Click here to Download MyLang App

ಶತಮಾನದ ಸಂತ (ಪ್ರಿಂಟ್ ಪುಸ್ತಕ)

ಶತಮಾನದ ಸಂತ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ನೇ ಭ ರಾಮಲಿಂಗಶೆಟ್ಟಿ
ಮಾಮೂಲು ಬೆಲೆ
Rs. 160.00
ಸೇಲ್ ಬೆಲೆ
Rs. 160.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಂಥ ಸಜ್ಜನರೂ ಸನ್ಮಾರ್ಗದರ್ಶಕರೂ ಸಿಗುವುದು ಅಪೂರ್ವ, ಅವರು ಒಟ್ಟು ದೇಶಕ್ಕೆ ಗುರುಗಳು. ನಾನು ಹಲವಾರು ಬಾರಿ ಅವರ ದರ್ಶನ ಪಡೆದು ಮಾತನಾಡಿದ್ದೆ. ನನಗೆ ನೂರು ವರ್ಷಗಳು ತುಂಬಿದ ಸಂದರ್ಭದಲ್ಲೂ ಶ್ರೀಶ್ರೀಗಳನ್ನು ಶ್ರೀ ಸಿದ್ದಗಂಗಾ ಮಠದಲ್ಲೇ ಕಂಡು ಅವರ ಆಶೀರ್ವಾದವನ್ನು ಪಡೆದಿದ್ದೆ. ಆ ಸಂದರ್ಭದಲ್ಲಿ ಸುಮಾರು ಹೊತ್ತು ನನ್ನೊಡನೆ ಅವರು ಮಾತನಾಡಿದ್ದರು. ಅಂಥ ಮಹಾಮಹಿಮರನ್ನು ಕುರಿತು ಅನೇಕ ಹಿರಿಯರು ರಚಿಸಿರುವ ಲೇಖನಗಳನ್ನು ಒಟ್ಟುಗೂಡಿಸಿ “ಶತಮಾನದ ಸಂತ” ಎಂಬ ಉತ್ತಮ ಗ್ರಂಥವು ಪ್ರಕಟವಾಗುತ್ತಿದೆ. ಇದೊಂದು ಅತ್ಯಂತ ಉಚಿತವಾದ ಕಾರ್ಯ. ಈ ಪುಸ್ತಕವು ಬಹುವಾಗಿ ಪ್ರಕಾಶಗೊಂಡ ಸಾರ್ವಜನಿಕರಿಗೆಲ್ಲ ಮಾರ್ಗದರ್ಶಕವಾಗಲಿ, ಇದನ್ನು ಸಂಪಾದಿಸಿರುವ ಶ್ರೀ ನೇ, ಭ, ರಾಮಲಿಂಗ ಶೆಟ್ಟಿ ಅವರಿಗೆ ನಾನು ಶುಭವನ್ನು ಹಾರೈಸುತ್ತೇನೆ.

-ಜಿ ವೆಂಕಟಸುಬ್ಬಯ್ಯ

 

ಈ ಕೃತಿಯ ಸಂಪಾದಕರಾದ ನೇರಳೇಕೆರೆ ಭದ್ರಯ್ಯಶೆಟ್ಟಿ (ನೇ.ಭ.) ರಾಮಲಿಂಗ ಶೆಟ್ಟಿಯವರು ನಮ್ಮ ಪರಮಪೂಜ್ಯರನ್ನು ಕುರಿತು “ಶತಮಾನದ ಸಂತ” ಎಂಬ ಸಂಕಲನವನ್ನು ಹೊರತರುತ್ತಿರುವುದು ಸಂಭ್ರಮದ ಸಂಗತಿಯಾಗಿದೆ. ಇದು ಪ್ರತಿಯೊಬ್ಬರೂ ಸಂಗ್ರಹ ಮಾಡುವ ಕೃತಿಯಾಗಿದೆ. ನಮ್ಮ ಪರಮಪೂಜ್ಯರ ದಿವ್ಯಾಶೀರ್ವಾದವು ಇವರಿಗೆ ಸದಾ ಸಂಪನ್ನವಾಗಿರಲೆಂದು ಹಾರೈಸುತ್ತೇವೆ.

- ಶ್ರೀ ಸಿದ್ಧಲಿಂಗಸ್ವಾಮಿಗಳು ಮಠಾಧ್ಯಕ್ಷರು, ಶ್ರೀ ಸಿದ್ಧಗಂಗಾ ಮಠ

 

ಪುಟಗಳು : 208

Customer Reviews

No reviews yet
0%
(0)
0%
(0)
0%
(0)
0%
(0)
0%
(0)