಗಟ್ಟಿಗೊಳಿಸುವ ಅಪೂರ್ವ ಲೇಖನಗಳು ಇಲ್ಲಿವೆ.

ಅಕ್ಷರ ಕೆ.ವಿ.

 

ಪುಟಗಳು: 210

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !