Click here to Download MyLang App

ಕರ್ನಾಟಕ ಜೈನಶಾಸನಗಳು ಸಂಪುಟ 5 (ಪ್ರಿಂಟ್ ಪುಸ್ತಕ)

ಕರ್ನಾಟಕ ಜೈನಶಾಸನಗಳು ಸಂಪುಟ 5 (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಕನ್ನಡ ವಿಶ್ವವಿದ್ಯಾಲಯ
ಮಾಮೂಲು ಬೆಲೆ
Rs. 600.00
ಸೇಲ್ ಬೆಲೆ
Rs. 600.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಕನ್ನಡ-ಕರ್ನಾಟಕ ಕಲಿಕೆಯ ಮುನ್ನಡೆ, ಅಧ್ಯಯನ ಮತ್ತು ಪ್ರಸಾರಕ್ಕಾಗಿ ಶ್ರೀ ಪಂಪಾ ವಿರೂಪಾಕ್ಷನ ನೆಲೆಯಾದ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿದೆ. ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸುವುದು, ಕನ್ನಡದ ಸಾಂಸ್ಕೃತಿಕ ಚಹರೆಗಳನ್ನು ವಿಸ್ತರಿಸುವ ಉದ್ದೇಶ ಹೊಂದಿದೆ. ಇಂದು ಬಹುಮುಖಿಯಾಗಿ ಜ್ಞಾನ ವಿಕಾಸವಾಗುತ್ತಿದ್ದು, ತಾಂತ್ರಿಕ ಶೋಧಗಳು ವಿಶೇಷವಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ವಿಶ್ವಾತ್ಮಕವಾಗಿ ಹರಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅದನ್ನು ಅರ್ಥ ಮಾಡಿಕೊಳ್ಳುವುದು, ಇತರರಿಗೆ ಅರ್ಥ ಮಾಡಿಸುವುದು, ಅದರ ಪ್ರಯೋಜನ ಪಡೆಯುವುದು, ಈ ಎಲ್ಲದರ ನಡುವೆಯೂ ನಮ್ಮ ದೇಸಿತನವನ್ನು ಹಸಿರಾಗಿಯೇ ಇರಿಸಿಕೊಳ್ಳುವುದು ನಮಗೊಂದು ಸವಾಲಾಗಿದೆ. ಕನ್ನಡ ವಿಶ್ವವಿದ್ಯಾಲಯ ಈ ಸವಾಲಿಗೆ ಮುಖಾಮುಖಿಯಾಗಲು ಬಯಸಿದೆ. ವಿಶ್ವವಿದ್ಯಾಲಯದ ವಿದ್ವಾಂಸರು ಹಾಗೂ ನಾಡಿನ ಹಿರಿಯ, ಕಿರಿಯ ವಿದ್ವಾಂಸರು ಕೂಡಿ ಅರಿವಿನ ತೇರನ್ನು ಎಳೆಯಬೇಕಾಗಿದೆ. ಜಾನವನ್ನು ಇನ್ನೂ ಹುಲುಸಾಗಿ ಬೆಳೆಸಬೇಕಾಗಿದೆ. ದಾಸೋಹ ಭಾವನೆಯಿಂದ ಅದನ್ನು ಹಂಚಬೇಕಾಗಿದೆ. ಅಂದರೆ ಬೋಧನೆ ಮತ್ತು ಶೋಧನೆಗಳನ್ನು ಶ್ರೀಸಾಮಾನ್ಯರ ಮನೆ ಮನಗಳಿಗೆ ತಲುಪಿಸುವ ಮತ್ತೊಂದು ಅಂಗವೇ ಪ್ರಸಾರಾಂಗ, ಈ ಪ್ರಸಾರಾಂಗದ ಮೂಲಕ ದೇಸಿ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಕಾಯಕ ಕನ್ನಡ ವಿಶ್ವವಿದ್ಯಾಲಯದಿಂದ ನಿರಂತರವಾಗಿ ನಡೆಯುತ್ತಿದೆ ಎಂಬುದು ನಮ್ಮ ಆಶಯವಾಗಿದೆ. 'ಕರ್ನಾಟಕ ಜೈನಶಾಸನಗಳು'- ನಮ್ಮ ವಿಶ್ವವಿದ್ಯಾಲಯದ 'ಜೈನ ಸಾಹಿತ್ಯ-ಸಂಸ್ಕೃತಿ ಅಧ್ಯಯನ ಕೇಂದ್ರದ ಮೂಲಕ ಜಾರಿಗೊಳ್ಳುತ್ತಿರುವ ಮಹತ್ವದ ಯೋಜನೆ, ಕರ್ನಾಟಕದಲ್ಲಿನ ಎಲ್ಲ ಜೈನಶಾಸನಗಳು ಸಂಶೋಧಕರಿಗೆ ಒಂದೆಡೆ ದೊರೆಯಬೇಕು ಹಾಗೂ ಅವು ಕರ್ನಾಟಕದ ಹೊರಗಿನ ಇತಿಹಾಸದ ಅಭ್ಯಾಸಿಗಳಿಗೂ ದೊರೆಯುವಂತಾಗಬೇಕೆಂಬುದು ಈ ಯೋಜನೆಯ ಮಹದಾಶಯ. ಅಂಥ ಒಂದು ಕನಸನು ಮೊದಲು ಕಂಡವರು, ಶ್ರವಣಬೆಳಗೊಳದ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, ಅದರ ರೂಪುರೇಷೆ ನಿರ್ಧರಿಸಿದವರು ನಾಡೋಜ ಡಾ. ಹಂಪನಾ ಅವರು, ಶಾಸನತಜ್ಞರಾದ ಡಾ. ದೇವರಕೊಂಡಾರೆಡ್ಡಿಯವರು ಮುಖ್ಯ ಸಂಪಾದಕತ್ವದಲ್ಲಿ ಅವರ ತಂಡ ಶ್ರಮವಹಿಸಿ ಈ ಸಂಪುಟಗಳನ್ನು ಸಿದ್ಧಪಡಿಸುತ್ತಿದೆ. ಇವರೆಲ್ಲರಿಗೂ ಕನ್ನಡ ವಿಶ್ವವಿದ್ಯಾಲಯ ಕೃತಜ್ಞತೆಯನ್ನು ಸಲ್ಲಿಸುತ್ತದೆ.


ಡಾ. ಸ.ಚಿ. ರಮೇಶ
ಕುಲಪತಿ

ಪುಟಗಳು : 690

Customer Reviews

No reviews yet
0%
(0)
0%
(0)
0%
(0)
0%
(0)
0%
(0)