Click here to Download MyLang App

ಪರಸಂಗದ ಗೆಂಡೆತಿಮ್ಮ (ಪ್ರಿಂಟ್ ಪುಸ್ತಕ)

ಪರಸಂಗದ ಗೆಂಡೆತಿಮ್ಮ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಶ್ರೀಕೃಷ್ಣ ಆಲನಹಳ್ಳಿ
ಮಾಮೂಲು ಬೆಲೆ
Rs. 120.00
ಸೇಲ್ ಬೆಲೆ
Rs. 120.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಇದು ಬಗೆಹರಿಸಲಾಗದ ಅಸ್ಪಷ್ಟತೆಗಳಿಂದ ಕೂಡಿದ ಕಾದಂಬರಿ: ಸಮಾಜದ ಅಂಚಿನಲ್ಲಿರುವ ವರ್ಗಗಳಿಗೆ ಬಲವಾದ ಕಾಳಜಿ ಮತ್ತು ಕೆಳಜಾತಿಯ (ಪರವಾ ಜಾತಿ) ಜೊತೆ ಪರವಾನಗಿ ಸಹವಾಸ, ಮಾರಂಕಿಯನ್ನು 'ಅನೈತಿಕ' ಮಹಿಳೆ ಎಂದು ಚಿತ್ರಿಸುವುದು, ಕೊನೆಗೆ ಆತ್ಮಹತ್ಯೆ ಪಶ್ಚಾತ್ತಾಪ, ಇತ್ಯಾದಿ. 

ಕನ್ನಡ ಚಿತ್ರರಂಗದ ಮೇರು ನಟರಾದ ಲೋಕೇಶ್ ಅವರ ಅತ್ಯದ್ಭುತ ನಟನೆಯಿಂದ ‘ಪರಸಂಗದ ಗೆಂಡೆತಿಮ್ಮ’ನು ಸಿನಿಲೋಕದಲ್ಲಷ್ಟೆ ಅಲ್ಲದೆ ಸಾಹಿತ್ಯ ಜಗತ್ತಿನಲ್ಲೂ ಅಜರಾಮರ ಪಾತ್ರವಾಗಿ ಉಳಿಯುತ್ತಾನೆ.

ತಗ್ಗು ಪ್ರದೇಶದ ‘ಗವಿಹಳ್ಳಿ’ಯೊಂದು ಗೌವಳ್ಳಿಯಾಗಿ, ಖುಲ್ಲಾ ವ್ಯಾಪಾರಿ ಗೆಂಡತಿಮ್ಮ, ಬೇದಿಗೆ ಮಾತ್ರೆ ಕೊಡುವ ಅವನ ಅಮ್ಮ ‘ಬೆದಿಗೆಯಮ್ಮ’,ಅವನ ಅಣ್ಣ, ಅತ್ತಿಗೆಯಿಂದ ಕಥೆ ಶುರುವಾಗುತ್ತದೆ.
ಗೆಂಡೆತಿಮ್ಮನ ಅಲೆಮಾರಿ ಮಾರಾಟದಲ್ಲಿ ಮಾಲೆಗೌಡ, ಅವನ ಹೆಂಡತಿ, ಮಗಳು ರತ್ನಿ ಮತ್ತು ಮಗ ಮುದ್ದನ ಮುಗ್ದ ಪಾತ್ರಗಳೂ ಬಿಡಿಸಲಾಗದ ಗಂಟು-ನಂಟಾಗಿ ಬೆಸೆದುಕೊಂಡಿವೆ.

ಇಂತಹ ತಿಮ್ಮನ ಸರಳ ಜೀವನದಲ್ಲಿ ಅವನ ಹೆಂಡತಿ ‘ಪಿರಂಕಿ’ , ಆ ಹಳ್ಳಿಯ ಸ್ವದೇಶೀ ನಿಲುವುಗಳನ್ನು ಆಕ್ರಮಿಸಿದ ‘ಫಿರಂಗಿ’ಯಂತೆ ಕಥೆ ತಿರುವು ಪಡೆಯುತ್ತದೆ.

ಪಿರಂಕಿಯ ಅನೈತಿಕತೆ, ಆಡಂಬರದ ಜೀವನ ಶೈಲಿ ಇತರ ಹಳ್ಳಿಗರ ಮೇಲೂ ತನ್ನ ದಟ್ಟ ಛಾಯೆಯನ್ನು ಚಾಚುತ್ತ ಕೊನೆಗೆ ಗೆಂಡೆತಿಮ್ಮನ ಪರಿವಾರವನ್ನು ಒಡೆಯುತ್ತದೆ. ಕೊನೆಗೆ ಗೆಂಡೆತಿಮ್ಮನ ಮತ್ತು ಪಿರಂಕಿಯ ಆತ್ಮಹತ್ಯೆಗಳೊಂದಿಗೆ ದುರಂತದಲ್ಲಿ ಕತೆ ಕೊನೆಗೊಳ್ಳುತ್ತದೆ.

ಈ ಕಥೆಯನ್ನು ಓದುವಲ್ಲಿ, ಲೋಕೇಶ್ ಅವರೇ ಇಡೀ ಗೆಂಡೆತಿಮ್ಮನಾಗಿ ಆವರಿಸುತ್ತಾ ಹೋಗುತ್ತಾರೆ. ಲೋಕೇಶ್ ತಮ್ಮ ಅಭಿನಯದ ಮೂಲಕ ಗೆಂಡೆತಿಮ್ಮನನ್ನು ಜೀವಂತವಾಗಿ ತೆರೆಗೆ ತಂದರೆ, ಅಂತಹ ಒಂದು ಪಾತ್ರ ಮತ್ತು ಕಥೆಯನ್ನು ಸುಧಿರ್ಘ ಕಾಲಪ್ರವಾಹದಲ್ಲೂ ನೆನಪುಳಿಯುವಂತೆ ಸಾಹಿತ್ಯ ಕೃಷಿ ಮಾಡಿದ್ದಾರೆ ಶ್ರೀ ಕೃಷ್ಣ ಆಲನಹಳ್ಳಿಯವರು.

-*ನಾಗರಾಜ್ ಎಸ್ ರಂಗಣ್ಣವರ*

 

ಕೃಪೆ  https://pustakapremi.wordpress.com/

 

ಪುಟಗಳು : 152

Customer Reviews

No reviews yet
0%
(0)
0%
(0)
0%
(0)
0%
(0)
0%
(0)