Click here to Download MyLang App

ನನ್ನ ಭಯಾಗ್ರಫಿ (ಪ್ರಿಂಟ್ ಪುಸ್ತಕ)

ನನ್ನ ಭಯಾಗ್ರಫಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಬೀChi
ಮಾಮೂಲು ಬೆಲೆ
Rs. 270.00
ಸೇಲ್ ಬೆಲೆ
Rs. 270.00
ಬಿಡಿ ಬೆಲೆ
ಇಶ್ಟಕ್ಕೆ 

 ನಾನು ಓದಿರುವ ಕೆಲವೇ ಕೆಲವು ಪುಸ್ತಕಗಳಲ್ಲಿ, ಮನಸ್ಸಿಗೆ ತುಂಬಾ ಮುದ ನೀಡಿದ ಪುಸ್ತಕಗಳು ಕೆಲವೇ ಕೆಲವು. ಆದರೆ ಆ ಪುಸ್ತಕಗಳ ಪಟ್ಟಿಯಲ್ಲಿ, ನನ್ನ ಭಯಾಗ್ರಫಿಯು ಸದಾ ಕಾಲ ಮೊದಲನೇ ಸ್ಥಾನದಲ್ಲಿಯೇ ಇರುವುದು ಖಚಿತ. ಹಾಸ್ಯದಿಂದ ತುಂಬಿದ ಈ ಪುಸ್ತಕದಲ್ಲಿ, ಜೀವನದಲ್ಲಿ ಎಲ್ಲರೂ ಕಲಿಯಬೇಕಾದ ಅತ್ಯಮೂಲ್ಯ ಪಾಠಗಳು ಹೇರಳವಾಗಿವೆ. ಕಡ್ಡಾಯವಾಗಿ ಕನ್ನಡ ಸಾಹಿತ್ಯ ಪ್ರೇಮಿಗಳು ಒದಲೇಬೇಕಾದ ಪುಸ್ತಕ.

 

ಈ ಪುಸ್ತಕವನ್ನು ಈಗ ಮುಗಿಸಿದೆ ಎಂಬ ಖುಷಿ ಹಾಗೂ ದುಖಃ ಎರಡು ಇದೆ. ಬೀಚಿ ನನ್ನ ಕಳೆದು ಹೋದ ಅಪ್ಪ ಎಂದು ಎಷ್ಟೋ ಬಾರಿ ಅನಿಸಿದೆ. ನಾನು ಮೊದಲ ಪುಸ್ತಕ ಓದಿದ್ದು ಕೂಡ ಬೀಚಿ ಅವರದ್ದೇ. ಆದ್ದರಿಂದ ನನ್ನ ಯೋಚನಾ ಶೈಲಿಯಲ್ಲಿ ಬೀಚಿಯವರ ಪ್ರಭಾವ ಅತಿ ಹೆಚ್ಚು.
ಈ ಪುಸ್ತಕದ ಕೊನೆಯ ಪುಟಗಳನ್ನು ಓದುವಾಗ ಅಳು ನನ್ನ ಬೆಂಬಿಡದೆ ಸದಾ ಕಾಲ ಇತ್ತು. ಆದರೂ ಈ ಪುಸ್ತಕದಲ್ಲಿ ನಾನು ಹೆಚ್ಚು ಕಂಡಿದ್ದು ನೆಮ್ಮದಿಯನ್ನೇ. ಇಷ್ಟವಾದ ಸಾಲುಗಳನ್ನು ಆಯ್ದು ಇಡುವ ಹಂಬಲ ನನಗೆ, ಆದರೆ ಇಡೀ ಪುಸ್ತಕದಲ್ಲಿ ಬರಿ ಮುತ್ತಿನಂತ ಸಾಲುಗಳೇ ಇರುವಾಗ ನಾನು ಅಸಹಾಯಕ
ನಾನು ಬೀಚಿಯವರ ಕಾಲದಲ್ಲಿ ಹುಟ್ಟಲಿಲ್ಲವಲ್ಲ ಎಂಬ ಆಳವಾದ ನೋವಿದೆ. ಅದನ್ನು ಅವರ ಎಲ್ಲಾ ಪುಸ್ತಕಗಳನ್ನು ಓದಿ ವಾಸಿಮಾಡಿಕೊಳ್ಳುವ ಪ್ರಯತ್ನ ಖಂಡಿತ ಮಾಡುತ್ತೇನೆ. ಹೆಚ್ಚು ಹೇಳಬೇಕು ಎಂಬ ಹಂಬಲ, ಆದರೆ ಕೇಳಲು ಬೀಚಿಯವರಿಲ್ಲ ಎಂಬ ವಿಷಾದ ಕೂಡ. ಬೀಚಿ ಅವರಿಗಿಂತ ನಾನು ಬೇರಾವ ಲೇಖಕರನ್ನು ಇಷ್ಟು ಪ್ರೀತಿಸಲಾರೆ ಎಂಬುದಷ್ಟೇ ಸತ್ಯ.

 

ಕೃಪೆ   https://www.goodreads.com

 

ಪುಟಗಳು: 355

 


Customer Reviews

No reviews yet
0%
(0)
0%
(0)
0%
(0)
0%
(0)
0%
(0)