Click here to Download MyLang App

ಶ್ರೀ ಮಹಾಭಾರತ ಸಂಪುಟ 1 ರಿಂದ 4 (ಪ್ರಿಂಟ್ ಪುಸ್ತಕ)

ಶ್ರೀ ಮಹಾಭಾರತ ಸಂಪುಟ 1 ರಿಂದ 4 (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಜಿ.ಎನ್. ರಂಗನಾಥರಾವ್
ಮಾಮೂಲು ಬೆಲೆ
Rs. 1,300.00
ಸೇಲ್ ಬೆಲೆ
Rs. 1,300.00
ಬಿಡಿ ಬೆಲೆ
ಇಶ್ಟಕ್ಕೆ 

 ಲೇಖಕರು: ಶೇಷಗಿರಿ ರಾವ್ ಎಲ್ ಎಸ್

ಅನುವಾದಕರು: ರಂಗನಾಥ ರಾವ್ ಜಿ ಎನ್

ಒಂದೊಂದು ಸಂಪುಟವೂ ಸುಮಾರು ಮುನ್ನೂರು ಪುಟಗಳಷ್ಟು ಇವೆ. ಓದಿ ಖುಷಿಪಟ್ಟ ಸಂಭ್ರಮ ನನ್ನದಾಯ್ತು. ಬಹಳ ಸೊಗಸಾಗಿ ವಿಸ್ತಾರವಾಗಿ ಕಥೆ ಹೇಳುತ್ತಾ….ನಮ್ಮೆದುರಿಗೇ ಆ ಪಾತ್ರಗಳು ಬಂದವೆನೋ ಎನ್ನುವಷ್ಟು ಸೊಗಸಾಗಿ ಹಿಡಿದು ನಿಲ್ಲಿಸುತ್ತದೆ.

ನಾಲ್ಕನೇ ಸಂಪುಟವಂತೂ ಭೀಷ್ಮರ ಬಯಲ ಹಾಗೆ ತೆರೆದ ತೆರೆದ ಮಾತುಗಳು. ಯುಧಿಷ್ಟಿರ ಕೇಳುವ ಗಹನ ಗೂಢ ಪ್ರಶ್ನೆಗಳಿಗೆ ಅಷ್ಟೇ ನಿಖರ ಉಪಕಥೆಗಳೊಂದಿಗೆ ಉತ್ತರ ಹೇಳುವ ರೀತಿ ನಮ್ಮನ್ನು ಅಲ್ಲಿಯದೇ ಲೋಕಕ್ಕೆ ಒಯ್ಯುತ್ತದೆ. ರಾಜಕಾರಣದ ಎಲ್ಲ ಒಳಗುಟ್ಟುಗಳನ್ನೂ ಅರುಹಿಬಿಡುತ್ತಾರೆ ಭೀಷ್ಮ. ಎಂಥ ಮೇಧಾವಿ ಇವರು. ರಾಜನಾದವನು ನಿದ್ದೆ ಮಾಡುವ ಸ್ಥಳದಲ್ಲೂ ಸೂಕ್ಷ್ಮ ಎಚ್ಚರಿಕೆ…ಸುತ್ತಲಿನವರನ್ನು ಇಟ್ಟುಕೊಳ್ಳಬೆಕಾದ ರೀತಿ..ಗಾಂಭೀರ್ಯದ ಅರ್ಥ. ಯಾರನ್ನು ಎಷ್ಟು ನಂಬಬೇಕು.ಸಲುಗೆ ಯಾರಲ್ಲಿರಬೇಕು…ಹೀಗೇ ಇದು ಸಾಮಾನ್ಯರಾದ ನಮಗೂ ಜೀವನಕ್ರಮ. ಹೇಗಿರಬೇಕು…ಅಬ್ಬಬ್ಬಾ…ನಿಜಕ್ಕೂ ಗೆಳೆಯರೇ…ಒಮ್ಮೆ ಬಿಡುವು ಮಾಡಿಕೊಂಡು ಎಲ್ಲ ಭಾರತೀಯರೂ ಓದಲೇಬೆಕಾದ ಪುಸ್ತಕ. ಅದಕ್ಕೆಂದೇ ಶೇಷಗಿರಿರಾವ್ ಅವರು ಇಂಗ್ಲೀಷಿನಲ್ಲಿ ರಚಿಸಿದ್ದಿರಬಹುದು.ಸಾಮಾಜಿಕ ..ಬೌದ್ಧಿಕ ಹಿಗೆ ಎಲ್ಲ ವಲಯಗಳ ಬೆಳವಣಿಗೆಗೆ ಸಹಕಾರಿ ಇದು ಮಹಾಭಾರತದ ಓದುಗರ ಸಂಖ್ಯೆ ಹೆಚ್ಚಿಸುವ ಉದ್ದೇಶವೂ ಇರಬಹುದು. ಅನುವಾದ ಕೂಡ ಅಷ್ಠೇ ಸೊಗಸಾಗಿದೆ. ಇಬ್ಬರು ಲೇಖಕರಿಗೂ ನನ್ನ ನಮನಗಳು. ಪುಸ್ತಕಗಳನ್ನು ಖರೀದಿಸಿ ಕೊಟ್ಟ ಮಗ ಗುರುದತ್ತ ನಿಗೂ ಧನ್ಯವಾದ ಗಳು

 ಭಾಗ್ಯಲಕ್ಷ್ಮಿ ಅಮೃತರಾಜ್

 

ಕೃಪೆ    https://pustakapremi.wordpress.com/

 

ಪುಟಗಳು : 1506

Customer Reviews

No reviews yet
0%
(0)
0%
(0)
0%
(0)
0%
(0)
0%
(0)