Click here to Download MyLang App

ಕುಮಾರವ್ಯಾಸ ಭಾರತ (ವ್ಯಾಖ್ಯಾನ ಸಹಿತ) (ಪ್ರಿಂಟ್ ಪುಸ್ತಕ)

ಕುಮಾರವ್ಯಾಸ ಭಾರತ (ವ್ಯಾಖ್ಯಾನ ಸಹಿತ) (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಸಂ.: ಅ.ರಾ.ಸೇ.
ಮಾಮೂಲು ಬೆಲೆ
Rs. 2,500.00
ಸೇಲ್ ಬೆಲೆ
Rs. 2,500.00
ಬಿಡಿ ಬೆಲೆ
ಇಶ್ಟಕ್ಕೆ 

“ಕುಮಾರವ್ಯಾಸಭಾರತ' ವು ಕನ್ನಡದ ಅಗ್ರಮಾನ್ಯ ಕೃತಿ. ಅನೂಚಾನವಾಗಿ ಜನಮನವನ್ನು ಗೆಲ್ಲುತ್ತಾ ಬಂದ ಕೃತಿಯೂ ಹೌದು. ಈ ಕೃತಿಯ ರಸಾಸ್ವಾದನೆಗೆ ಹಿಂದೆ ಲಭ್ಯವಿದ್ದ ಗಮಕ-ವಾಚನ-ವ್ಯಾಖ್ಯಾನಗಳ ವೈಭವ ಇಂದು ಅಪರೂಪ. ಸ್ವತಂತ್ರವಾಗಿ ಈ ಗ್ರಂಥದ ರಸಾಸ್ವಾದನೆಗೆ ತೊಡಗಿದರೆ ಅಲ್ಲಲ್ಲಿ ಅರ್ಥಕ್ಲಿಷ್ಟತೆಯ ಅಡ್ಡಗೋಡೆಗಳು ತಡೆದು ನಿಲ್ಲಿಸುತ್ತವೆ. ಕುಮಾರವ್ಯಾಸಭಾರತವನ್ನು ಸರಳಗನ್ನಡದಲ್ಲಿ ರಚಿಸಿರುವ ಕೆಲವು ಕೃತಿಗಳು ಬಂದಿವೆ ನಿಜ. ಅರ್ಥಕ್ಲಿಷ್ಟತೆಯಿರುವ ಸನ್ನಿವೇಶಗಳಲ್ಲಿ ಈ ಕೃತಿಗಳೂ ಮೌನವಹಿಸಿಬಿಡುತ್ತವೆ. ಮೂಲ ಹಾಗೂ ತಾತ್ಪರ್ಯ ಒಟ್ಟೊಟ್ಟಿಗೇ ಇದ್ದಾಗ ಸುಖವಾಗಿ ಕಾವ್ಯಾಸ್ವಾದನೆ ಮಾಡುವುದು ಸುಲಭವಾಗುತ್ತದೆ. ಈ ಸಂಗತಿಯನ್ನು ಮನಗಂಡು "ತಾತ್ಪರ್ಯಸಹಿತ ಕುಮಾರವ್ಯಾಸಭಾರತ'ವನ್ನು ಸಂಪಾದಿಸಿ ಪ್ರಕಟಿಸುವ ಯೋಜನೆಯನ್ನು ರೂಪಿಸುವ ಸಂದರ್ಭ ಒದಗಿಬಂತು.

ಸರಳವೆನ್ನಿಸಿದರೂ ಗಹನವೂ ವೈವಿಧ್ಯಯುತವೂ ಆದ ಸಾರವಿಚಾರಗಳನ್ನು ಒಳಗೊಂಡ ಸುಮಾರು ೮,೫೦೦ ಪದ್ಯಗಳ ಈ ಕೃತಿಗೆ ಪ್ರತಿಪದ್ಯಕ್ಕೂ ತಾತ್ಪರ್ಯ ಬರೆದು ಹೊಣೆಗಾರಕೆಯನ್ನು ನಿರ್ವಹಿಸಿಕೊಡಬಲ್ಲ ಸಮರ್ಥರ ಕುರಿತ ಶೋಧಕಾರ್ಯ ಶುರುವಾಯ್ತು. ಸುದೈವವಶಾತ್‌ ಸಫಲತೆ ನಮ್ಮದಾಯ್ತು. ಕುಮಾರವ್ಯಾಸಭಾರತದ ವಾಚನ-ವ್ಯಾಖ್ಯಾನಗಳಲ್ಲಿ ಪಾರಂಗತರಾಗಿದ್ದ ಶ್ರೀ ಶ್ರೀ ಶಂಕರಲಿಂಗ ಭಗವಾನ್‌ ಸರಸ್ವತಿ ಪರಮಹಂಸರ ಗರಡಿಯಲ್ಲಿ ಪಳಗಿದವರೂ ಹಿರಿಯ ಲೇಖಕರೂ ಘನವಿದ್ದಾಂಸರೂ ಕುಮಾರವ್ಯಾಸಭಾರತದ ಬಗ್ಗೆ ವಿಶೇಷವಾದ ಪರಿಣತಿ-ಪರಿಶ್ರಮ-ಪ್ರೀತಿಗಳನ್ನು ಹೊಂದಿದವರೂ ಆದ ಶ್ರೀ ಅ.ರಾ. ಸೇತುರಾಮರಾಯರು (ಅ.ರಾ.ಸೇ.) ಈ ಕಾರ್ಯಯೋಜನೆಯನ್ನು ಪೂರೈಸಿಕೊಡಲು ಸಮ್ಮತಿಸಿದರು. ಮಾತ್ರವಲ್ಲ, ಐದು ವರ್ಷಗಳ ಅವಧಿಯಲ್ಲಿ ನಿರಂತರವಾಗಿ ಪರಿಶ್ರಮವಹಿಸಿ ಈ ಕೃತಿಯನ್ನು ಸಂಪಾದಿಸಿ ಎಲ್ಲ ಪದ್ಯಗಳಿಗೂ ಸರಳಗದ್ಯದಲ್ಲಿ ತಾತ್ಸರ್ಯ ಬರೆದು ಸುಮಾರು ೯೦ ಪುಟಗಳ ಆಮೂಲಾಗ್ರ ಮಾಹಿತಿಯನ್ನೊಳಗೊಂಡ ಪ್ರಸ್ತಾವನೆ ಸಮೇತ ಪೂರೈಸಿಕೊಟ್ಟಿದ್ದಾರೆ.

 

ಕೃಪೆ  https://www.exoticindiaart.com/

 

ಪುಟಗಳು : 1306

Customer Reviews

No reviews yet
0%
(0)
0%
(0)
0%
(0)
0%
(0)
0%
(0)