Click here to Download MyLang App

ಷೇಕ್ಸ್ ಪಿಯರ್ ಕೈಪಿಡಿ (ಪ್ರಿಂಟ್ ಪುಸ್ತಕ)

ಷೇಕ್ಸ್ ಪಿಯರ್ ಕೈಪಿಡಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಮಾಮೂಲು ಬೆಲೆ
Rs. 170.00
ಸೇಲ್ ಬೆಲೆ
Rs. 170.00
ಬಿಡಿ ಬೆಲೆ
ಇಶ್ಟಕ್ಕೆ 

ಷೇಕ್ಸ್‌ಪಿಯರ್‌ ಜಗತ್ತಿನ ಅತ್ಯಂತ ಶ್ರೇಷ್ಠ ನಾಟಕಕಾರನನ್ನುವುದು ಎಲ್ಲರಿಗೂ ತಿಳಿದ ವಿಷಯ ಆದರೆ ಅದನು ಒಬ್ಬ ಶ್ರೇಷ್ಠ ಕವಿಯೂ ಹೌದು ಎನ್ನುವುದು ಅನೇಕರಿಗೆ ಗೊತ್ತಿಲ್ಲ. 'ದೀನಸ್‌ ಅಂಡ್‌ ಅಡೋನೀಸ್‌" ದುತ್ತು 'ರೇಜ್‌ ಆಫ್‌ ಲುಕ್ರೀಸ್‌' ಎಂಬ ಎರಡು ದೀರ್ಘ ಕಥನ ಕವನಗಳನ್ನೂ ಅವನು ರಚಿಸಿದ್ದಾನೆ. ಅಷ್ಟೇ ಆಲ್ಲದೆ ನೂರನಲವತ್ತುನಾಲ್ಕು ಸಾನೆಟ್‌ಕವಿತೆಗಳರುವ, ಆತ್ಮವೃತ್ತಾಂತಭರಿತವಾದ ಒಂದು ಸೊಗಸಾದ ಸಾನೆಟ್‌ಮಾಲೆಯನ್ನೂ ಆವನು ರಚಿಸಿದ್ದಾನೆ. ಇವುಗಳಲ್ಲಿ ಅವನ ಆಶ್ರಯದಾತ ಸೌಥಾಂಪ್ಟನ್‌ ಮತ್ತು ಕೆಲಕಾಲ ಷೇಕ್ಸ್‌ಪಿಯರ್‌ನ ಪ್ರೇಯಸಿಯೂ ಆಗಿದ್ದ ಎಮಿಲಿಯಾ ಎಂಬ ಒಬ್ಬ ಕಪ್ಪು ಚೆಲುವೆಗೆ ಸಂಬಂಧಿಸಿದ ಸಾನೆಟ್‌ಗಳಿದೆ. ಷೇಕ್ಸ್‌ಪಿಯರ್‌ ಸಾನೆಟ್ಟುಗಳಲ್ಲಿ ಶ್ರೇಷ್ಠವಾದ ಹತ್ತು ಸಾನೆಟ್‌ಗಳಷ್ಟೇ ಇದ್ದಿದ್ದರೂ ಅವನು ಆ ಕಾಲದ ಅತ್ಯುತ್ತಮ ಇಂಗ್ಲಿಷ್‌ ಕವಿಗಳ ಸಾಲಿಗೆ ಸೇರುವಂಥವನು ಎಂದು ಎ.ಎನ್‌. ಮೂರ್ತಿರಾಯರಂಥ ಪ್ರಸಿದ್ಧ ವಿಮರ್ಶಕರು ಅಭಿಪ್ರಾಯಪಟ್ಟದ್ದಾರೆ. ಈ ಕೈಪಿಡಿಯಲ್ಲಿ ಅವನ ಮೂವತ್ತೈದು ಸಾನೆಟ್‌ಗಳ ಅನುವಾದವನ್ನು ಅಡಿ ಟಿಪ್ಪಣಿ ಸಹಿತವಾಗಿ ಕೊಡಲಾಗಿದೆ. ಷೇಕ್ಸ್‌ಪಿಯರ್‌ನ ಮೂವತ್ತೇಳು  ನಾಟಕಗಳಲ್ಲಿ ಅತ್ಯುತ್ತಮವಾದ ಹತ್ತು ನಾಟಕಗಳ ಕಥೆಗಳೂ ಈ ಪುಸ್ತಕದಲ್ಲಿವೆ. ಮ್ಯಾಕ್‌ಬೆತ್‌, ಕಿಂಗ್‌ಲಿಯರ್‌, ಹ್ಯಾಮ್ಲೆಟ್‌, ಒಥೆಲೊ, ಜೂಲಿಯಸ್‌ ಸೀಸರ್‌ ಮೊದಲಾದ ಏಳು ದುರಂತ ನಾಟಕಗಳು ಮತ್ತು ಮರ್ಚೆಂಟ್‌ ಆಫ್‌ ವೆನಿಸ್‌, ಟ್ವೆಲ್ಟ್ಟ್‌ನೈಟ್‌ ಮೊದಲಾಗಿ ಮೂರು ಹರ್ಷನಾಟಕಗಳು ಇಲ್ಲಿವೆ. ಇದಲ್ಲದೆ ಷೇಕ್ಸ್‌ಪಿಯರನ ಲಭ್ಯ ಜೀವನ ಸಂಗತಿಗಳೂ ಇಲ್ಲಿ ಸುಧೀರ್ಘವಾಗಿ ನಿರೂಪಿತವಾಗಿದೆ.

ಪ್ರಪಂಚದ ಬಹುತೇಕ ಎಲ್ಲ ಭಾಷೆಗಳಲ್ಲಿ ಷೇಕ್ಸ್‌ಪಿಯರ್‌ ಬರೆಹಗಳ ಪ್ರಾತಿನಿಧಿಕ ಭಾಗಗಳಿರುವ ಕೈಪಿಡಿ (ವಾಚಕೆ) ಹೊರಬಂದಿದೆ. ಕನ್ನಡದಲ್ಲಿ ಅಂಥ ಕೃತಿ ಇದೇ ಮೊದಲಿನದು. ಇದನ್ನು ಓದಿದವರಿಗೆ ಷೇಕ್ಸ್‌ಪಿಯರನ ರಚನೆಗಳ ಸಾರವತ್ತಾದ ಪರಿಚಯ ಆಗಲಿದೆ.

ಪುಟಗಳು : 208

Customer Reviews

No reviews yet
0%
(0)
0%
(0)
0%
(0)
0%
(0)
0%
(0)