Click here to Download MyLang App

ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ (ಪ್ರಿಂಟ್ ಪುಸ್ತಕ)

ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ಮಾಮೂಲು ಬೆಲೆ
Rs. 400.00
ಸೇಲ್ ಬೆಲೆ
Rs. 400.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಭಾರತದ ಚರಿತ್ರೆಯಲ್ಲಿ ನಮ್ಮ ಕರುನಾಡಿಗೆ ವಿಶಿಷ್ಟ ಸ್ಥಾನವಿದೆ. ಇದಕ್ಕೆ ಕಾರಣ ಈ ನಾಡನಾಳ್ವಿಕೆ ಮಾಡಿ ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ವಿವಿಧ ಕಾಲಘಟ್ಟದಲ್ಲಿನ ಸಾಮಾಜ ಮತ್ತು ಸಂಸ್ಥಾನಗಳ ರಾಜ-ಮಹಾರಾಜರು ಕಾರಣರಾಗಿದ್ದಾರೆ. ಬಹುಮುಖ್ಯವಾಗಿ ಆಯಾಕಾಲದಲ್ಲಿ ಜೀವಿಸಿದ್ದ ಪಂಡಿತರು, ಸಾಹಿತಿಗಳು, ಶಿಲ್ಪ ಹಾಗೂ ಚಿತ್ರ ಕಲಾವಿದರು, ಕೃಷಿಕರು, ವಿಭಿನ್ನ ಶ್ರಮ ವೃತ್ತಿಯ ಜನಸಮುದಾಯದವರ ಕೊಡುಗೆ ಅಪಾರವಾಗಿದೆ. ಇಂದಿನ ಸಂದರ್ಭದಲ್ಲಿ ಚರಿತ್ರೆ ಅಧ್ಯಯನ ಮತ್ತು ರಚನೆ ಬಹುಸೂಕವಾದದು, ಆ ಸೂಕ ತೆ ಕೈತಪಿದರೆ ಅದರ ಸಿದ್ದಾಂತ ಸೂತ ಹರಿದ ಪಟದಂತಾಗುತ್ತದೆ ಎಂಬುದಕ್ಕೆ ಅನೇಕ ಜ್ವಲಂತ ನಿದರ್ಶನಗಳು ನಮ್ಮ ಮುಂದಿವೆ. ಸಮಕಾಲೀನ ಚರಿತ್ರೆಯನ್ನು ವಾಸ್ತವದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದುಕನ್ನು ಸರಳವಾಗಿ ಸ್ನೇಹಮನೋಭಾವನೆಯಿಂದ ಬೆಸೆಯುವ ಉಪಕರಣವಾಗಿ ಬಳಸಬೇಕು ಹಾಗೂ ಅ ಚರಿತ್ರೆಯು ವಾಸ್ತವ ಹಾಗೂ ಭವಿಷ್ಯದ ಬದುಕಿಗೆ ಸಂಪರ್ಕ ಕಲಿಸುವ ಸೇತುವೆಯಾಗಬೇಕು ಎಂಬುದು ಚರಿತ್ರೆಕಾರರ ಆಶಯವೂ ಆಗಿದೆ. ಕನ್ನಡ ನಾಡಿನಲ್ಲಿ ವಿಜಯನಗರ ಸಾಮ್ರಾಜ್ಯದ ಚರಿತ್ರೆಗೆ ವಿಶೇಷ ಸ್ಥಾನವಿದೆ. ಇದಕ್ಕೆ ಕಾರಣ ಮಧ್ಯಕಾಲೀನ ಚರಿತ್ರೆ ರಚನೆಯಲ್ಲಿ ದೇಶ-ವಿದೇಶಗಳ ಚರಿತ್ರೆಕಾರರು ಅತ್ಯಂತ ಹೆಚ್ಚು ಗಮನ ಹರಿಸಿದ್ದು ಈ ಸಂಧರ್ಭದಲ್ಲಿನ ಸಾಂಸ್ಕೃತಿಕ ಪಲ್ಲಟಗಳ ಕುರಿತೇ ಎಂಬುದು ಕಾರಣವಾಗಿದೆ. ಮೇಲಿನ ಆಶಯದೊಂದಿಗೆ ರಚನೆಗೊಂಡಿರುವ ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನಗಳ ಸಾಂಸ್ಕೃತಿಕ ಚರಿತ್ರೆ ಎಂಬ ಈ ಕೃತಿ ರಾಜಕೀಯೇತರವಾಗಿ ವಿಭಿನ್ನ ನೆಲೆಯಲ್ಲಿ ಸಾಂಸ್ಕೃತಿಕವಾದ ಚಾರಿತ್ರಿಕ ಅಂಶಗಳನ್ನು ಸಮಗ್ರವಾಗಿ ಚರ್ಚಿಸುತ್ತದೆ. ವಿಜಯನಗರ ಸಾಮ್ರಾಜ್ಯ ಹಾಗು ಇಕ್ಕೇರಿ, ಮೈಸೂರು ಸಂಸಾನಗಳ ರಾಜಮಹಾರಾಜರ ಬಿರುದು-ಬಾವಲಿಗಳನ್ನು, ಅವರ ದಂಡಯಾತ್ರೆ, ಯುದ್ದ, ದಾಳಿಗಳನ್ನು ಹೊರತುಪಡಿಸಿ ಜನಕೇಂದ್ರಿತ ಸೂಕ್ಷ್ಮ ಸಂವೇದನೆಯ ಸಾಂಸ್ಕೃತಿಕ ಅಧ್ಯಯನಕ್ಕೆ ಓದುಗರನ್ನು ಈ ಕೃತಿ ತೊಡಗಿಸುತ್ತದೆ. ಇಂಥ ಬಹುಸೂಕ್ಷ. ವಸ್ತುವಿಷಯವನ್ನು ಕೇಂದ್ರವನ್ನಾಗಿಸಿಕೊಂಡು ಸಂಶೋಧನಾತ್ಮಕ ಕೃತಿಯನ್ನು ಸಿದ್ಧಪಡಿಸಿರುವ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ ಅವರಿಗೆ ಅಭಿನಂದನೆಗಳು.


ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 460

Customer Reviews

No reviews yet
0%
(0)
0%
(0)
0%
(0)
0%
(0)
0%
(0)