Click here to Download MyLang App

ಶಿಕ್ಷಣ ಹಕ್ಕು ಕಾಯಿದೆ ಹಕ್ಕಲ್ಲ ಹಕ್ಕಿನ ಪ್ರತೀಕ (ಪ್ರಿಂಟ್ ಪುಸ್ತಕ)

ಶಿಕ್ಷಣ ಹಕ್ಕು ಕಾಯಿದೆ ಹಕ್ಕಲ್ಲ ಹಕ್ಕಿನ ಪ್ರತೀಕ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಎಚ್. ಡಿ. ಪ್ರಶಾಂತ್
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಇಂದು ನಮ್ಮ ಶಾಲೆಗಳು ಸಾಮಾಜಿಕ ವಿಮೋಚನೆಯನ್ನು ಹೇಳಿಕೊಡುವ ಕೇಂದ್ರವಾಗದೇ, ಅಸಮಾನತೆಯ ಪುನರ್‌ನಿರ್ಮಾಣಕ್ಕೆ ಆಧಾರಗಳನ್ನು ಒದಗಿಸುವ ಕೇಂದ್ರಗಳಾಗಿವೆ. ಶಿಕ್ಷಣ ವ್ಯವಸ್ಥೆ ಪೌರತ್ವದ ಆಶಯ ಮತ್ತು ಉದ್ದೇಶಗಳನ್ನು ಮಕ್ಕಳಿಗೆ ಕಲಿಸುವ ಪ್ರಜಾಪ್ರಭುತ್ವವಾದಿ ಸಾರ್ವಜನಿಕ ಕೇಂದ್ರಗಳಾಗಿ ಉಳಿದಿಲ್ಲ. ಸಾಮಾಜಿಕ ರಚನೆಯಲ್ಲಿನ ತುತ್ತತುದಿಯಲ್ಲಿ ಇರುವವರ ಆದಾಯ, ಆಸ್ತಿ ಮತ್ತು ಅಧಿಕಾರ ನಿರಂತರವಾಗಿ ಏರಿಕೆಯಾಗುತ್ತಿದೆ. ಸಾಮಾಜಿಕ ರಚನೆಯ ತಳದಲ್ಲಿ ಅಸಮಾನತೆಗಳ ಸ್ವರೂಪವು ತೀವ್ರಗೊಳ್ಳುತ್ತಿವೆ. ಇದನ್ನು ತಕ್ಷಣವೇ ನಮ್ಮ ಸಂವಿಧಾನವು ಶಾಲಾ ಶಿಕ್ಷಣವನ್ನು ಕುರಿತು ಇಟ್ಟುಕೊಂಡಿರುವ ಆಶಯಗಳ ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಾಗಿದೆ. ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳು, ನೀತಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸುವಾಗ ಸರ್ಕಾರವು ಅವಕಾಶ ವಂಚಿತ ಬಡಮಕ್ಕಳ ದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವ ರಾಜಕೀಯ ಇಚ್ಛಾಶಕ್ತಿ ತುಂಬಾ ಅಗತ್ಯವಾಗಿದೆ. ಜಾಗತಿಕ ಪ್ರಪಂಚದಲ್ಲಿ ಬದಲಾಗುತ್ತಿರುವ ಜ್ಞಾನದ ಪರಿಕಲ್ಪನೆ ಭವಿಷ್ಯದ ಶಿಕ್ಷಣವು ಜೀವನದ ಮೇಲೆ ತೀವ್ರ ಸ್ವರೂಪದ ಪರಿಣಾಮಗಳನ್ನು ಉಂಟುಮಾಡುವುದರಿಂದ ಸಮಾನ ಶಾಲಾ ಶಿಕ್ಷಣವ್ಯವಸ್ಥೆಗೆ ಹೆಚ್ಚಿನ ಮಹತ್ವ ಒದಗಿಸಬೇಕಾಗಿದೆ. ಈ ದಿಕ್ಕಿನಲ್ಲಿ ಗುಣಮಟ್ಟದ ಸಮಾನ ಶಿಕ್ಷಣವ್ಯವಸ್ಥೆ ರೂಪಿಸುವ ತುರ್ತಿನ ಕಡೆಗೆ ಹೆಚ್ಚಿನ ಚರ್ಚೆಗಳು, ಅಧ್ಯಯನಗಳನ್ನು ಸಮಾನ ಅವಕಾಶ ಮತ್ತು ಸಮಾನತೆಯ ನೆಲೆಯಲ್ಲಿ ನಡೆಸಬೇಕಾಗಿದೆ ಎಂಬುದನ್ನು ಈ ಕೃತಿ ಪ್ರತಿಪಾದಿಸುತ್ತದೆ. ಸಾಮಾಜಿಕವಾಗಿ ಉಪೇಕ್ಷಿತವಾಗಿರುವ ಹಾಗೂ ಶೈಕ್ಷಣಿಕ ಅವಕಾಶದಿಂದ ವಂಚಿತವಾಗಿರುವ ಜನರ ನೆಲೆಯಿಂದ ಹೆಚ್ಚು ಮೌಲಿಕವಾದ ವಿಶ್ಲೇಷಣೆಯನ್ನು ಈ ಕೃತಿ ನೀಡುತ್ತದೆ. ಹೀಗಾಗಿ ಈ ಕೃತಿಯು ಮರುಮುದ್ರಣವನ್ನು ಕಾಣುತ್ತಿದೆ. ಮಹತ್ವದ ದಾಖಲೆಗಳನ್ನು ಸಂಗ್ರಹಿಸಿ, ಗಂಭೀರವಾದ ಅಧ್ಯಯನದ ಮೂಲಕ ವಸ್ತುನಿಷ್ಟವಾಗಿ ಈ ಕೃತಿಯನ್ನು ರೂಪಿಸಿದ ಡಾ. ಎಚ್.ಡಿ. ಪ್ರಶಾಂತ್ ಅವರಿಗೆ ಅಭಿನಂದನೆಗಳು.


ಡಾ. ಸ.ಚಿ ರಮೇಶ
ಕುಲಪತಿ

ಪುಟಗಳು : 92

Customer Reviews

No reviews yet
0%
(0)
0%
(0)
0%
(0)
0%
(0)
0%
(0)