Click here to Download MyLang App

ಮೃತ್ಯುಂಜಯ (ಪ್ರಿಂಟ್ ಪುಸ್ತಕ)

ಮೃತ್ಯುಂಜಯ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ನಿರಂಜನ
ಮಾಮೂಲು ಬೆಲೆ
Rs. 500.00
ಸೇಲ್ ಬೆಲೆ
Rs. 500.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

 

ಕನ್ನಡದ ಅತ್ಯುತ್ತಮ ಸಾಹಿತ್ಯ ಕೃತಿಗಳಲ್ಲಿ ಮೃತ್ಯುಂಜಯ ಕಾದಂಬರಿಯನ್ನು ಕೂಡ ಸೇರಿಸಬಹುದು.

ಕಾದಂಬರಿಯ ಮೂಲ ಬಂಡಾಯ ಪ್ರಕಾರ. ಸುಮಾರು ನಾಲ್ಕು ಸಾವಿರದ ಐನೂರು ವರ್ಷಗಳ ಹಿಂದೆ, ಈಜಿಪ್ಟ್ ಲ್ಲಿ..ಪೆರೊ ಆಳ್ವಿಕೆಯ ವಿರುದ್ಧ ಬಂಡಾಯವೆದ್ದ ನೀರಾನೆ ಎಂಬ ಪ್ರಾಂತ್ಯದ ಕಥೆ ಇದು. ಬಂಡಾಯ ಮೂಲ ವಸ್ತುವಾದರೂ ‘ಮಾನವ ಪ್ರೀತಿ’ ಇದರ ತಿರುಳಾಗಿದೆ.

ಈ ಮುಂಚೆ, ನಿರಂಜನರ ಚಿರಸ್ಮರಣೆ ಕಾದಂಬರಿಯನ್ನು ಓದಿದ್ದೆ. ಅದು ಕೂಡ ಬಂಡಾಯ ಸಾಹಿತ್ಯ ಪ್ರಕಾರ. ಮೃತ್ಯುಂಜಯದ ಬಗ್ಗೆ ಗೊತ್ತಾಗಿದ್ದು ಪ್ರತಾಪ್ ಸಿಂಹರ ಬೆತ್ತಲೆ ಜಗತ್ತು ಅಂಕಣದಲ್ಲಿ. ಅಂಕಣದಲ್ಲಿ ಇದ್ದದ್ದು ‘ಶಂಕರ್ ಮೊಕಾಶಿ ಪುಣೇಕರ್’ ಅವರ ಬಗ್ಗೆ. “ಪ್ರಾಚೀನ ಇತಿಹಾಸದ ಬಗ್ಗೆ ಕನ್ನಡದಲ್ಲಿ ಇರುವ ಎರಡು ಉತ್ತಮ ಕೃತಿಗಳೆಂದರೆ, ಮೊಕಾಶಿಯವರು ಅವಧೇಶ್ವರಿ ಮತ್ತು ನಿರಂಜನರ ಮೃತ್ಯುಂಜಯ” ಎಂದು ಅವರು ಬರೆದಿದ್ದರು.

484 ಪುಟಗಳು ಇರುವ ಕಾದಂಬರಿಯಲ್ಲಿ ಐವತ್ತಕ್ಕೂ ಹೆಚ್ಚು ಪಾತ್ರಗಳಿವೆ.
ಪ್ರಧಾನಪಾತ್ರ ‘ಮೆನೆಪ್ ಟಾ’. ಸಹೃದಯಿ, ಶಾಂತಸ್ವಭಾವ, ಆದರ್ಶವಂತ. ಅವನ ಸುತ್ತ ಸುತ್ತುವ ಅನೇಕ ಪಾತ್ರಗಳಿವೆ ಅದರಲ್ಲಿ ಅವನ ಹೆಂಡತಿಯ ಪಾತ್ರ ನೇಫಿಸ್, ಮಗ ರಾಮೆರಿಪ್ ಟಾ, ಅರಮನೆಯಲ್ಲಿ ಸಿಗುವ ಮೆನ್ನ, ಸಂಗಡಿಗರಾದ ಬಟಾ, ಸ್ನೊಫ್ರು, ಸೆಬೆಕ್ಕು,ಖ್ನೆಮ್ ಹೊಟೆಪ್ ಮುಖ್ಯವಾದವುಗಳು. ಹಾಗೆಯೇ, ಇನ್ನೊಂದು ಮುಖ್ಯವಾದ ಪಾತ್ರ ಮಹಾಅರ್ಚಕ ಹೆಪಾಟ್. ಗರ್ವಿಷ್ಟ, ಕೋಪಿಷ್ಟ, ಅಧಿಕಾರಶಾಹಿ. ಪೆರೋ ಆಳ್ವಿಕೆ ಇದ್ದರೂ ಮಹಾಆರ್ಚಕನ ವರ್ಚಸ್ಸು ಹೆಚ್ಚು. ಮತ್ತು ಅವನ ಸುತ್ತ ಗೇಬು, ಅಪೆಟ್, ಇನೇನಿ, ಟೆಹುಟಿ, ಬಕಿಲ ಹೀಗೆ ಹಲವಾರು.

ಸರಳ ರೂಪದಲ್ಲೇ, ನಿಧಾನವಾಗಿ, ಪಾತ್ರಗಳು ಸನ್ನಿವೇಶಗಳು ಒಂದಕ್ಕೊಂದು ಪೂರಕವಾಗಿ ಕಾದಂಬರಿ ವಿಸ್ತೃತವಾಗುತ್ತ ಹೋಗುತ್ತದೆ. ಕಾದಂಬರಿಯಲ್ಲಿ 50-60 ಪಾತ್ರಗಳಿದ್ದರೂ ಯಾವುದೂ ಕೂಡ ನಿಷ್ಪ್ರಯೋಜಕವಾದುದಲ್ಲ. ಹಾಗೆಯೇ ಸಂದರ್ಭ ಸನ್ನಿವೇಶಗಳು ಕೂಡ, ಪೆರೋನ ಆಡಳಿತ, ಅರಮನೆಯ ಚಿತ್ರಣ, ನೀಲ (ನೈಲ್) ನದಿಯ ಚಿತ್ರಣ, ಗೋರಿಯ ಕಟ್ಟುವಿಕೆಯ ಚಿತ್ರಣ, ಔತಣಕೂಟ, ನೀರಾನೆ ಪ್ರಾಂತ್ಯದ ಜನರ ನಡುವಿರುವ ಅನುಬಂಧ, ದೇವರ ಸ್ತೋತ್ರಕ್ಕೆ ಮತ್ತು ಮಹಾಅರ್ಚಕನಿಗೆ ಜನತೆ ಸೋಲುವ ಪರಿ.. ಎಲ್ಲವನ್ನು ಕಟ್ಟಿಕೊಟ್ಟಿರುವ ರೀತಿ ಚೆನ್ನಾಗಿದೆ.

ಅದರಲ್ಲೂ ಮೆನೆಪ್ ಟಾ ನ ವಿಚಾರಣೆ ಅದರ ನಂತರ ನಡೆಯುವ ಘಟನೆಗಳನ್ನು ಚಿತ್ರಿಸಿರುವ ರೀತಿ ಅನನ್ಯ.

ಸಂಜಯ್ ಮಂಜುನಾಥ್

 

ಕೃಪೆ  https://pustakapremi.wordpress.com

 

ಪುಟಗಳು: 572

 


Customer Reviews

No reviews yet
0%
(0)
0%
(0)
0%
(0)
0%
(0)
0%
(0)