Click here to Download MyLang App

ಪಾಕಕ್ರಾಂತಿ ಮತ್ತು ಇತರ ಕತೆಗಳು (ಆಡಿಯೋ ಬುಕ್),  ಪಾಕಕ್ರಾಂತಿ ಮತ್ತು ಇತರ ಕತೆಗಳು,  ತೇಜಸ್ವಿ,  ಕೆ.ಪಿ.ಪೂರ್ಣಚಂದ್ರ ತೇಜಸ್ವಿ,  Tejaswi,  Paka kranthi Mattu Etara Kathegalu,  pornchandra tejasvi,  poornchandra tejaswi,  poornachsndra tejaswi,  poornachandratejaswi,  poornachandra thejaswi,    pooornachandra,  pakakranti,

ಪಾಕಕ್ರಾಂತಿ ಮತ್ತು ಇತರ ಕತೆಗಳು - ಭಾಗ 1 (ಆಡಿಯೋ ಬುಕ್)

audio book

ಪಬ್ಲಿಶರ್
ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮಾಮೂಲು ಬೆಲೆ
Rs. 0.00
ಸೇಲ್ ಬೆಲೆ
Rs. 0.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

Share to get a 10% discount code now!

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಓದಿದವರು: 

ಅನಿಕೇತ್ ಶ್ರೀವತ್ಸ

ಬೆಂಗಳೂರು


 

ತೇಜಸ್ವಿ ಅವರ ಹೆಂಡತಿ ಊರಿನಲ್ಲಿರುವುದಿಲ್ಲ. ಅಡುಗೆ ಮಾಡುವ ಅಥವಾ ಮಾಡಲೇ ಬೇಕಾದ ಅನಿವಾರ್ಯತೆ ತೇಜಸ್ವಿಯವರದು. ಪಾಕಶಾಸ್ತ್ರದಲ್ಲಿ ಅವರಿಗೆ ಅವರದೇ ಆದ ಕೆಲವು ಕಲ್ಪನೆಗಳಿರುತ್ತವೆ. ಅದನ್ನು ಕಾರ್ಯರೂಪಕ್ಕೆ ತರಲು ಅವರು ಮುಂದಾದಾಗ ಹೇಗೆಲ್ಲಾ ಪೇಚಿಗೆ ಸಿಲುಕುತ್ತಾರೆ, ತಮ್ಮದೇ ವಿಭಿನ್ನ ಶೈಲಿಯನ್ನು ಅನುಸರಿಸುವಾಗ ಎದುರಾದ ಅಸಂಬದ್ಧಗಳೇನು, ಅದರಿಂದ ಪಾರಾಗಲು ಬಳಸಿದ ತಂತ್ರಗಳು..ಪಾಕಶಾಸ್ತ್ರದಲ್ಲಿ ಕ್ರಾಂತಿ ಮಾಡಲು ಹೊರಟ ತೇಜಸ್ವಿಯವರ ಪೀಕಲಾಟವೇ ಈ ಕತೆಯ ಜೀವಾಳ. ಕಣ್ಣಿನ ಸಮಸ್ಯೆಯಿರುವವರು, ಹೊಟ್ಟೆಯ ಸಮಸ್ಯೆಯಿರುವವರು ಈ ಕತೆಯನ್ನು ಓದದೇ ಇದ್ದರೆ ಒಳಿತು. ಕಾರಣ ಇದನ್ನು ಓದುವಾಗ ಅಡೆತಡೆಯಿಲ್ಲದೆ ನಗೆಯುಕ್ಕಿ ಬಂದು ಕಣ್ಣೀರು ಬಂದರೆ, ಹೊಟ್ಟೆ ಕಿವುಚಿದಂತಾದರೆ ಅದಕ್ಕೆ ತೇಜಸ್ವಿ ಕಾರಣರಲ್ಲ!

ಇದರ ಹೊರತು ಕೆಲವು ಕತೆಗಳಿವೆ. ಎಲ್ಲಾ ಕತೆಗಳು ಒಂದೊಂದು ಕಾಲಘಟ್ಟದಲ್ಲಿ ಬರೆದಂತವು. ತೇಜಸ್ವಿ ಕಥೆ ಎಂದರೇ ಕೇಳಬೇಕಾ? ಮಾಯಾ ಮೋಡಿಕಾರನಂತೆ ಕಥೆ ಹೇಳುತ್ತಾ ಹೋಗುವ ಬಗೆ ಎಂಥವರನ್ನೂ ದಂಗುಬಡಿಸುತ್ತದೆ. ಅವರೊಬ್ಬ ನಿಜವಾದ ಜಾದುಗಾರ. ಆದರೂ ತೇಜಸ್ವಿ ಎನ್ನುವ ಒಂಟಿಸಲಗ ಇಲ್ಲಿ ಬರೆದ ಕೆಲವು ಕತೆಗಳು ಮುಂಜಾನೆಯ ಸಕ್ಕರೆಯ ನಿದಿರೆಯಂತೆ ಯಾಕಾದರೂ ಇಷ್ಟು ಬೇಗ ಮುಗಿಯಿತೋ ಎನಿಸುವಂತೆ ಭಾಸವಾದರೆ, ಇನ್ನು ಕೆಲವು ಕತೆಗಳು ಇದು ತೇಜಸ್ವಿ ಬರೆದ ಕಥೆಗಳೇನಾ ಎನ್ನುವಂತಿವೆ.

 

ಕೃಪೆ - ಪುಸ್ತಕಪ್ರೇಮಿ

 

ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)