Click here to Download MyLang App

ಸೋಲಿಗ ಚಿತ್ರಗಳು (ಆದಿವಾಸಿಗಳ ಬದುಕಿನೊಂದಿಗಿನ ಸ್ಮೃತಿ ಚಿತ್ರಗಳು) (ಪ್ರಿಂಟ್ ಪುಸ್ತಕ)

ಸೋಲಿಗ ಚಿತ್ರಗಳು (ಆದಿವಾಸಿಗಳ ಬದುಕಿನೊಂದಿಗಿನ ಸ್ಮೃತಿ ಚಿತ್ರಗಳು) (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಜಯದೇವ ಜಿ ಎಸ್
ಮಾಮೂಲು ಬೆಲೆ
Rs. 320.00
ಸೇಲ್ ಬೆಲೆ
Rs. 320.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಬೆಟ್ಟದ ಅರಣ್ಯವು (ಈಗ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ) ಶತಮಾನಗಳಿಂದಲೂ ಸಾವಿರಾರು ಆದಿವಾಸಿಗಳನ್ನು ಪೊರೆಯುತ್ತಾ ಬಂದಿದೆ. ಈ ಆದಿವಾಸಿಗಳಲ್ಲಿ ಹೆಚ್ಚಿನವರು ಸೋಲಿಗರು. ಈಗಲೂ ಬಿಆರ್‌ಟಿ ಸಂರಕ್ಷಿತ ಪ್ರದೇಶದ ವಿವಿಧ ಪೋಡುಗಳಲ್ಲಿ 1,500 ಸೋಲಿಗ ಕುಟುಂಬಗಳು ವಾಸಿಸುತ್ತಿವೆ. ಅಂದಾಜು 12 ಸಾವಿರ ಸೋಲಿಗರಿದ್ದಾರೆ. ಮೊದಲೆಲ್ಲ ಕಾಡಿನ ಅಲ್ಲಲ್ಲಿ ಹರಡಿಕೊಂಡಿದ್ದ ಸೋಲಿಗರಲ್ಲಿ ಬಹುತೇಕರು ಈಗ ಸರ್ಕಾರ ನಿರ್ಮಿಸಿರುವ ಕಾಲೊನಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಟಿವಿ, ಮೊಬೈಲ್‌, ವಾಹನಗಳು ಸೇರಿದಂತೆ ‘ಆಧುನಿಕ’ ಜೀವನಕ್ಕೂ ಅವರು ಒಗ್ಗಿಕೊಂಡಿದ್ದಾರೆ.

ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಚಾಮರಾಜನಗರದಲ್ಲಿ ದೀನ ಬಂಧು ಸಂಸ್ಥೆಯನ್ನು ಹುಟ್ಟುಹಾಕಿರುವ ಶಿಕ್ಷಣ ತಜ್ಞ, ಲೇಖಕ ಪ್ರೊ.ಜಿ.ಎಸ್‌.ಜಯದೇವ ಅವರು ಸೋಲಿಗರ ಕುರಿತಾಗಿ ಒಂದು ಪುಸ್ತಕ ಬರೆದಿದ್ದಾರೆ. ನಾಲ್ಕು ದಶಕಗಳಿಂದ ಸೋಲಿಗರ ಪರವಾಗಿ ಕೆಲಸ ಮಾಡುತ್ತಾ ಬಂದಿರುವ ಅವರು, ಅಂದಿನಿಂದ ಇಂದಿನವರೆಗೂ ಸೋಲಿಗರ ಬದುಕನ್ನು ಹತ್ತಿರದಿಂದ ಕಂಡವರು.

ಸೋಲಿಗರ ಜೀವನ, ಅವರೊಂದಿಗೆ ಒಡನಾಡಿದ ಅನುಭವ, ಅವರ ಬದುಕಿನಲ್ಲಿ ಆಗಿರುವ ಪಲ್ಲಟವನ್ನು ತಮ್ಮ ಅನುಭವದಲ್ಲಿ ಕಂಡಂತೆ ಅಕ್ಷರ ರೂಪಕ್ಕೆ ಇಳಿಸಿದ್ದಾರೆ ಪ್ರೊ.ಜಿ.ಎಸ್‌.ಜಯದೇವ ಅವರು. ‘ಸೋಲಿಗ ಚಿತ್ರಗಳು’ ಎಂಬ ಹೆಸರನ್ನು ಅವರು ಪುಸ್ತಕಕ್ಕೆ ಇರಿಸಿದ್ದಾರೆ. ಆದಿವಾಸಿಗಳ ಬದುಕಿನೊಂದಿಗೆ ಸ್ಮೃತಿಚಿತ್ರಗಳು ಎಂಬ ಅಡಿ ಬರಹವೂ ಕೃತಿಗಿದೆ.

 

ಕೃಪೆ  https://www.prajavani.net 

 

 ಪುಟಗಳು : 300

Customer Reviews

No reviews yet
0%
(0)
0%
(0)
0%
(0)
0%
(0)
0%
(0)