Click here to Download MyLang App

sheru sampattu

ಷೇರು ಸಂಪತ್ತು (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಕೆ. ಜಿ. ಕೃಪಾಲ್
ಮಾಮೂಲು ಬೆಲೆ
Rs. 180.00
ಸೇಲ್ ಬೆಲೆ
Rs. 180.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 ಆಧುನಿಕ ಜಗತ್ತಿನ ಅದ್ಭುತ ವಿಸ್ಮಯ ಹಾಗೂ ಸುವರ್ಣಾವಕಾಶವೆಂದರೆ ಷೇರು ಪ್ರಪಂಚ, ಸಮಾಜದ, ಸಮುದಾಯದ ಆರ್ಥಿಕ ಆರೋಗ್ಯದ ಪರಿರಕ್ಷಣೆಗೆಂದೇ ವ್ಯವಹಾರಕುಶಲ ಪರಿಣತಮತಿಗಳು ಜಗತ್ತಿನ ನಾನಾ ಭಾಗಗಳಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಕಟದ ಮಟ್ಟಿಗೆ ಹೇಳಬೇಕೆಂದರೆ ಷೇರುಪೇಟೆಯ ಸರದಾರರಾದ ಕೆ.ಜಿ. ಕೃಪಾಲ್ ಅವರ ಕೊಡುಗೆ ಹಾಗೂ ಸೇವೆ ಅತ್ಯಂತ ಮಹತ್ವದ್ದಾಗಿದೆ.

ಬಂಡವಾಳ ಹೂಡಿಕೆ ಎನ್ನುವುದೇ ಒಂದು ಪ್ರತ್ಯೇಕ ಪ್ರಪಂಚ, ಅದರಲ್ಲೂ ಷೇರುಪೇಟೆ ವ್ಯವಹಾರವೆಂದರೆ ಹಿಮಾಲಯದ ಕ೦ದರಗಳೆರಡರ ಎತ್ತರ ಹಾಗೂ ಅದರ ಪಾತಾಳ ದರ್ಶನವನ್ನೂ ಮಾಡಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವ ಒಂದು ಪ್ರಚಂಡ ಸಾಧನ. ಇದರಲ್ಲಿ ಬಂಡವಾಳ ಹೂಡಿಗರನ್ನು ಎಚ್ಚರದಿಂದ ಕೈ ಹಿಡಿದು ನಡೆಸಬಲ್ಲ ವಿಶಿಷ್ಟ ಮಾರ್ಗದರ್ಶಕರು ಇಂದು ಬಹಳಷ್ಟು ಅಗತ್ಯವಿದ್ದಾರೆ. ಅಂತಹ ಬೆರಳೆಣಿಕೆಯ ದಿಕ್ಕೂಚಿಗರಲ್ಲಿ ಕೆ.ಜಿ. ಕೃಪಾಲ್‌ರವರ ಹೆಸರು ಇಂದು ಮುಂಚೂಣಿಯಲ್ಲಿದೆ. ಮೂವತ್ತೈದು ವರ್ಷಗಳ ಅವಿರತ ಸೇವೆಯ ಅಪಾರ ಅನುಭವದಿಂದಾಗಿ ಕೃಪಾಲ್‌ರವರು ಷೇರುಪೇಟೆಯ ಒಳಹೂರಣ, ಹೊರತೋರಣ ಎರಡನ್ನೂ ಕರತಲಾಮಲಕ ಮಾಡಿಕೊಂಡು ಷೇರು ಹಣ ಹೂಡಿಕೆದಾರರ ನಂಬಿಕೆ ಹಾಗೂ ಭರವಸೆಗಳಿಗೆ ಪಾತ್ರರಾಗಿದ್ದಾರೆ.

-ಡಾ|| ಅರಳುಮಲ್ಲಗೆ ಪಾರ್ಥಸಾರಥಿ

 

ಪುಟಗಳು: 232

Customer Reviews

No reviews yet
0%
(0)
0%
(0)
0%
(0)
0%
(0)
0%
(0)