Click here to Download MyLang App

ಅಂಬಿಕಾತನಯದತ್ತರ ಕನ್ನಡ ಮೇಘದೂತ ಒಂದು ಸಹಪಯಣ (ಪ್ರಿಂಟ್ ಪುಸ್ತಕ)

ಅಂಬಿಕಾತನಯದತ್ತರ ಕನ್ನಡ ಮೇಘದೂತ ಒಂದು ಸಹಪಯಣ (ಪ್ರಿಂಟ್ ಪುಸ್ತಕ)

printed book

ಪಬ್ಲಿಶರ್
ಡಾ. ಟಿ.ಎನ್. ವಾಸುದೇವಮೂರ್ತಿ
ಮಾಮೂಲು ಬೆಲೆ
Rs. 130.00
ಸೇಲ್ ಬೆಲೆ
Rs. 130.00
ಬಿಡಿ ಬೆಲೆ
ಇಶ್ಟಕ್ಕೆ 

ಗಮನಿಸಿ: ಮೊಬೈಲ್ ಆಪ್ ಮೂಲಕ ಕೊಳ್ಳುವಾಗ ನಿಮಗೆ ತೊಂದರೆ ಬರುತ್ತಿದ್ದಲ್ಲಿ, ಮೊಬೈಲ್/ಕಂಪ್ಯೂಟರ್ ಬ್ರೌಸರ್ ಬಳಸಿ www.mylang.in ಮೂಲಕ ಕೊಂಡುಕೊಳ್ಳಿ.

Attention: If you are facing problems while buying, please visit www.mylang.in from your mobile/desktop browser to buy

ಮರ್ತ್ಯದಲ್ಲಿ ಅಮರ್ತ್ಯವನ್ನು ಸವಿದ ಪ್ರತಿಭೆ ಕಾಳಿದಾಸನದು. ಭಾರತೀಯ ಸಂಸ್ಕೃತಿ ಇರುವವರೆಗೆ, ಅಷ್ಟೇ ಏಕೆ, ಜಗತ್ತಿನ ಸಾಹಿತ್ಯ ಸಂಸ್ಕೃತಿಗಳಿರುವವರೆಗೆ ಕಾಳಿದಾಸನು ಚಿರನೂತನವಾಗಿ ಬಾಳುವುದರಲ್ಲಿ ಸಂಶಯವಿಲ್ಲ.


- ಕುವೆಂಪು

 

ಅಂಬಿಕಾತನಯದತ್ತರು ಕನ್ನಡದಲ್ಲಿ ಒಂದು ವಿನೂತನ ಛಂದಸ್ಸನ್ನು ನಿರ್ಮಿಸಿ ಮೇಘದೂತವನು, ಮೂಲಕಿಂತ ಒಂದು ತೂಕ ಹೆಚ್ಚು ಎನಿಸುವಂತೆ ಭಾವಾನುವಾದ ಮಾಡಿ ಅನುವಾದ ಕ್ಷೇತ್ರದಲ್ಲಿ ಒಂದು ವಿಕ್ರಮವನ್ನೇ ಸಾಧಿಸಿದ್ದಾರೆ.


- ಕೆ. ಕೃಷ್ಣಮೂರ್ತಿ

 

ಕಾಮಿ ಯಕ್ಷನು ವಿರಹದಿಂದ ಕವಿಯಾಗುವನು. ಅವನ ಕಣ್ಣು ಚೆಲುವಿಗೆ ಕಣ್ಣಾಗುವುದು. ಅವನ ಹೃದಯ ರಸಕ್ಕೆ ನೆಲೆಯಾಗುವುದು. ಕಾಳಿದಾಸ ಈ ಮನಃಪರಿಪಾಕವನ್ನು ಬಹು ರಮ್ಯವಾಗಿ, ಧ್ವನಿಪೂರ್ಣವಾಗಿ ಚಿತ್ರಿಸಿದ್ದಾನೆ. ಧರ್ಮಾವಿರುದ್ಧವಾದ ಕಾಮದಲ್ಲಿ ಹುಟ್ಟಿದ ಕಾವ್ಯ ಭಕ್ತಿಯ ಸಂಕೇತವಾಗುವುದು.


- ದ.ರಾ. ಬೇಂದ್ರೆ


ಕವಿಯ ದಿವ್ಯ ಭವ್ಯ ಮಂಗಳ ಹೃದಯದಲ್ಲಿ ಜಗದ ಒಳಿತಿನ ಹಿರಿಬೆಳಕಿನ ಮಿಸುಕಾಟವೇ ಹಿಗ್ಗಿ ಕತ್ತಲೆಯನು, ಇಲ್ಲವಾಗಿಸಿದೆ. ಅದು ಈ ವಿಶ್ವದ ಬದುಕಿನ ಬವಣೆಯ ನೋವು, ನರಳಾಟವೆಂಬ ಸಾವನ್ನು ಸುಲಿಯುತ್ತ ಬಾಳಿನ ಆಂತರ್ಯದ ತಿರುಳನ್ನು ಬಾಳೆಯ ತೊಳಲುವಿನಂತೆ ತಾನೂ ಸವಿದು ಸಹೃದಯರಿಗೂ ನೀಡುವಂತಹುದಾಗಿದೆ. ಆ ಉನ್ನತ ಭಾವ ಕವಿಯ ಪ್ರತಿಭಾಕಿರಣದಲ್ಲಿ ಛಂದಃಪೂರ್ಣವಾಗಿ ಅಲಂಕಾರ ಸಾರದೊಡನೆ ಪ್ರಕಟವಾಗಿದೆ.


- (ಪ್ರಸ್ತಾವನೆಯಿಂದ)

 

ಪುಟಗಳು: 128

Customer Reviews

No reviews yet
0%
(0)
0%
(0)
0%
(0)
0%
(0)
0%
(0)