
ಓದಿದವರು: ಧ್ವನಿಧಾರೆ ಮಿಡಿಯಾ ತಂಡ
ಇದೊಂದು ನವಿರಾದ ಪ್ರೇಮಕಥೆ. ಕಾಲೇಜು ದಿನಗಳ ಎಳೆ ಪ್ರೇಮ, ಪ್ರಣಯ ಸಫಲವಾಗಲೇಬೇಕಿಲ್ಲ. ಆದರೆ ಹದಿಹರೆಯದಲ್ಲಿ ಬೇರೆ ಬೇರೆಯಾದ ದಾರಿಗಳು, ಹುಡುಗಿ ಸಂಸಾರದಲ್ಲಿ ನೆಲೆಕಂಡ ಹತ್ತಾರು ವರ್ಷಗಳ ನಂತರ ಸಂಧಿಸುವಂತಾದರೆ? ಹಳೇ ಗೆಳೆಯನ ಪುನರಾಗಮನದ ಉದ್ದೇಶವೇನು? ಪತಿಯ ಅನಾದರಣೆ ಆಕೆಯ ದಾರಿ ಬದಲಿಸುತ್ತಾ? ಮತ್ತೆ ಸಂಧಿಸಿದ ದಾರಿಯಲ್ಲಿ ಸಂಸಾರ ಸೋಲುವುದೋ, ವಿಫಲ ಪ್ರೇಮ ಗೆಲ್ಲುವುದೋ? ಲೈಫೇ ಮುತ್ತಿನ ಹಾರ ಎಂದು ಲೇಖಕರು ಹೇಳಿರುವ ಗುಟ್ಟೇನು?
ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್ ಅಲ್ಲಿ.