
"ಪುಟಕ್ಕೊಂದು ಪುಟ್ಟ ಕಥೆಗಳು" ನೇರವಾಗಿ ವಿಷಯಕ್ಕೆ ಬರುವ ಕಥೆಗಳು. ಇಲ್ಲಿ ಪುಟಗಟ್ಟಲೆ ಪರಿಸರ ಕಟ್ಟಿಕೊಡುವ, ಪಾತ್ರ ಪರಿಚಯ ಮಾಡುವ ಗೋಜಿಗೆ ಹೋಗಿಲ್ಲ. ಚಿಕ್ಕದಾಗಿ ಚೊಕ್ಕದಾಗಿ ಏನು ಹೇಳಬೇಕೊ ಅದನ್ನು ಹೇಳಲು ಪ್ರಯತ್ನಿಸಲಾಗಿದೆ. ಕೆಲವೊಂದು ಕಥೆಗಳನ್ನು ಓದಿದ ಮೇಲೆ ಇದನ್ನೆಲ್ಲೊ ಕೇಳಿದ್ದೆನಲ್ಲ, ಓದಿದ್ದೆನಲ್ಲ ಎನಿಸಬಹುದು. ಏಕೆಂದರೆ ಇವೆಲ್ಲ ನಮ್ಮೆಲ್ಲರ ದಿನ ನಿತ್ಯದ ಜೀವನದಲ್ಲಿ ನಡೆದ, ನಡೆಯಬಹುದಾದ ಕಥೆಗಳು. ಕೆಲವೊಮ್ಮೆ ಕಿರುಚಿತ್ರ ನೋಡಿದ ಅನುಭವವಾಗಬಹುದು ಅಥವಾ ಸಿನಿಮಾದ ಒಂದು ದೃಶ್ಯ ಅನಿಸಿದರೂ ಅನಿಸಬಹುದು.
ಇಲ್ಲಿ ಒಟ್ಟು ಐವತ್ತು ಸಣ್ಣ ಕಥೆಗಳಿವೆ. ನೀವು ಮೊದಲ ಪುಟದಿಂದಲೆ ಓದಬೇಕೆಂದಿಲ್ಲ. ಯಾವುದೊ ಪುಟ ತೆರೆದು ಓದಬಹುದು. ಇಲ್ಲಿನ ಎಲ್ಲ ಕಥೆಗಳು ಸ್ವತಂತ್ರವಾದುವು.