Click here to Download MyLang App

ಕೋಳೂರು ಶಂಕರ ಕವಿಯ ಮಾಧವಾಂಕ ಚರಿತೆ (ಪ್ರಿಂಟ್ ಪುಸ್ತಕ)

ಕೋಳೂರು ಶಂಕರ ಕವಿಯ ಮಾಧವಾಂಕ ಚರಿತೆ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಎಫ್. ಟಿ. ಹಳ್ಳಿಕೇರಿ
ಮಾಮೂಲು ಬೆಲೆ
Rs. 360.00
ಸೇಲ್ ಬೆಲೆ
Rs. 360.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ದಕ್ಷಿಣ ಭಾರತದ ಭಾಷೆ ಸಾಹಿತ್ಯ ಮತ್ತು ಶಿಲ್ಪಗಳಲ್ಲಿ ಸತ್ಯೇಂದ್ರಚೋಳನ ಕಥೆ ಪ್ರಸಿದ್ಧವಾಗಿದೆ. ವಿಶೇಷವಾಗಿ ತಮಿಳು ಸಾಹಿತ್ಯದಲ್ಲಿ ಕುಡಿಯೊಡೆದ ಈ ಕಥೆ ಮುಂದೆ ಕನ್ನಡ ತೆಲುಗು ಮಲಯಾಳ ಸಾಹಿತ್ಯದ ಅನೇಕ ಕವಿಗಳ ಕಾವ್ಯಕ್ಕೆ ವಸ್ತುವಾಗಿದೆ. ಕನ್ನಡದ ಮಧ್ಯಕಾಲೀನ ಸಾಹಿತ್ಯ ಸಂದರ್ಭದಲ್ಲಿಯಂತೂ ಈ ಕಥೆ ವೈವಿಧ್ಯಮಯವಾಗಿ ಬೆಳವಣಿಗೆಯಾಗಿದೆ. ಹರಿಹರ(ಮನುಚೋಳ ರಗಳೆ), ಗುಬ್ಬಿ ಮಲ್ಲಣಾರ್ಯ (ಭಾವಚಿಂತಾರ), ಷಡಕ್ಷರದೇವರಾಜಶೇಖರ ವಿಳಾಸ), ಧೂಪದಹಳ್ಳಿ ಶಾಂತಕವಿ(ಸತ್ಯೇಂದಚೋಳ ಚಾರಿತ), ಕೋಳೂರು ಶಂಕರಕವಿ(ಮಾಧವಾಂಕ ಚರಿತೆ) ಮೊದಲಾದವರು ಈ ಕಥೆಯನ್ನಾಧರಿಸಿ ಕಾವ್ಯಗಳನ್ನು ರಚನೆ ಮಾಡಿದ್ದಾರೆ. ಮನುಷ್ಯನು ನ್ಯಾಯ ನೀತಿ ಧರ್ಮ ಸತ್ಯ ಸಾಧನಗಳಿಂದ ಪಾರಮಾರ್ಥಿಕ ಬದುಕನ್ನು ಪರಿಪೂರ್ಣವಾಗಿ ಅನುಭವಿಸುತ್ತಾನೆ ಎಂಬುದನ್ನು ಮಾಧವಾಂಕ ಚರಿತೆ ಚೆನಾಗಿ ತಿಳಿಸಿಕೊಡುತ್ತದೆ. ನಡುಗನ್ನಡ ಭಾಷೆ ಮತ್ತು ದೇಶೀಯ ಸೊಗಡಿನಿಂದ ಕೂಡಿದ ಈ ಕಾವ್ಯ, ಕವಿಯ ಸಮಕಾಲೀನ ಸಂದರ್ಭದ ಸಾಮಾಜಿಕ, ಚಾರಿತ್ರಿಕ ಮತ್ತು ಸಾಂಸ್ಕೃತಿಕ ಸಂಗತಿಗಳನ್ನು ಅನಾವರಣಗೊಳಿಸಿರುವುದನ್ನು ಓದುಗರು ಗಮನಿಸಬಹುದು. ಈವರೆಗೆ ಅಪ್ರಕಟಿತ ರೂಪದಲ್ಲಿದ್ದ ಕೋಳೂರು ಶಂಕರಕವಿಯ ಮಾಧವಾಂಕ ಚರಿತೆಯನ್ನು ಮೂರು ಹಸ್ತಪ್ರತಿಗಳ ನೆರವಿನಿಂದ ಪರಿಷ್ಕರಿಸಿದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಎಫ್.ಟಿ. ಹಳ್ಳಿಕೇರಿ ಅವರಿಗೆ ಹಾರ್ದಿಕ ಅಭಿನಂದನೆಗಳು.

ಡಾ. ಸ.ಚಿ. ರಮೇಶ
ಕುಲಪತಿ

ಪುಟಗಳು : 414

Customer Reviews

No reviews yet
0%
(0)
0%
(0)
0%
(0)
0%
(0)
0%
(0)