Click here to Download MyLang App

ಸ್ಟಾರ್ಟ್ಅಪ್ ನೀವೂ ಕಟ್ಟಬಹುದು! - ಭಾಗ 1 (ಆಡಿಯೋ  ಬುಕ್)

ಸ್ಟಾರ್ಟ್ಅಪ್ ನೀವೂ ಕಟ್ಟಬಹುದು! - ಭಾಗ 1 (ಆಡಿಯೋ ಬುಕ್)

audio book

ಪಬ್ಲಿಶರ್
ಸತ್ಯೇಶ್ ಬೆಳ್ಳೂರ್
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಓದಿಕೊಂಡಿದ್ದೀನಿ. ಡಿಗ್ರಿ ಬಂದಾಯ್ತು. ಬೇರೊಬ್ಬರಿಗೆ ಕೆಲಸ ಮಾಡುವ ಮನಸ್ಸಿಲ್ಲ.

ಸ್ಟಾರ್ಟ್ಅಪ್ ಕಂಪನಿಯೊಂದನ್ನು ಶುರು ಮಾಡುವ ಬಯಕೆ. ಆದರೆ...

ಐದಾರು ವರ್ಷ ದುಡಿದಿದ್ದೀನಿ. ಕೆಲಸದ ಅನುಭವವೂ ಸಾಕಷ್ಟಿದೆ.
ಸ್ಟಾರ್ಟ್ಅಪ್ ಕಂಪನಿಯೊಂದನ್ನು ಶುರು ಮಾಡುವ ಆಸೆ. ಆದರೆ...

ಜೀವನವೆಲ್ಲ ಇನ್ನೊಬ್ಬರಿಗೆ ದುಡಿದದ್ದೇ ಆಯಿತು.
ಸ್ಟಾರ್ಟ್ಅಪ್ ಕಂಪನಿಯೊಂನ್ನು ಶುರು ಮಾಡುವ ಅಪೇಕ್ಷೆ. ಆದರೆ...

ನಾವು ನಾಲ್ವರು ಸ್ನೇಹಿತರು ಒಂದುಗೂಡಿದಾಗಲೆಲ್ಲ ನಮ್ಮದು ಏಕಚಿತ್ತ.
ಸ್ಟಾರ್ಟ್ಅಪ್ ಕಂಪನಿಯೊಂದನ್ನು ಶುರು ಮಾಡುವ ಇರಾದೆ. ಆದರೆ...

ಇಂತಹ ಆಕಾಂಕ್ಷೆಗಳು ಈಗ ಬಹುತೇಕರಲ್ಲಿದ್ದರೂ ಅವರಿಗೆ ಮುಂದುವರೆಯಲು
ಏನೋ ಆತಂಕ. ಏನೋ ಅಸ್ಪಷ್ಟವಾದ ಅಳುಕು. "ಆದರೆ..." ಎಂಬ ಪಿಡುಗು!

ಈ "ಆದರೆ..." ಎಂಬುದನ್ನು ದೂರ ಮಾಡುವುದೇ ಈ ಕೃತಿಯ ಉದ್ದೇಶ.

"ಸಿಲಿಕಾನ್ ವ್ಯಾಲಿ"ಯ ಕಥನದೊಂದಿಗೆ ಶುರುವಾಗಿ, ಸ್ಟಾರ್ಟ್ಅಪ್ ಕಂಪನಿಯೊಂದನ್ನು ಶುರು ಮಾಡುವುದು ಹೇಗೆಂಬುದರ ಚಿತ್ರಣವೇ ಈ ಕೃತಿಯ ಜೀವಾಳ. ಇದು ಕನ್ನಡದಲ್ಲಿ "ಬಿಸಿನೆಸ್ ಗುರು" ಎಂದೇ ಪರಿಚಯವಾಗಿರುವ ಸತ್ಯೇಶ್ ಎನ್.ಬೆಳ್ಳೂರ್ ಅವರ ಸ್ವಂತ ಅನುಭವದಿಂದ ಹೊರಹೊಮ್ಮಿರುವ ಮಾರ್ಗದರ್ಶಕ.

ಹೌದು. ಸ್ಟಾರ್ಟ್ಅಪ್ ಕಂಪನಿಯೊಂದನ್ನು ಯಾರೂ ಕಟ್ಟಬಹುದು.
ನೀವೇ ಯಾಕಾಗಬಾರದು? ಪ್ರಯತ್ನಿಸಿ...


ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

 

ಕನ್ನಡದಲ್ಲಿ ಸ್ಟಾರ್ಟ್ ಅಪ್ ಕುರಿತಂತೆ ಮೂಡಿ ಬಂದ ಅಪರೂಪದ ಪುಸ್ತಕ "ಸ್ಟಾರ್ಟ್ ಅಪ್ ನೀವೂ ಕಟ್ಟಬಹುದು".

 

ನಾನೊಂದು ಸ್ಟಾರ್ಟಪ್ ಕನಸು ಕಂಡೆ..!!|Sathyesh Bellur|How to Start a StartUp?

 

ಕ್ಯಾಪ್ಟನ್ ಗೋಪಿನಾಥ್ ಅವರಿಂದ ಸ್ಟಾರ್ಟ್ ಅಪ್ ಪುಸ್ತಕ ಬಿಡುಗಡೆ

ಸತ್ಯೇಶ್ ಅವರು ಬಹುಮುಖ ಪ್ರತಿಭೆಯ ಅಸಾಧಾರಣ ವ್ಯಕ್ತಿ. ಅವರು ಹಲವಾರು ಸಂಸ್ಥೆಗಳಲ್ಲಿ, ಸ್ಟಾರ್ಟ್ ಅಪ್ ಗಳಲ್ಲಿ ಕೆಲಸ ಮಾಡಿ ಪಡೆದಿರುವ ಒಳನೋಟಗಳನ್ನು ಈ ಪುಸ್ತಕದಲ್ಲಿ ತಂದಿದ್ದಾರೆ. ಈ ಒಳನೋಟ ಅನುಭವದಿಂದಲೇ ಬರಬೇಕಾದದ್ದು. ಅದು ಸತ್ಯೇಶ್ ಅವರಿಗೆ ಇರುವುದರಿಂದಲೇ ಈ ಪುಸ್ತಕ ಅವರಿಗೆ ಬರೆಯಲು ಸಾಧ್ಯವಾಗಿದೆ. ಈ ಕಾಲಕ್ಕೆ ಇದು ಅತ್ಯಂತ ಬೇಕಾದಂತಹ, ಬಹಳ ಉಪಯುಕ್ತವಾದ ಪುಸ್ತಕ. Dare to dream and begin it. Boldness has genius and magic to it. ಅಂತನ್ನುವ ಮಾತಿದೆ. ನಮ್ಮ ಕನಸು ನನಸಾಗಲು ಸಾಹಸ, ಶ್ರದ್ಧೆ ಮತ್ತು ಛಲ ಇರಬೇಕು.  ಪ್ರತಿಭೆಯೊಂದೇ ಇದ್ದರೆ ಸಾಲದು, ಪ್ರತಿಭೆ ಜೊತೆ ಹಟಬಿಡದ ಛಲ ಇರಬೇಕು. ನಿಮ್ಮ ಕನಸು ನಿಮ್ಮದು ಮಾತ್ರ. ಅದರ ಹುಚ್ಚು ನಿಮ್ಮನ್ನು ಆವಾಹಿಸಿಕೊಳ್ಳಬೇಕು. ಉದ್ಯಮಿಯಾಗಲು, ಸ್ಟಾರ್ಟ್ ಅಪ್ ಕಟ್ಟಲು ಏನು ಬೇಕು ಅನ್ನುವ ಬಗ್ಗೆ ಒಳ್ಳೆಯ ವಿಷಯ ಸತ್ಯೇಶ್ ಈ ಪುಸ್ತಕದ ಮೂಲಕ ತಂದಿದ್ದಾರೆ. ಈ ಪುಸ್ತಕ ಉದ್ಯಮ ಕಟ್ಟುವ ಕನಸು ಕಾಣುವ ಪ್ರತಿಯೊಬ್ಬರೂ ಓದಬೇಕು.

- ಕ್ಯಾಪ್ಟನ್ ಗೋಪಿನಾಥ್, ಏರ್ ಡೆಕ್ಕನ್ ಮತ್ತು ಡೆಕ್ಕನ್ ಏವಿಯೇಶನ್ ಸ್ಥಾಪಕರು

 

 

 

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)