Click here to Download MyLang App

ಮೈಸೂರು ಡೈರಿ (ಪ್ರಿಂಟ್ ಪುಸ್ತಕ)

ಮೈಸೂರು ಡೈರಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಬಿ.ಜಿ.ಎಲ್. ಸ್ವಾಮಿ
ಮಾಮೂಲು ಬೆಲೆ
Rs. 80.00
ಸೇಲ್ ಬೆಲೆ
Rs. 80.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಈ ಪುಸ್ತಕ ನನಗೆ ಸಿಕ್ಕ ಬಗೆ ಸ್ವಾರಸ್ಯಕರವಾಗಿದೆ. ವಿಜಯವಾಣಿಯ ಸಾಪ್ತಾಹಿಕದಲ್ಲಿ ಸ್ವಾಮಿಯವರ ಬಗ್ಗೆ ಬಂದ ಲೇಖನದಲ್ಲಿ ಅವರ ಕೃತಿ ಪಟ್ಟಿಯಲ್ಲಿ ಈ ಕೃತಿಯ ಹೆಸರು ಕಂಡು ಓದಲಿಲ್ಲವಲ್ಲ ಎಂದು ಹಳಹಳಿಸಿದೆ. ಗೆಳೆಯರಾದ ರಾಜೇಶ್ ಶೆಟ್ಟಿಯವರು ನನ್ನ ಬಳಿ ಇದೆ ಅಂದರು. ವಿಘ್ನೇಶ್ವರ ಭಟ್ ಅವರು ನನಗಾಗಿ ಸಮಯ ಮಾಡಿಕೊಂಡು ಗೋಖಲೆ ಇನ್ಸ್ಟಿಟ್ಯೂಟ್ ಕಡೆ ಹೋಗಿ ಈ ಪುಸ್ತಕ ಸಹಿತ ಹಲ‌ ಪುಸ್ತಕಗಳ ಕಾದಿರಿಸಿ ಬಂದರು. ಗೆಳೆಯ ರಾಜುಗೌಡರು ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆ ಹೋಗಿ ಕೊಂಡು ತಂದು ನನಗೆ ಕಳಿಸಿದರು. ಇವರೆಲ್ಲರಿಗೂ ನಾನು ಕೃತಜ್ಞ.
ಇದು ಸ್ವಾಮಿಯವರ ಕೊನೆಯ ಪುಸ್ತಕ. ಅವರ ನಿಧನದ ತರುವಾಯ ಪ್ರಕಟವಾದದ್ದು.
ಮೊದಲಿನಂದಲೂ ನನಗೆ ಮೈಸೂರೆಂದರೆ ಏನೋ ಕುತೂಹಲ. ಅರಸೊತ್ತಿಗೆ ಪರಂಪರೆಯೋ,ಅಲ್ಲಿಯ ಜನರೋ, ಕೇಫರ ಶೌರಿಯ ಪ್ರಸಂಗಗಳಲ್ಲಿ ವರ್ಣಿತವಾದ ಮೈಸೂರು, ಕಂಡ ಅರಮನೆ, ಹೆಂಡತಿಯ ಅಜ್ಜಿ ಮನೆ ಹೀಗೆ ಹೀಗೆ.
ಇಂತಹ ಮೈಸೂರಿನ ಬಗ್ಗೆ ನನ್ನ ಮೆಚ್ಚಿನ ಸ್ವಾಮಿ ಬರೆದಿದ್ದಾರೆ ಅನ್ನುವಾಗ ಓದದೆ ಬಿಡಲಾದೀತೇ?
ಬಿ.ಜಿ.ಎಲ್.ಸ್ವಾಮಿಯವರ ಬರವಣಿಗೆಯಲ್ಲಿನ ಮೂರು ಅಂಶಗಳು ಯಾವತ್ತಿಗೂ ಸರ್ವಮಾನ್ಯ.
ಸಸ್ಯಗಳ ಬಗೆಗಿನ‌ ಸರಳ ವಿವರಣೆ
ಅಧಿಕಾರಿಶಾಹಿಯ ಕುರಿತಾದ ವ್ಯಂಗ್ಯ
ನಕ್ಕು ನಲಿಸುವ ಪ್ರಸಂಗಗಳ ವಿವರಣಾ ಶೈಲಿ.

ಅವೆಲ್ಲವೂ ಈ ಪುಸ್ತಕದಲ್ಲಿದೆ.
ಮೊದಲ ಲೇಖನವಾದ 'ಮಾನಸಗಂಗೋತ್ರಿಯಲ್ಲಿನ‌ ಋತುಪರ್ಯಾಯ' ಮಾನಸಗಂಗೋತ್ರಿಯ ಪರಿಸರ ವರ್ಣನೆ ಇತ್ತೀಚೆಗೆ ಹೋಗಿ ಬಂದ ಧಾರವಾಡ ವಿಶ್ವವಿದ್ಯಾಲಯವ ನೆನಪಿಸಿತು. ನಮಗೆ ಸ್ವಾಮಿಯವರ ಬದುಕಿನ ಬಗ್ಗೆ ಗೊತ್ತಿಲ್ಲದ ಹಲ ವಿಷಯಗಳ ಅವರೇ ತಿಳಿಸಿಕೊಟ್ಟ ನನ್ನ ಮನೆ,ಲ್ಯಾಬೋರೆಟರಿಯ ಒಳ ಹೊರಗೆ, ಸಂದರ್ಶನ ಪ್ರಾಧ್ಯಾಪಕ, ಪಾಠಕ ವೃತ್ತಿ ಎಂತೆಂತಹ ಪ್ರಸಂಗಗಳು.
ಅದರಲ್ಲಿ ಕಾಳಿನಿಂದ ಧೂಳನ್ನು ಬೇರ್ಪಡಿಸಲು ವಿಜ್ಞಾನಿಗಳು ಸಭ ಸೇರಿದ್ದ ಪ್ರಸಂಗವಂತೂ‌ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ.ಅದರಲ್ಲಿ ಸ್ವಾಮಿಯವರು 'ನಮ್ಮಜ್ಜಿ ಮಾಡಿದಂತೆ ಮೊರದಿಂದ ಕೇರಿದಾಗ,ಧೂಳು ಕಾಳು ಬೇರ್ಪಡುತ್ತದೆ' ಅನ್ನುವ ಸಲಹೆ ಕೊಡಹೋದರೆ 'ನಿಮ್ಮ ಅಜ್ಜ ಅಜ್ಜಿಯರ ವಿಷಯ ಮಾತಾಡುವ ಜಾಗವಲ್ಲ ಇದು.ಸೈಂಟಿಸ್ಟುಗಳಲ್ಲದವರು ಮಾತನಾಡಲು ಸ್ಥಳ ಇದಲ್ಲ 'ಎಂಬ ಬದಲು ದೊರೆಯುತ್ತದೆ.

ಅನಂತಮೂರ್ತಿ ಯವರ ಪಾಠಶೈಲಿಯ ಹೊಗಳಿ ಬರೆದ ರೀತಿ ಬೆರಗು ಹುಟ್ಟಿಸುತ್ತದೆ.
ಕವಿತೆಗಳ ಗೋಡೆಬರಹವ ಪನ್ ಮಾಡಿದ ರೀತಿ ನೋಡಿ,
' ಬೆಲ್ಜಿಯಮಿನಲ್ಲಿ ಬಿಳಿ ಕೊಲೆ
ಕೋಲಾರದಲ್ಲಿ ಕರಿ ಕೊಲೆ
ನಾಳೆ ನಡೆಯುವುದಿಲ್ಲಿ
ಕಗ್ಗೊಲೆ
ಹೆಗ್ಗೊಲೆ
??? '

ಇನ್ನು ವಾಕ್ಯ ರಚನೆಯಲ್ಲಿನ ತಮಾಷೆಗೆ ಸ್ಯಾಂಪಲ್ ನೋಡಿ

'ಧೂಳೊರೆಸಿ ಕಸಗುಡಿಸುವುದಕ್ಕೆಂದೇ ಆಳೊಬ್ಬನನ್ನು ವಿಶ್ವವಿದ್ಯಾಲಯ ನಿಯಮಿಸಿದೆ.ಅವನು ಇಂದು ಹಾಜರಾಗುತ್ತಾನೆಯೇ,ನಾಳೆ ಬರುತ್ತಾನೆಯೇ,ಎಷ್ಟು ಹೊತ್ತಿಗೆ ಬರುತ್ತಾನೆ ಎಂಬುದು ಅವನಿಗೇ ತಿಳಿದಿರುವುದಿಲ್ಲ.ಒಂದು ದಿನ ಸಂಜೆ ಐದು ಗಂಟೆಗೆ ಪೊರಕೆ,ಮೊರ ಹಿಡಿದುಕೊಂಡು ಬಂದ. 'ಲೇಟಾಗಿ ಬುಡ್ತು ಶಾರ್' ಎಂದ.'


'ಅಂತರ್ - ರಂಗ ' ಅನ್ನುವ ಪ್ರಬಂಧದ ಈ ಸಾಲು ಇಂದಿಗೂ ಪ್ರಸ್ತುತ.
'ಎಲ್ಲ ಮತಗಳೂ ಒಂದೇ ಎಂಬುದನ್ನು ಶ್ರುತಪಡಿಸಲು ಬ್ರಾಹ್ಮಣ, ಕ್ರಿಶ್ಚಿಯನ್, ಮುಸಲ್ಮಾನ್ ವೇಷಧಾರಿಗಳನ್ನು ಒಂದೇ ಲಾರಿಯ ಮೇಲೆ ಗೊಂಬೆಗಳಂತೆ ನಿಲ್ಲಿಸಿದ್ದ ಫ್ಲೋಟೊಂದು ಹರಿಯಿತು. ಈ ಮತಗಳಾಗಲಿ,ಧರ್ಮಗಳಾಗಲಿ ಒಂದೇ ಎಂಬುದನ್ನು ಇದು ಯಾವ ರೀತಿಯಲ್ಲಿ ಶ್ರುತಪಡಿಸುತ್ತದೆ? ಒಂದೇ ಹಲಗೆಯ ಮೇಲೆ ಹತ್ತಾರು ಮತೀಯರು ನಿಂತರೆ ಹಲಗೆ ಒಂದೇ ಅಯಿತೇ ಹೊರತು ಹುಳು,ಹಾವು,ಹಸು ಒಂದೇ ಎಂದು ನಿರ್ಣಯವಾಗುತ್ತದೆಯೇ?'

ಪುಸ್ತಕದ ಕೊನೆಯಲ್ಲಿ ಬರುವ ಸ್ವಾಮಿಯವರ ಅಂತಿಮ ದಿನಗಳ ಚಿತ್ರಣ ,ಅವರ ಜೀವನ ಯಾನದ ವಿವರಣೆ, ತಂದೆ ಡಿ.ವಿ.ಜಿ.ಯವರ ಕುರಿತಾದ ಮಾತುಗಳು ಎಲ್ಲವೂ ಚಿನ್ನಕ್ಕೆ ಮೆರುಗು ಕೊಟ್ಟಂತಿವೆ.
ಒಟ್ಟಾರೆಯಾಗಿ ಹೇಳುವುದಾದರೆ ಬಿ.ಜಿ.ಎಲ್. ಸ್ವಾಮಿಯವರ ಜೀವನದ ಕುರಿತಾದ ಅನೇಕ ಕುತೂಹಲಗಳಿಗೆ ಉತ್ತರದಂತಿದೆ ಈ ಪುಸ್ತಕ. ಅದರ ಹೊರತಾಗಿಯೂ ನಕ್ಕು ನಲಿಸುವ ಅನೇಕ‌ ಪ್ರಬಂಧಗಳಿಂದ ಶ್ರೀಮಂತವಾಗಿದೆ. ಓದಿ. ಓದಿಸಿ.

ಕೃಪೆ  https://www.goodreads.com/

 

ಪುಟಗಳು : 121

Customer Reviews

No reviews yet
0%
(0)
0%
(0)
0%
(0)
0%
(0)
0%
(0)