Click here to Download MyLang App

ಕರ್ನಾಟಕ ಆಯಗಾರರ ಸಂಸ್ಕೃತಿ (ಪ್ರಿಂಟ್ ಪುಸ್ತಕ)

ಕರ್ನಾಟಕ ಆಯಗಾರರ ಸಂಸ್ಕೃತಿ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ವೀರೇಶ ಬಡಿಗೇರ
ಮಾಮೂಲು ಬೆಲೆ
Rs. 160.00
ಸೇಲ್ ಬೆಲೆ
Rs. 160.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ವಿಶ್ವವಿದ್ಯಾಲಯದ ವಿದ್ವಾಂಸರು ಹಾಗೂ ನಾಡಿನ ಹಿರಿಯ, ಕಿರಿಯ ವಿದ್ವಾಂಸರು ಕೂಡಿ ಅರಿವಿನ ತೇರನ್ನು ಎಳೆಯಬೇಕಾಗಿದೆ. ಜ್ಞಾನವನ್ನು ಇನ್ನೂ ಹುಲುಸಾಗಿ ಬೆಳೆಸಬೇಕಾಗಿದೆ. ದಾಸೋಹ ಭಾವನೆಯಿಂದ ಅದನ್ನು ಹಂಚಬೇಕಾಗಿದೆ. ಅಂದರೆ ಬೋಧನೆ ಮತ್ತು ಶೋಧನೆಗಳನ್ನು ಶ್ರೀಸಾಮಾನ್ಯರ ಮನೆ ಮನಗಳಿಗೆ ತಲುಪಿಸುವ ಮತ್ತೊಂದು ಅಂಗವೇ ಪ್ರಸಾರಾಂಗ, ಈ ಪ್ರಸಾರಾಂಗದ ಮೂಲಕ ದೇಸಿ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಕಾಯಕ ಕನ್ನಡ ವಿಶ್ವವಿದ್ಯಾಲಯದಿಂದ ನಿರಂತರವಾಗಿ ನಡೆಯುತ್ತಿದೆ ಎಂಬುದು ನಮ್ಮ ಆಶಯವಾಗಿದೆ. ಕರ್ನಾಟಕದ ಗ್ರಾಮ ಜೀವನದಲ್ಲಿ ಕೂಡುಕುಟುಂಬದ ಪ್ರತಿರೂಪವಾಗಿ ಆಯಗಾರರು ಮಹತ್ವದ ಪಾತ್ರ ವಹಿಸುತ್ತಾರೆ. ವಿಶೇಷವಾಗಿ ರೈತಾಪಿ ವರ್ಗದ ಅಂಗಸಂಸ್ಥೆಗಳಂತೆ ದುಡಿದ ಇವರ ಚರಿತ್ರೆ ಅಧ್ಯಯನ ಯೋಗ್ಯವಾಗಿದೆ. ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಆಯಗಾರರ ವೃತ್ತಿ ಸ್ವರೂಪ, ಆಯಗಾರ ಸಮುದಾಯಗಳು, ಅವರ ಲೋಕದೃಷ್ಟಿಯನ್ನು ಸಾಂಸ್ಕೃತಿಕವಾಗಿ ನಿರ್ವಚಿಸಿರುವುದು ಈ ಕೃತಿಯ ಆಶಯವಾಗಿದೆ. ಇಂಥ ವಿಶಿಷ್ಟ ಕೃತಿಯನ್ನು ರಚಿಸಿದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ವೀರೇಶ ಬಡಿಗೇರ ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕೃತಜ್ಞತೆಗಳು ಸಲ್ಲುತ್ತವೆ.



ಡಾ. ಸ.ಚಿ. ರಮೇಶ
ಕುಲಪತಿ

 

ಪುಟಗಳು : 184

Customer Reviews

No reviews yet
0%
(0)
0%
(0)
0%
(0)
0%
(0)
0%
(0)