Click here to Download MyLang App

ವಿಜಯಕ್ಕೆ ಐದು ಮೆಟ್ಟಿಲು (ಪ್ರಿಂಟ್ ಪುಸ್ತಕ)

ವಿಜಯಕ್ಕೆ ಐದು ಮೆಟ್ಟಿಲು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಯಂಡಮೂರಿ ವೀರೇಂದ್ರನಾಥ್
ಮಾಮೂಲು ಬೆಲೆ
Rs. 225.00
ಸೇಲ್ ಬೆಲೆ
Rs. 225.00
ಬಿಡಿ ಬೆಲೆ
ಇಶ್ಟಕ್ಕೆ 

 

ಪುಸ್ತಕಗಳ ಸಂಖ್ಯೆ ಹೆಚ್ಚಿದೆ,ಮನುಷ್ಯರ ಆಯಸ್ಸು ಕಡಿಮೆ ಇದೆ. ಮನುಷ್ಯ ತನ್ನ ಆಯಸ್ಸಿನ ಮೇಲೆ ತನ್ನ ಆಕ್ಟಿವಿಟಿಗಳನ್ನ ನಿರ್ಧರಿಸಿಕೊಳ್ಳಬೇಕಿದೆ..ಸಿಕ್ಕಿರುವ ಕಡಿಮೆ ಆಯಸ್ಸಿನಲ್ಲಿ ಹೆಚ್ವು ಸಂತೋಷವಾಗಿ ಬದುಕುವ ಗುರಿ ಮನುಷ್ಯನಿಗಿರಬೇಕು. ಒಂದೊಂದು ಪುಸ್ತಕವು ನಮ್ಮ ಜೀವನವನ್ನು ಸುಂದರಗೊಳಿಸಲು ಸಹಾಯವಾಗುವಂತಿರಬೇಕು,ನಮ್ಮನ್ನು ದಿನ ನಿತ್ಯ ಕಾಡುವ ಸಮಸ್ಯೆಗಳು ಚಿಕ್ಕದಾಗಿ ಕಂಡರೂ ಅವು ನಮ್ಮ ಆಯಸ್ಸನ್ನು ತಿನ್ನುತ್ತವೆ.ಇರುವ ಕಡಿಮೆ ಆಯಸ್ಸನ್ನು ಈ ವಿಚಾರಗಳಿಗೆ ವ್ಯಯಿಸಿದರೆ ನಾವು ಸಂತೋಷವನ್ನು ಈ ಭೂಮಿಯಲ್ಲಿ ಕಾಣಲು ಸಾಧ್ಯವಿಲ್ಲ.ಮನುಷ್ಯ ಭಾವನ ಜೀವಿಯಾಗಿರುವುದರಿಂದ ಅತ ತನ್ನ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವುದು ಹೇಗೆ? ಕೋಪದ ಮೇಲೆ ನಿಯಂತ್ರಣ ಹೇಗೆ? ಪ್ರೇಮದಲ್ಲಿ ಸೋತರೆ ಆ ಸಮಸ್ಯೆಯಿಂದ ಹೊರ ಬರುವುದು ಹೇಗೆ?.ಮದುವೆ ಬಗೆಗಿನ ನಿರ್ಧಾರ ಹೇಗೆ?ವೃತ್ತಿ ಬಗೆಗಿನ ನಿರ್ಧಾರ ಹೇಗೆ? ಹೀಗೆ ಜೀವನವನ್ನು ಸುಂದರಗೊಳಿಸಲು ನಾವು ನಿರ್ಧಾರ ಮಾಡುವ ಬಗ್ಗೆ ತಿಳಿದಿರಬೇಕು.ಇಂತಹ ವಿಚಾರಗಳನ್ನು ತಿಳಿಸುವ ಪುಸ್ತಕಗಳು ನನ್ನ ಪ್ರಕಾರ ಬೇರೆ ಯಾವುದೇ ಸಾಹಿತ್ಯ ಪುಸ್ತಕಗಳಿಗಿಂತ ಮುಖ್ಯವಾದವುಗಳೆಂದೆನಿಸುತ್ತವೆ.

ಶಾಲೆಗಳಲ್ಲಿ ಇಂತಹ ಮುಖ್ಯವಾದ ವಿಚಾರಗಳ ಬಗ್ಗೆ ಮಕ್ಕಳಿಗೆ ಕಲಿಸುವುದನ್ನು ನಾನು ನೋಡಿಲ್ಲ.ಹಾಗಾಗಿ ಪುಸ್ತಕಗಳಿಂದಾದರೂ ಈ ವಿಷಯ ಮಕ್ಕಳಿಗೆ ತಲುಪಿದರೆ ಒಳ್ಳೆಯದು..ನನ್ನನ್ನು ಹೆಚ್ಚು ಪ್ರಭಾವಿಸಿದ ವ್ಯಕ್ತಿಗಳಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರು ಮುಖ್ಯವಾದವರು..ನಾನು ಸಾಹಿತ್ಯ ಓದಲೂ ಪ್ರಾರಂಭಿಸಿದಾಗ ನನಗೆ ಜೀವನ,ಸಾವು,ಆಧ್ಯಾತ್ಮ ದ ಬಗ್ಗೆ ತಿಳಿಯುವುದಕ್ಕಿಂತ ನನ್ನ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರ ಬೇಕಿತ್ತು, ನನ್ನ ಜೀವನದ ಪ್ರಮುಖವಾದ ವಿಚಾರಗಳ ಬಗ್ಗೆ ನಿರ್ಧಾರ ಮಾಡುವುದು ಹೇಗೆ ಎಂದು ತಿಳಿಯಬೇಕಿತ್ತು ಅಂತಹ ಸಂದರ್ಭದಲ್ಲಿ ವಿಜಯಕ್ಕೆ ಐದು ಮೆಟ್ಟಿಲು ಪುಸ್ತಕ ನನಗೆ ಮಾರ್ಗದರ್ಶಿಯಾಯಿತು.ಈ ಪುಸ್ತಕ ದಿಂದ ಅಯನ್ ರೆಂಡ್,ಅಲ್ಬರ್ಟ ಎಲ್ಲೀಸ್ ರಂತಹ ಲೇಖಕರು ಮಾತ್ರವಲ್ಲದೆ ಹಲವು ಉತ್ತಮ ಮನಃಶಾಸ್ತ್ರದ, ವೈಕ್ತಿತ್ವ ವಿಕಾಸನ ಪುಸ್ತಕಗಳು ಪರಿಚಯವಾದವು.

ಕೃಪೆ  https://pustakapremi.wordpress.com

ಪುಟಗಳು : 472

Customer Reviews

No reviews yet
0%
(0)
0%
(0)
0%
(0)
0%
(0)
0%
(0)